ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ


443 ಶತಮಾನ)

               ಷಡಕ್ಷರದೇವ

ಹನ್ನೊಂದು ವರುಷದ ಪ್ರಾಯದಲ್ಲಿಯೇ ತನಗೆ ಕವಿತಾಶಕ್ತಿ ಉಂಟಾಯಿತೆಂದೂ “ಸಕ್ಕದಗಬ್ಬಮಂ ಮಿಸುಪ ಕನ್ನಡಗಬ್ಬಮನೊಲ್ದು 'ಕೋವಿದರ್ ಬೆಕ್ಕಸಮುಣ್ಮುವಂತೆ ಪೊಗಳುತ್ತಿರೆ ಮೊಕ್ಕಳಮಾಗಿ ಸರ್ವರಸಮೊಪ್ಪಿರೆ ಪೇಳ್ದೆಂ” ಎಂದೂ ಹೇಳುತ್ತಾನೆ.

ಪೂರ್ವಕವಿಗಳಲ್ಲಿ.ಮಲ್ಹಣ,ಭೋಜ,ಹರೀಶ್ವರ,ರಾಘವಾಂಕ,ಪದ್ಮರಸ,ಕೇಶಿರಾಜ,ಸೋಮನಾಥ, ಭೀಮಕವಿ ಶಂಕರ, ಮಾಯಿದೇವ, ಜಕಣಾರ ನಿಜಗುಣಯೋಗಿ, ತೋಂಟದಸಿದ್ಧಲಿಂಗಯತಿ, ಮಲ್ಲಣಾರ್ಯ ಇವರುಗಳನ್ನು ಸ್ಮರಿಸಿದ್ದಾನೆ.
 ತನ್ನ ಕವಿತೆಯನ್ನು ನೋಡಿ ವಿದ್ವಾಂಸರು 
 ಇಂಗಡಲೊಡಾನಾಡಿಯೊ ನೆರೆ | ದಿಂಗಳ ಸೋದರಮೊ ಸುದತಿಯಧರಾಮೃತದಿಂ। 
 ಪಿಂಗಿದು ಗುರುವೊ ಸುಧಾರಸ | ಮುಂ ಗೆಲ್ಪಂಕರೊ ಭವದ್ವಚಸ್ಸಮುದಯಮೋ ||

ಎಂದು ಕೊಂಡಾಡಿದರು ಎಂದು ಹೇಳುತ್ತಾನೆ. ಈತನು ಆಧುನಿಕಕವಿಯಾದರೂ ಇವನ ಶೈಲಿ ನಿರರ್ಗಳವಾಗಿಯೂ ಮನೋಹರವಾಗಿಯೂ ಇರುವುದಲ್ಲದೆ ಇವನ ವರ್ಣನೆಗಳು ಚಮತ್ಕಾರವಾಗಿಯೂ ಇವೆ. ಮುಖ್ಯವಾಗಿ ಇವನ ಕಂದಗಳು ಬಹಳ ರಮಣೀಯವಾಗಿವೆ. ಇವನ ಗ್ರಂಥಗಳಲ್ಲಿ

            1 ರಾಜಶೇಖರವಿಲಾಸ 
         ಇದು ಚಂಪೂರೂಪವಾಗಿದೆ; ಆಶ್ವಾಸ 14, 
 ಸತ್ಯೇಂದ್ರಚೋಳನ ಮಗನಾದ ರಾಜಶೇಖರನ ವೀಧೀವಿಹಾರದಲ್ಲಿ ತಿರುಕೊಳ ವಿನಾಚಿಯ ಮಗು ಸಾಯಲು ರಾಜನು ಮಗನಿಗೆ ಮರಣಾಂತದಂಡನೆಯನ್ನು ವಿಧಿಸಿ ತಾನೂ ಮೃತಿಹೊಂದಿದನು; ಮಂತ್ರಿ ಮೊದಲಾದವರೂ ಸತ್ತರು; ಶಿವನು ಪ್ರಸನ್ನನಾಗಿ ಎಲ್ಲರಿಗೂ ಮುಕ್ತಿಯನ್ನು ಕೊಟ್ಟನು. 

ಎಂಬುದೇ ಕಥಾಸಾರ, ತಮಿಳಿನಲ್ಲಿ ಪಿಳ್ಳೆ ನೆ ನಾರ್ ಹೇಳಿದ್ದ ಈ ಕಥೆಯನ್ನು ಮಲ್ಲಣಾರ್ಯನು ಕನ್ನಡದಲ್ಲಿ ಭಾವಚಿಂತಾರತ್ನವೆಂಬ ವರ್ಣಕ ಗ್ರಂಥವಾಗಿ ಮಾಡಿದನು; ಅದನ್ನೇ ಹರೀಶ್ವರನ ಕವಿತಾಮಾರ್ಗವನ್ನು ಅನು ಸರಿಸಿ ತಾನು ವಸ್ತುಕರೂಪವಾಗಿ ರಚಿಸಿದಂತೆಯೂ ಒಂದು ವರ್ಷದಲ್ಲಿ ಮುಗಿಸಿದಂತೆಯೂ ಕವಿ ಹೇಳುತ್ತಾನೆ. ಈ ಕಾವ್ಯದ ಉತ್ಕೃಷ್ಟತೆಯನ್ನು ಈ ಪದ್ಯಗಳಲ್ಲಿ ತಿಳಿಸಿದ್ದಾನೆ:-