ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 288 ಕರ್ಣಾಟಕ ಕವಿಚರಿತೆ - [16 ನೆಯ ರತಿಯ ಧ್ಯಾನಕ್ಕೆ ರಕ್ಷಕನೆನಿಸಿ ಕೆಲವನೆಸಿಂಹಾಸನದೊಳು ಅರಿರಾಯರಗಂಡರದಾವಣಿ ತೆಂಕಣರಾಯ ಜಿನಭಕ್ತ ಭೈರವೇಂದ್ರನು ಆಳುತ್ತಿದ್ದನು. ರಾಜನ ಸಭೆಯಲ್ಲಿ ಲಲಿತ ಕೀರ್ತಿ ಪುರಾಣದ ಕಥೆಯನ್ನು ಹೇಳುತ್ತಿರುವಾಗ ಶ್ರೀಪಂಚಮಿಕಥೆಯ ಪ್ರಸ್ತಾವ ಬರಲು ಕವಿಯ ಮೊಗವನ್ನು ನೋಡಿ ಇದನ್ನು ಚರಿತೆಯಮಾಡು ಎನಲು ಕವಿ ಅರಸನ ಮತ್ತು ಲಲಿತಕೀರ್ತಿಯ ಆಜ್ಞಾನುಸಾರವಾಗಿ ಶ್ರೀಪಂಚಮಿಕಥೆಯನ್ನು ವಿಸ್ತ ರಿಸಿ ಹೇಳಿದನು. - ಬಾಹುಬಲಿ ಈ ಗ್ರಂಥವನ್ನು ಪೂರ್ತಿಯಾಗಿ ಬರೆಯಲಿಲ್ಲ. ಗ್ರಂಥ ಪೂರ್ತಿ ಯಾಗುವುದರೊಳಗೆ ಅವನು ಮೃತನಾಗಲು ಮತ್ತೊಬ್ಬ ಕವಿ ಗ್ರಂಥವನ್ನು ಪೂರೈಸಿ ದಂತೆ ಗ್ರಂಧಾಂತ್ಯದಲ್ಲಿರುವ ಧರಣಿಯೊಳೀಕೃತಯ ದೋರ್ಬಲಿಕವಿ ತಾನು | ವಿರಚಿಸಿ ತುದಿಯೊಳಂತರಿಸಿ | ತರಳನಹುದು ನಾನು ನಾಯಕಾತಿಶಯಬಿ | ತ್ತರಿಸಿದೆನಿದು ಪೂರ್ತಿಯಾಗೆ | ಇದು ಪುಣ್ಯ ಕಥೆಯಂತರಿಸಿತೆಂದಾನು ಪೆಳಿದೆನು ಎಂಬ ಭಾಗದಿಂದ ತಿಳಿಯುತ್ತದೆ. ಆಶ್ವಾಸಗಳ ಕೊನೆಯಲ್ಲಿರುವ ಗದ್ಯಗಳಲ್ಲಿ ಬಾಹುಬಲಿ ಕೃತ ಎಂದಿದೆ; ಗ್ರಂಧಾಂತ್ಯದ ಗದ್ಯದಲ್ಲಿಮಾತ್ರ ವರ್ಧಮಾನಕೃತ ಎಂದಿದೆ. ಮೇಲೆ ಉದಾಹರಿಸಿರುವ ಭಾಗದಿಂದಲೂ ಗ್ರಂಧಾಂತ್ಯ ಗದ್ಯದಿಂದಲೂ ಗ್ರಂಥಪೂರ್ತಿಮಾಡಿ ದವನು ವರ್ಧಮಾನನೆಂದೂ ಇವನು ಬಹುಶಃ 'ಬಾಹುಬಲಿಯ ಮಗನಾಗಿರಬಹುದೆಂದೂ ಇವನು ಬರೆದ ಭಾಗವು ನಾಯಕಾತಿಶಯವೆಂದೂ ತಿಳಿಯುತ್ತದೆ. ಮೇII ಪಾರಕರು: ನಾಗಕುಮಾರಕಥೆಯನ್ನು ಬಾಹುಬಲಿ ಶಕ 1507 ತಾರಣದಲ್ಲಿ-ಎಂದರೆ 1584 ರಲ್ಲಿ ಮುಗಿಸಿದನು ಎಂದು ಹೇಳುತ್ತಾರೆ. ಅವರು ಆವುದೋ ಒಂದು ಓಲೆಯಪ್ರತಿಯನ್ನು ನೋಡಿ ಹೀಗೆ ಹೇಳಿರಬಹುದು ಗ್ರಂಥಪೂರ್ತಿ ವರ್ಧಮಾನನಿಂದ ಆಗಿರುವುದರಿಂದ ಈ ಕಾಲವು ವರ್ಧಮಾನನದಾಗಬಹುದು. ಬಾ ಹುಬಲಿ ಈ ಕಾಲಕ್ಕೆ ಸ್ವಲ್ಪಹಿಂದೆ ಇದ್ದಿರಬೇಕು; ಸುಮಾರು 1560 ರಲ್ಲಿ ಇದ್ದಿರ ಬಹುದು. ಇವನು ಹೇಳುವ ಶೃಂಗೇರಿಯ ನರಸಿಂಹಭಾರತಿ 1557 ರಿಂದ 1573 ರ ವರೆಗೆ ಪಟ್ಟದಲ್ಲಿದ್ದ ಸ್ವಾಮಿಯಾಗಿರಬೇಕು ಇವನಿಗೆ ಕವಿರಾಜಹಂಸ, ಸಂಗೀತಸುಧಾಬ್ಧಿಚಂದ್ರಮ ಎಂಬ

I Indian Antiquary, 1911, 46.