ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತೆ. [16 ನೆಯ ಗ್ರಂಥಾದಿಯಲ್ಲಿ ಬಸವಸ್ತುತಿ ಇದೆ. ಇದರಿಂದ ಕೆಲವು ಪದ್ಯಗ ಳನ್ನು ತೆಗೆದು ಬರೆಯುತ್ತೇವೆ.... ಬಸವಸ್ಸುತಿ ಘಟವನಖದಾಕಾಶದಂತುಟು | ಪಟವನಮದಿನ ಚಿತ್ರದಂತುಟು | ಸಟೆಯನಖದುರುಸತ್ಯದಂತುಟುಪಾಧಿಯಂ ನಹೂದು || ನಟಿಸಿ ತೋರುವ ದೀಪದಂತುಟು | ಕುಟಿಲವಾಯೆಯನಟರು ನಿಜದೊಳ್ | ಘಟಿಸಿದಮಲಬ್ರಹ್ಮಗುರುಬಸವಂಗೆ ಶರಣೆಂಬೆ || ಶಿಷ್ಯನಿಗೆ ಉಪದೇಶ ನೊಂದು ತಾಪತ್ರಯಗಳೆಂದವೆ | ಮುಂದುಗೆಟ್ಟಿಹ ಜಗವ ಕಾಣುತ | ಹಂದೆಯಂ ಹಾವಡರಿದಂತವಿವೇಕದಿಂ ತನ್ನ | ಬೆಂದ ತುಂದನಿಮಿತ್ತ ಸೆರಗಿ೦ | ಕೊಂದು ಕೂಗಿ ನಿರರ್ಥ ನಿರಯದೊ | ಳೊಂದಬೇಡೆಂದೈದೆ ಪೇದ ದೇಶಿಕೋತ್ತಮನು || ಕರ್ಮಕಪಟವ ನಂಬಿ ಪರಮನ | ವರ್ಮವರಿಯದೆ ವಾಗ್ವಿಲಾಸದಿ | ಬೊಮ್ಮವಾರ್ತೆಯ ನುಡಿದು ಶಿಶ್ಲೋದರಪರಾಯಣದ || ಧರ್ಮದಲಿ ನೀ ನಡೆದು ಹಮ್ಮಿನ | ಬಿಮ್ಮು ಮಿಗೆ ತಲೆಗೇ ಮಗನೇ || ಗಮ್ಮನಿರಿಯಡ ನಿರಯದೊಳೆಂದ ದೇಶಿಕನು || 3. ಕಲ್ಯಾಣೇಶ್ವರ ಇದು ಪರಿವರ್ಧಿನೀಸಮ್ಪದಿಯಲ್ಲಿದೆ; ಪದ್ಯ 102: “ಕಲ್ಯಾಣೇಶ್ವರನೆನಿ ಸುವ ಬಸವನ ಕಾರುಣ್ಯದಿಂ ಭಾವಿಸುತಿಹುದೆಂದನು ದೇಶಿಕನು” ಎಂಬುದ ರಿಂದ ಈ ಗ್ರಂಥದ ಕಲ್ಯಾಣೇಶ್ವರ ಎಂಬ ಹೆಸರಿಗೆ ಕಾರಣವು ಊಹಿಸಬ ಹುದಾಗಿದೆ, ಇದರಲ್ಲಿ-ಬಸವನ ಸಹಚರಿಯಾದ ನಂದಿನಿ ತನ್ನ ಕಿಂಕರ ನಾದ ವಿಚಿತ್ರಕನೆಂಬ ಗಣೇಶ್ವರನು ಸುಜ್ಞಾನಚರಿತ್ರನಾಗಲು ಮಾಡಿದ ಜ್ಞಾ ನಬೋಧೆಯನ್ನು ದೇಶಿಕನು ಶಿಷ್ಯನಿಗೆ ನಿರೂಪಿಸಿದಂತ ಹೇಳಿದೆ. ಗ್ರಂಥಾವ ತಾರದಲ್ಲಿ ಬಸವಸ್ತುತಿಯೂ ಬಸವಸಹಚರಿಯಾದ ನಂದಿನಿಯ ಸ್ತುತಿಯ ಇವೆ, ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ