ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಮುರಿಗೆದೇಶಿಕೇಂದ್ರ. 291

               ಮುರಿಗೆದೇಶಿಕೇಂದ್ರ. ಸು. 1560 
     ಈತನು ರಾಜೇಂದ್ರವಿಜಯವನ್ನು ಬರೆದಿದ್ದಾನೆ. ಇವನು ವೀರ ಶೈವಕವಿ, ಮುರಿಗೆಯಮಠದ ಸ್ವಾಮಿಯಾಗಿದ್ದಂತೆ ತೋರುತ್ತದೆ. ಈತನು ತನ್ನ ಗ್ರಂಥದಲ್ಲಿ ಹೆಸರನ್ನು ಹೇಳಿಕೊಂಡಿಲ್ಲ. ರಾಜೇಂದ್ರವಿಜಯಂ “ಪ್ರ ಭುರಾಜಂ ಮುರಿಗೆದೇಶಿಕೇಂದ್ರನಾಗಿ ಬಂದು ನಿರೂಪಿಸಿದುದು” ಎಂಬ ಒಂದು ಹಳೆಯ ಓಲೆಯ ಪ್ರತಿಯಲ್ಲಿರುವ ಲೇಖಕನ ಉಕ್ತಿಯಿಂದ ಈತನ ಹೆಸರು ಗೊತ್ತಾಯಿತು. ಇವನು ಪ್ರಭುಲಿಂಗದಕಂದ ಮುಂತಾದ ಗ್ರಂಥಗಳನ್ನು ಬರೆದಿರುವ ಮುರಿಗೆಯಶಾಂತವೀರನೇ (ಸು. 1530) ಆಗಿರಬಹುದೋ ಎಂಬ ಸಂದೇಹವುಂಟಾಗಬಹುದು. ಆದರೆ ಹಾಗೆ ನಾಮನಿರ್ದೇಶವಿಲ್ಲದೆ ಇರುವುದರಿಂದ ಕವಿ ಅವನಿಗಿಂತ ಈಚೆಯವನಾಗಿ ಸುಮಾರು 1560 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ.
   ಇವನ ಗ್ರಂಥ
                ರಾಜೇಂದ್ರವಿಜಯ 
   ಇದು ಚಂಪೂರೂಪವಾಗಿದೆ, ಪ್ರಕರಣ 9, ಸದ್ಯ 753. ಇದಕ್ಕೆ  ಹಮ್ಮಿಾರಕಾವ್ಯ, ಮನುರಾಜನ ಕಾವ್ಯ ಎಂಬ ಹೆಸರುಗಳೂ ಉಂಟು. ಇದರಲ್ಲಿ ಮಲಪ್ರಹಾರಿಯ ತೀರದಲ್ಲಿರುವ ಹಮ್ಮಿಾರಪುರ ಅಥವಾ ಪಟ್ಟಶಿಲಾ ಪುರ (ಪಟ್ಟದಕಲ್ಲು) ಎಂಬ ನಗರಕ್ಕೆ ದೊರೆಯಾದ ತ್ರೈಲೋಕ್ಯಚೂಡಾ ಮ‌ಣೆಯ ಮಗ ಹಮ್ಮಿಾರನ ಚರಿತವು ಹೇಳಿದೆ. ಕಧಾನಾಯಕನಿಗೆ ರಾ ಜೇಂದ್ರ, ಮನುರಾಜ, ಅನಿಮಿಷೇಂದ್ರ ಎಂಬ ಹೆಸರುಗಳೂ ಉಂಟು. ಪೂರ್ವದಲ್ಲಿ ಚೆನ್ನಬಸವನು ಶರಣರಿಗೂ, ಪ್ರಭುರಾಜನು ಗೊಗ್ಗಯ್ಯ, ಸಿದ್ದರಾಮ, ಬಸವ ಇವರುಗಳಿಗೂ ಹೇಳಿದ ಈ ಕಥೆಯನ್ನು ಕಾವ್ಯವಾಗಿ ಬರೆದಂತೆ ಕವಿ ಹೇಳುತ್ತಾನೆ. ಕಧಾನಾಯಕನ ಮತ್ತು ಬಿಜ್ಜಳನ ಪರಂಪರೆ ಹೀಗೆ ಹೇಳಿದೆ-
  ನವನಂದರುಂ ದಶಗುಸ್ತರುಂ ಎಂಶತಿಮೌರಿಗಳುಂ ಸಪ್ತವಿಂಶತಿರಾಜೇಂದ್ರರುಂ ವಿಂಶತಿಚಾಳೋಕ್ಯಚಕ್ರವರ್ತಿಗಳವರನ್ವಯೋದ್ಧರಣ ತ್ರೈಲೋಕ್ಯಚೂಡಾಮಣಿರಾಜ ಸಂತಾನಮನುರಾಜಂ.
  ಗೋಹಿಲರಾಜರಣುಗಂ ವೀರಬಿಜ್ಜಳಂ ತತ್ಕು ಮಾರಕಂ ಹೆಮ್ಮಡಿರಾಯಂ ತದಾ ತ್ಮಜಂ ಪೆರ್ಮಡಿರಾಯಂ ತನ್ನಂದನಂ ಚಾಳೋಕ್ಯಂ ತತ್ಪುತ್ರಂ ಬಿಜ್ಜಳಂ.