ಶತಮಾನ] ಬಾಹುಬಲಿ 289 ಬಿರುದುಗಳಿದ್ದಂತೆ ತಿಳಿಯುತ್ತದೆ. ಪೂರ್ವಕವಿಗಳನ್ನು ಈ ಪದ್ಯಗಳಲ್ಲಿ ಸ್ತುತಿಸಿದ್ದಾನೆ ಭೇದಿಸಿ ಸತ್ಕಧೆಯನು ಕನ್ನಡಕೆ ತಾ | ನಾದಿಗನೆನಿಸಿ: ಲೋಕದೊಳು | ಆದಿತೀರ್ಧೇಶಕಥೆಯ ವಿಸ್ತಾರವ ಮಾಡಿ | ದಾದಿಹಂಪನ ಪೊಗರುವೆನು || ವಿಬುಧಜನಸ್ತುತಶ್ರೀವೀರದೋರನ | ಸಭೆಗೆ ಮಂಗಳಲಕ್ಷ್ಮಿಯೆನಿಪ || ಶುಭಗುಣಚರಿತೆ ಕಂತಿಕೆಯರ ಪೊಗಳ್ವೆ ನಾ | ನಭಿನವವಾಗ್ದೇವಿಯರ || ಚಂದ್ರಜಿನನ ಕಧಾರಸವಾರ್ಧಿ ವರ್ಧನ | ಚಂದ್ರನೆನಿಸಿದಗ್ಗಳನ | ರುಂದ್ರಕಲೆಗಳೆನ್ನೊಳು ತೋರ್ಕೆ ನಿಜಯಶ | ಶ್ಚಂದ್ರಿಕೆ ಪಸರಿಸೆ ಜಗವ | ಸುಡಿಸಿ ಕಾದಂಬರಿಯನು ಲೀಲಾವತಿ | ಗಿಡಿಸಿ ಕಪ್ಪನು ಕೀರ್ತಿ ಜಗವ | ಎಡೆಗೊಂಡ ನೇಮಿಚಂದ್ರನ ಚಮತ್ಕೃತಿ ಒಂ|ದೆಡೆಗೊಳ್ವುದೆನ್ನ ಚಿತ್ತದೊಳು || ಜನ್ನನೊದವು ಗುಣವರ್ಮನ ಚಾತುರ್ಯ | ರನ್ನನ ಗುಣ ಪೊನ್ನನಿಂಪು | ಎನ್ನಯ ಮತಿಮಣಿದರ್ಪಣವನು ಪ್ರ | ಸನ್ನಾ ಕೃತಿಯ ವೈದಿಸುಗೆ | ಜ್ಯೋತಿಷವಿದ್ಯೆಗೆ ಮೊದಲಿಗ ಸಲೆ ವಾದಿ ! ವ್ರಾತಭಯಂಕರನೆನಿಪ ! ಖ್ಯಾತಿಗೆ ನೆಲೆಯಾದ ಶ್ರೀಧರಾಚಾರ್ಯರ | ಪ್ರೀತಿ ಮಿಗೆ ಬಲಗೊಂಬೆ | ಇವನ ಗ್ರಂಥ ನಾಗಕುಮಾರಕಥೆ. ಇದು ಸಾಂಗತ್ಯದಲ್ಲಿ ಬರೆದಿದೆ , ಆಶ್ವಾಸ 8, ಸಂಧಿ 32, ಪದ್ಯ 3600, ಗ್ರಂಥಪ್ರಮಾಣ 6000, ಅಲ್ಲಲ್ಲಿ ಕೆಲವು ವಚನಗಳೂ ಇವೆ. ಇದರಲ್ಲಿ ಹಣ ಹೊನ್ನು ತೃಣವೆಂದು ಬಗೆದು ಕರ್ಮವ ಕೆಡಿಸಿ ಒಂದುಪವಾಸಫಲ ದಿಂದ ಮೋಕ್ಷಸಂಪದವ ಪಡೆದ ಮಹಾತ್ಮನಾದ ನಾಗಕುಮಾರನ ಕಥೆ ಹೇಳಿದೆ. ಇದರ ಉತ್ಕೃಷ್ಟತೆಯನ್ನು ಕವಿ ಈ ಭಾಗದಲ್ಲಿ ಹೇಳಿದ್ದಾನೆ. ಇದು ಮಹಾಪುಣ್ಯಪುರುಷನ ಚರಿತ್ರ ಮ | ತ್ತಿದು ಭವವಾರ್ಧಿಗೆ ಭೈತ್ರ ! ಇದು ಪುಣ್ಯಸಸ್ಯಂಗಳಿಗೆ ಸುಕ್ಷೇತ್ರ ತಾ | ನಿದ, ಕರ್ಮಭೂಜಲವಿತ್ರ || ಪೊಸದೇಸಿಯ ನೆಲೆವೀಡು ರಸಿಕರ ಕರ್ಣರಸಾಯನ. ಗ್ರಂಥಾದಿಯಲ್ಲಿ ನೇಮಿಜಿನಸ್ತುತಿ ಇದೆ. ಬಳಿಕ ಕವಿ ಸಿದ್ಧಾದಿಗಳು, ಪರಮಪುರಾಣಕಥೆಗಳ ವಿಸ್ತರಿಸಿದ ಎರಡನೆಯ ಗಣಧರನೆನಿಪ ಕವಿಪರ, ಮೇಷ್ಠಿ, ಕುಮುದೇಂದು, ಶ್ರೀಧರಾಚಾರ್ಯ, ಅಕಳಂಕ, ಪೂಜ್ಯಪಾದ 37
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೭೪
ಗೋಚರ