ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

302 ಕರ್ಣಾಟಕ ಕವಿಚರಿತೆ [27 ನೆಯ ಸ್ತರದುರಾಶಾವಾರಿಭರಿತಕಾಸಾರಮಂ ಕೆಡಿಸಿಯಸೃತಫಲಂಗಳಂ || ಕರಮೆ ನಾಶಂಗೈದು ವಿಷಯಕುಸುಮಂಗಳಂ | ಕುರಿಸದಂತೆಸಗಿ ತೋಂಟದ ರಾಯ ನೆನಿಸಿದ | ಚ್ಚರಿಯ ಚರಿತಂ ಸಿದ್ಧಲಿಂಗೇಶನೆಮಗೀಗೆ ಸುರುಚಿರೇಷ್ಟಾರ್ಧಫಲಮಂ | ವಸಂತ ಕೋಗಿಲೆಗಳನುರಾಗದಿಕ್ಕೆ ನುಡಿವಕ್ಕಿಗಳ | ಭೋಗದಾಲಯಮಳಿವಿತಾನಂಗಳತುಳಸುಖ | ಸಾಗರಂ ರಾಯಂಚೆಗಳ ಸಮಂಚಿತಸೌಖ್ಯ ಶಾಲೆ ಚಂದಿರನ ಚೆಲ್ವು | ಪೂಗಣೆಯನುರುಜಯಶ್ರೀವಿಲಾಸಂ ವಿರಹಿ | ಪೂಗದ ಮನೋಗದಂ ತಂಬೆಲರ ಸೈಪು ಚೈ | ತ್ರಾಗಮಂ ಮದನನುದ್ಯೋಗಮಂ ಪದೆದುರ್ವಿಸುತ್ತಗುರ್ವಿ೦ ಬಂದುದು || ಸೂರ್ಯಾಸ್ತ ಇನನಸಜಯಂಬಡೆದನರಿರಾಜನೇಛಿತ್ಗಿಯಿಂ || ಮನೆವಾಛಿತ್ತಿಗೈವುದನುಚಿತಮೆಂದು ನೊಂದು ಕಮ | ಲಿನಿ ತುಂಬಿಯೆಂಬವಿಷದುರುಳಿಯಂ ನೂಣೆದು ಪರವಶದೆ ಕಣ್ಮುಚ್ಚಿದಳೆನೆ | ವನಜಂಗಳಳಿವೆರಸಿ ಮುಗಿದುವರಸನ ಬರವಿ | ಗನುನಯದೆ ಕಳೆಯೇ ನಲಿವಂತೆ ಕುಮುದಂಗ | ಳನುರಾಗಮಾಂತು ವಿಕಸಿತಮಾಗಿ ಕಾಂತಿವೆತ್ತಿರ್ದುವಾಕಾಲದಲ್ಲಿ | - ಸ್ತ್ರೀವರ್ಣನೆ ಚೆಂದುಟಿಯ ಚೆಂಬೊನ್ನ ಬೊಂಬೆ ವಿಸಟಂಬರಿವ | ಕಂದರ್ಪನಲಗು ಕಂತುವಿನ ಕೈಪಿಡಿ ಜವ್ವ | ನಂದಳೆದ ಸಿಂಗರದ ಸಿರಿ ಸೊಬಗಿನಾಗರಂ ಭೋಗಿಗಳ ಭಾಗಧೇಯಂ | ಸಂದಣಿಪ ಸಂತಸದ ಬೀಡು ಬಿನದದ ನಾಡು | ಕುಂದಿಲ್ಲದೈಸಿರಿಯ ಗೊತ್ತು ಮೋಹದ ಬಿತ್ತು | ವೆಂದೆನಿಸಿ ಪೆಂಪುವೆತ್ತಿರ್ದಳಾನಾರಿ 'ಕೋವಿದಜನಮನೋವಿಹಾರಿ |