ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29ಂ [le ನಯ ಕರ್ಣಾಟಕ ಕವಿಚರಿತೆ. ತನ್ನ ಪರಮಗುರು ಅಲಿತಕೀರ್ತಿ, ಗುರು ಶಾಂತಕೀರ್ತಿ, ಸರಸ್ವತಿ, ಪದ್ಮಾ ವತಿ, ಕೂಷ್ಮಾಂಡಿನಿ, ಸರ್ವಾಹ್ಣಯಕ್ಷ ಇವರುಗಳನ್ನು ಕ್ರಮವಾಗಿ ಸ್ಮರಿಸಿದ್ದಾನೆ, ಆಶ್ವಾಸಗಳ ಅಂತ್ಯದಲ್ಲಿ.... - ಇದು ವಿದಿತವಿವಿಧಪ್ರಬಂಧವನವಿಹಾರಪರಿಣತ ಜಿನವದನಕುಲಶೈಲೋಚ್ಚಯೋ ದ್ಭೂಪ್ರವಚನಗಂಗಾತಟೋಪರಂಜತ್ಪುಜಾಯಮಾನಾನೂನಪುಣ್ಯಸೈಕತಪ್ರಿಯ ವಿ ಬುಧಜನಸ್ತುತ್ಯಸತ್ಕೂಜಿತಪ್ರಕರ ಕವಿರಾಜಹಂಸಬಾಹುಬಲಿಕವಿವಿರಚಿತಮಪ್ಪ ನಾಗಕು ಮಾರಚರಿತಪುರಾಣದೊಳ್ ಎಂಬ ಗದ್ಯವಿದೆ. ಗ್ರಂಧಾಂತ್ಯಗದ್ಯದಲ್ಲಿ ಮಾತ್ರ ಬಾಹುಬಲಿಕವಿ ಎಂಬ ಸ್ಥಾನದಲ್ಲಿ ವರ್ಧಮಾನಕವಿ ಎಂದಿದೆ.

 ಕರ್ಣಾಟದೇಶದಲ್ಲಿ ಕುಂದಾದ್ರಿಯಬಳಿ ಇರುವ ಸರೋವರದ ದಕ್ಷಿಣತೀರದ ಪಾರ್ಶ್ವಜಿನಬಸ್ತಿಯ ಮುಂದಣ ಕಂಭದಮೇಲಿರುವ ಬ್ರಹ್ಮದೇವನು ಈ ಕೃತಿಗೆ ನಿರ್ವಿಘ್ನದಾಯಕನು ಎನ್ನು ತ್ತಾನೆ.

ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ--- ಕವಿ | ಚಿಪ್ಪಿನೊಳಿಹ ಮುತ್ತು ವಸ್ತುಕ ವಣ೯ಕ | ಚಿಪ್ಪ ಕಳೆದು ಸರಗೆಯ್ದ || ಸುಪ್ಪಾಣಿಮುತ್ತಿನ ಹಾರವೆಂದೆನಿಪೊಂ | ದೊಪ್ಪದೋರಿದೊಡವ ಕವಿಯೇ | ಸ್ತ್ರೀವರ್ಣನೆ ಚಿತ್ರ ಜರತಿದೇವಿಯರಾಡುವ ಪೊನ್ನ | ನೆತ್ತದ ಹಲಗೆಯೊ ಮೇಣು | ಎತ್ತಿ ಬಿಚ್ಚಿದ ಬೀಸಣಿಗೆಯೊ ತಾನೆನಿ | ಸಿತ್ತು ನುಣ್ಬೆನ್ನುಮಾನಿನಿಯ || ಉಡದೆ ತೊಡದೆ ಸೊಲಿಪ ಕಡುಚೆಲ್ವನು | ಮಡಗಿದ ಬಿದಿ ತನ್ನೊಳೆಂದು | ಮಡದಿಮಣಿಯ ನುಣ್ಣೆನ್ನು ಬಿದವಯವ | ದೊಡನೆ ಸೆಣಸಿ ಮಲೆತಿಹುದು || ಮೊಗಚಂದಿರನಿಗೊಪ್ಪಂಬೆತ್ತ ವಟಫಲ | ಮೊಗಲಕ್ಷ್ಮಿಗೆ ರನ್ನದೊಡವು | ಮೊಗರಸವಾರ್ಧಿಗೆ ವಿದ್ರುಮಲತೆಯೆನ | ಸೊಗಯಿಪುದವಳ ಚೆಂದುಟಿಯು | ಚಂದಿರ ಪಾಲ್ಗಡಲಿಂ ಬರ್ಪಂದೊಡ | ವಂದ ಮುತ್ತುಗಳೊ ಮೇಣಮೃತ | ಬಿಂದುಗಳ್ ಕರಿನವಾಂತುವೊ ತಾವೆನಿಸಿಹು | ವಿಂದುಮುಖಿಯ ರದನಗಳು || ಮೊಗದಾವರೆಗೆ ಮೋಹಿಸಿ ಬಂದು ಸಂಪಗೆ | ಮುಗುಳೆಂಬವಳ ನಾಸಿಕವ | ಮಿಗೆ ಕಂಡು ಸೆರಿಸಾರ್ದ ಮರುದುಂಬಿಗಳೆನೆ|ಸೊಗಯಿಸಿಹುವು ಪಬ್ತಿಗುರುಳು!!

           ________