ಶತಮಾಸೆ? ಗುರುಬಸವ. 86 ಈ ಗ್ರಂಥಕ್ಕೆ ಶಿವಯೋಗಾಂಗಭೂಷಣ ಎಂಬ ಹೆಸರು ಬರಲಿಕ್ಕೆ ಕಾರಣವು ಈ ಪದ್ಯದಲ್ಲಿ ಹೇಳಿದೆ ಸತ್ಯ ವಿರತಿ ಗತಲಾಲಸನಿಶ್ಚಲ | ಯುಕ್ತಿ ಮನೋಮತನಿರಸನವೆಚ್ಚದಿ | ನಿತ್ಯಸ್ವಪ್ರತ್ಯಕ್ಷತೆಸಂತೃಪ್ತಿಗಳೆ ಯಮಾದಿಗಳು || ಅತ್ಯುತ್ಸಾಹದೊಳಿವನನುದಿನ ನಿಜ | ಭಕ್ತಿ ಸಹಿತ ಭೂಪಿಸಿ ಶಿವನೊಳು ಸಂ | ವ್ಯಕ್ತದಲೇ ಬೆರಸುವ ಕಾರಣವಿದು ಯೋಗಾಂಗವಿಭೂಷಣವು || ಪದ್ಯಗಳು ಪ್ರಾಯಿಕವಾಗಿ ಎಂದನು ದೇಶಿಕನು, ಪೇಟಿದ ದೇಶಿಕನು, ಎಂದು ಮುಗಿಯುತ್ತವೆ. ಗ್ರಂಥಾಂತ್ಯದಲ್ಲಿ ಕೆಲವು ಅನುಷ್ಟುಪ್ ಶ್ಲೋಕ ಗಳೂ ಇವೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ಉದ್ದರಿಸಿ ಬರೆಯುತ್ತೇವೆ-- ಇತಿಹೆಯ ಕೋಶವನಬುಜಭವಾಂಡವನರಣಿಯ ಮೇರುಗಿರಿಯ ದಿಕ್ಷುಂಜವ | ಕರಸಂವಟಿಕೆಯನಂಬುನಿಧಿಯ ಚುಲುಕೋದಕಮಾತ್ರಕವಂ || ತರಣಿಯ ಖದ್ಯೋತವ ಗೋಷ್ಟದಮಂಧರಣಿಯ ಸಮವೆಂದೆನಿಸುವಮಹಿಮೆಯ | ಹರವರಿಯಿಂ ಸುಟಿದಾಡುವನಿಳೆಯೊಳಗೆಂದನು ದೇಶಿಕನು | ಹಸಿಯದೆ ಹುಸಿಯದೆ ಕುಸಿಯದೆ ನೆಸೆಯದೆ | ಹಸಗೆಡದಖಿಳರೊಳಗೆ ಕಾರುಣ್ಯಂ | ಮಸುಳಿಸದುದ್ರೇಕಿಸದೆ ವೃಧಾ ದೈನ್ಯದಿ ವಿಷಯಂಗಳೊಳು || ಪಸರಿಸಿ ಹರಿದಾಡದೆ ಲೌಕಿಕರಿಂ | ವಸನಾಗಿರದೆ ಮನಸ್ಸಂಸಾರದ | ಬೆಸುಗೆಯುಲಿದು ಸುಳಿಯುತ್ತಿಹನಿಳೆಯೊಳಗೆಂದನು ದೇಶಿಕನು || 2 ಸದ್ದು ರುರಹಸ್ಯ ಇದು ಭಾಮಿನೀಪಟ್ಟಿದಿಯಲ್ಲಿ ಬರೆದಿದೆ; ಉಪದೇಶ 9, ಪದ್ಯ 237. ಈ ಗ್ರಂಥದ ವಿಷಯವಾಗಿ ಕವಿ ಹೀಗೆ ಬರೆದಿದ್ದಾನೆ ವೇದದಂತುಟದಲ್ಲಿ ಶಾಸ್ತ್ರದ | ಹೋದ ಹೊಲಬಲ್ಲೆಲೆ ಪುರಾಣದ | ಗಾದೆಗಳ ಜಂಜಡದ ಜಾಡ್ಯದ ಜಿನುಗು ತಾನಲ್ಲ | ಆದರಿಸಿ ಕೇಳುವಡೆ ಪರಮಸ 1 ಮಾಧಶಾಂಭವಸತ್ಯಸತ್ಯ | ಗೋಧಲೀಲಲೋಲಶೀಲಾನ್ವಯರಹಸ್ಯವಿದು |
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೬೦
ಗೋಚರ