ಈ ಪುಟವನ್ನು ಪರಿಶೀಲಿಸಲಾಗಿದೆ
ಕರ್ಣಾಟಕ ಕವಿಚರಿತ. [15 ನೆಯ
ಗುರುಬಸವ, ಸು 1430 | ಈತನು ಶಿವಯೋಗಾಂಗಭೂಷಣ, ಸದ್ಗುರುರಹಸ್ಯ, ಕಲ್ಯಾಣೇ ಶ್ಟರ, ಸ್ವರೂಪಾಮೃತ, ವೃಷಭಗೀತೆ, ಅವಧೂತಗೀತೆ, ಮನೋವಿಜಯ ಕಾವ್ಯ ಈ ಗ್ರಂಥಗಳನ್ನು ಬರೆದಿದ್ದಾನೆ. ಗುರುಬಸವಾರ್ಯರ ವಚನ ಎಂಬ ಹಾಡಿನರೂಪವಾದ ಒಂದು ಗ್ರಂಥವು ದೊರೆಯುತ್ತದೆ. ಇದೂ ಏತತ್ಕವಿಕೃತವಾಗಿರಬಹುದೋ ಏನೋ ತಿಳಿಯದು. ಇವನು ವೀರಶೈವಕವಿ. ಮನೋವಿಜಯಕಾವ್ಯದ ಕೊನೆಯ ಗದ್ಯದಲ್ಲಿ “ಶಿವಯೋಗಿಜನಸೇವಿತಚರಣಾರವಿಂದ ಐಟ್ಸಲಜ್ಞಾನಪ್ರಭಾಪುಂ ಜರಂಜಿತಾ೦ತರಂಗ ವೀರಶೈವಮತಸ್ಥಾಪನಾಚಾರ್ಯನಪ್ಪ ಶ್ರೀಮದ್ಗುರು ಬಸವೇಶ್ವರಂ” ಎಂದು ಹೇಳಿರುವುದರಿಂದ ಈತನು ಬಹಳಪ್ರಸಿದ್ಧನಾದ ವೀರಶೈವಗುರುವಾಗಿದ್ದಂತೆ ತಿಳಿಯುತ್ತದೆ. ಚೆನ್ನಬಸವಪುರಾಣದ 63ನೆಯ ಸಂಧಿಯ 15,16,35ನೆಯ ಪದ್ಯಗಳಿಂದ ಇವನು ವಿಜಯನಗರದ ರಾಜನಾದ 2ನೆಯ ಮ್ರೌಢದೇವರಾಯನ (1419-1446) ಕಾಲದಲ್ಲಿ ಇದ್ದಂತ ತಿಳಿಯಬರುತ್ತದೆ. ಇವನ ಕಾಲವು ಸುಮಾರು 1430 ಆಗ ಬಹುದು, ಇವನಗ್ರಂಥಗಳು ಇವನ 7 ಗ್ರಂಥಗಳು ಸಪ್ತಕಾವ್ಯವೆಂದು ಪ್ರಸಿದ್ಧವಾಗಿವೆ. ಎಲ್ಲವೂ ವೀರಶೈವವೇದಾಂತಪ್ರತಿಪಾದಕವಾಗಿಯೂ ಗುರುಶಿಷ್ಯಸಂವಾದರೂಪವಾ ಗಿಯೂ ಇವೆ. ಒಟ್ಟು 1243 ಪದ್ಯಗಳಿವೆ. ಈ ಗ್ರಂಥಗಳಲ್ಲಿ 1 ಶಿವಯೋಗಾಂಗಭೂಷಣ ಇದು ಪರಿವರ್ಧಿನೀ ಷಟ್ಪದಿಯಲ್ಲಿ ಬರೆದಿದೆ, ಸಂಧಿ 6, ಪದ 278. ಈ ಗ್ರಂಥದಲ್ಲಿ ಯೋಗಾಭ್ಯಾಸಕ್ರಮ, ಯೋಗಾಸನ, ಮುಂತಾದ ವಿಷಯಗಳು ಹೇಳಿವೆ. ಇದರ ಉತ್ಕೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ: ಶ್ರುತಿವಸಿತೆಯ ಮುಖಗನ್ನಡಿ ಶಾಸ್ತ್ರ | ಪ್ರತತಿಯ ನಿಲುಕಡೆ ತರ್ಕ೦ಗಳ ಸ | ನ್ಮತ ನಿಖಿಲಾಗಮತತ್ವರಹಸ್ಯಂಗಳ ಘನಚೇತನವು || ಸ್ಮೃತಿಗಳ ಮುದ ಪೌರಾಣಂಗಳ ನಿಜ | ಮತಿಯಖಿಲಾದ್ಯರ ವಚನಂಗಳ ನಿ | ಶ್ಚಿತಮತವೀಯೋಗಾಂಗವಿಭೂಷಣವೆಂದನು ದೇಶಿಕನು ||