ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

442

                        ಕರ್ಣಾಟಕ ಕವಿಚರಿತೆ

[17ನೆಯ

                           ಷಡಕ್ಷರದೇವ 1655

ಈತನು ರಾಜಶೇಖರವಿಲಾಸ, ಬಸವರಾಜವಿಜಯ, ಶಬರಶಂಕರ ವಿಲಾಸ ಈ ಗ್ರಂಥಗಳನ್ನು ಬರೆದಿದ್ದಾನೆ. ವೀರಭದ್ರದಂಡಕವನ್ನೂ ಬರೆದಿದ್ದಾನೆಂದು ಹೇಳುತ್ತಾರೆ. ಈತನು ವೀರಶೈವಕವಿ. ಇವನು ಹುಟ್ಟಿದ ಸ್ಥಳ ಮಳವಳ್ಳಿ ತಾಲ್ಲೂಕಿನಲ್ಲಿರುವ ದನುಗೂರು ಎಂದು ಹೇಳುತ್ತಾರೆ. ತನ್ನ ಗುರುಪರಂಪರೆಯನ್ನು ಹೀಗೆ ಹೇಳಿದ್ದಾನೆ: -ರೇವಣಸಿದ್ಧ ; ಮಗ ರುದ್ರಮುನಿ; ಅವನ ವಂಶೋದ್ಭವ ಉದ್ದಾನ, ಶಿಷ್ಯ ಅನ್ನದಾನೀಶ; ಶಿಷ್ಯ ರೇವಣಸಿದ -ಈತನು ದನುಗೂರುಮಠದ ಸ್ವಾಮಿಯಾಗಿದ್ದನು; ಶಿಷ್ಯ ಚಿಕವೀರದೇಶಿಕ; ಶಿಷ್ಯ ಕವಿ ಷಡಕ್ಷರದೇವ, ಈತನು ಆಮೇಲೆ ಯಳಂದೂರು ಮಠಕ್ಕೆ ಸ್ವಾಮಿಯಾಗಿ ಅಲ್ಲಿಯೇ ಸಮಾಧಿಯನ್ನು ಪಡೆದನು. ಹದಿನಾಡ ದೊರೆಯಾದ ಮುದ್ದುರಾಜನು ತನ್ನ ಹೆಂಡತಿಯ ತವರುಮನೆಯ ಗುರುವಾಗಿದ್ದ ಈ ಷಡಕ್ಷರದೇವನನ್ನು ಕರೆಸಿ ತನ್ನ ಹೆಂಡತಿಯ ತವರೂರಾದ ಯಳಂದೂರಿನಲ್ಲಿ ಮಠವನ್ನು ಕಟ್ಟಿಸಿಕೊಟ್ಟು ನಿಲ್ಲಿಸಿದಂತೆ ಕೆಲವರು ಬರೆದಿದ್ದಾರೆ. ಆದರೆ ದೇವಚಂದ್ರನು ತನ್ನ ರಾಜಾವಳೀಕಥೆಯಲ್ಲಿ (1838, ಹೀಗೆ ಬರೆದಿದ್ದಾನೆ - ಷಡಕ್ಷರಿ ಚಿಕದೇವರಾಜನ ತಾಯಿಯಾದ ಎಳವಂದೂರು ಅಮೃತಾಂಬೆಯ ತವರುಮನೆಗೆ ಗುರುವಾದ ಆರಾಧ್ಯರ ಪುತ್ರನು. ಅಂತಃಪುರಜನಪ್ರೇರಣೆಯಿಂ ಇವನಂ ಬರಿಸೆ ಈತ ಲೀಲಾವತಿ, ಕಾದಂಬರಿ ಮೊದಲಾದ ಅನೇಕವಸ್ತು ಕಕಾವ್ಯದೊಳ್ ನಿಪುಣನೆನಿಸಿ ಕವಿ ಶೇಖರನಾದುರುಂ ರಾಜಶೇಖರಮೆಂಬ ಪೊಸತೊಂದುಕೃತಿಯಂ ಮಾಡಿ ಮೆಚ್ಚಿಸಿ ಕಲಕೆಲವುಮರಂಗಳಂ ಮಾನ್ಯಮಂ ಬಿಡಿಸಿ ಪದ್ದುಪವಾಡಮೆಂದು ಅದ್ಭುತಂಗಳಂ ತೋರಿಸಿದಂ. ರಾಜಶೇಖರವಿಲಾಸವನ್ನು ಶಕ 1579 ಜಯಸಂವತ್ಸರದಲ್ಲಿ-ಎಂದರೆ 1656ರಲ್ಲಿಯೂ, ಬಸವರಾಜವಿಜಯವನ್ನು ಶಕ 1597 ನಳವರ್ಷದಲ್ಲಿ--ಎಂದರೆ 1677 ರಲ್ಲಿಯೂ ಬರೆದಂತೆ ಆ ಗ್ರಂಥಗಳಿಂದ ತಿಳಿಯುತ್ತದೆ. ಇವನಿಗೆ ಉಭಯಕವಿತಾವಿಶಾರದ ಎಂಬ ಬಿರುದಿದ್ದಂತೆ ತೋರುತ್ತದೆ.

1. ಇಲ್ಲಿ ವರ್ಷಸಂಖ್ಯೆ ತಪ್ಪಾಗಿದೆ. ಜಯ ಶಕ 1577 ಆಗುತ್ತದೆ; ನಳ ಶಕ 1599 ಆಗುತ್ತದೆ.