ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

101 ತಳಮಾನೆ ವೇಣುಗೋಪಾಲವರಪ್ರಸಾದ ಸಿದನೆಂದೂ ತಿಳಿಯುತ್ತದೆ ಮದರಾಸ್ ಪ್ರಾಚ್ಯ ಕೋಶಾಯದಲ್ಲಿರುವ ಈ ಗ್ರಂಥದ ಪ್ರತಿಯಲ್ಲಿ ಕವಿಯ ಹೆಸರು ಮೇಲೆ ಹೇಳಿರುವಹಾಗೆ ಕೊಟ್ಟೆಗೆ. ಮೈಸೂರಲ್ಲಿ ಅಚ್ಚಾಗಿರುವ ಪುಸ್ತಕದಲ್ಲಿ ಕವಿಯ ಹೆಸರಿಲ್ಲ, ಗ್ರಂಥಾಂತ್ಯ ದಲ್ಲಿ ,ಚಿಕದೇವರಾಜಂ ಆಳುತಿರ್ಪo' ಎಂಬುದರಿಂದ ಕವಿ ಆ ರಾಜನ ಆಳಿಕೆಯಲ್ಲಿ (1672-1704) ಇದ್ದ ವನೆಂಬುದು ವ್ಯಕ್ತವಾಗುತ್ತದೆ. ಇವನು ಸುಮಾರು 1680 ರಲ್ಲಿ ಇದ್ದಿರಬಹುದು, ಪೂರ್ವಕವಿಗಳಲ್ಲಿ ವಾಲ್ಮೀಕಿ, ವ್ಯಾಸ, ಕಾಳಿದಾಸ, ಬಾಣ ಇವರುಗಳನ್ನು ಸ್ಮರಿಸುತ್ತಾನೆ. ಯಾದವಗಿರಿಮಾಹಾತ್ಮವೇ ಮೊದಲಾದ ಗ್ರಂಥಗಳನ್ನು ರಚಿಸಿದ ತಿಮ್ಮ ಕವಿಯ ಗೋಪಾಲಪಾದವನೇಚಾತಚ್ಛಂಗಂ' ಎಂದು ಹೇಳಿಕೊಂಡಿರುವುದರಿಂದಲೂ ಈ ಗ್ರಂಥದ ಕೆಲವು ಪದ್ಯಗಳು ಯಾದವಗಿರಿಮಾಹಾತ್ಮ ದಲ್ಲಿಯೂ ದೊರೆ ವುದರಿಂದ ಲೂ ಅವನೇ ಈ ಗ್ರಂಧವನ್ನೂ ಬರೆದಿರಬಹುದೆಂಬ ಸಂದೇಹಕ್ಕೆ ಅವಕಾಶವಿದೆ, ಆದರೆ ಹೆಸರುಹೇಳಿಕೊಳ್ಳದೆ ಇರುವುದರಿಂದ ಇದು ಹೀಗೆಯೇ ಎಂದು ನಿಶ್ಚಯಿಸುವ ವಿಷಯ ದಲ್ಲಿ ಸ್ವಲ್ಪ ಹಿಂದೆಗೆಯಬೇಕಾಗಿದೆ. ಇವನ ಗ್ರಂಥ ಚಿಕ್ಕದೇವರಾಜವಂಶಾವಳಿ ಇದು ಚಂಪೂರೂಪವಾಗಿದೆ; ಇದರಲ್ಲಿ 138 ಪದ್ಯಗಳಿವೆ. ಮೈಸೂ ರುದೇಶದ ರಾಜರ ವಂಶಾವಳಿ ಇದರಲ್ಲಿ ಸಂಗ್ರಹವಾಗಿ ವರ್ಣಿತವಾಗಿದೆ; ವರ್ಣನಾಭಾಗವೇ ಹೆಚ್ಚಾಗಿದೆ. ಗ್ರಂಧಾವತಾರದಲ್ಲಿ ರಂಗನಾಥನ ಸ್ತುತಿ ಇದೆ. ಬಳಿಕ ಕವಿ ರಂಗನಾಯಕಿ, ಸರಸ್ವತಿ, ಗಣೇಶ, ಗಂಗಾಧರ ಇವ ರುಗಳನ್ನು ಹೊಗಳಿದ್ದಾನೆ. ಅನಂತರ ಗೋಪಾಲನ ಆಜ್ಞೆಯಿಂದ ಗ್ರಂಥ ವನ್ನು ಬರೆಯುತ್ತೇನೆ ಎಂದು ಕಥೆಯನ್ನು ಆರಂಭಿಸಿದ್ದಾನೆ. ಈ ಗ್ರಂಥ ದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ. ಈ ಸಮುದ್ರ ಚಳದುತ್ಕಲ್ಲೋಲಮಾಲಾಹತಿವಿದಳಿತಶುಕ್ಕಿಜೋನ್ನು ಮುಕ್ತಾ | ವಳಿ ತಾರಾಸಂಚಯಂ ತತ್ವಟಕಲಿತಮಹಾವಿದ್ರುಮಚ್ಛಾಯೆ ಸಂಧ್ಯಾ | ಎಳಸದ್ರಗಂ ತದಂತರ್ಗ ತವಡಬನಧಸ್ಸಾರ್ಕಬಿಂಬಂ ತದೀಯೋ | ಜ್ವಳಶಂಖಂ ಚಂದ್ರನಂತೊಪ್ಪಿರೆ ಮೆತಿದುದು ಸಂಧ್ಯಾನಭಂಬೊಲ್ ಸಮುದ್ರಂ || ಮೇರು ಬಳಸಿ ಬರುತ್ತು ಮಿರ್ಪ ಹಿಮಧಾಮನೆ ದೀಪಿಕೆ ಚಾರುತಾರಕಾ | 498 ನೆಯ ಪುಟವನ್ನು ನೋಡಿ,