ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ


ಕರ್ನಾಟಕ ಕವಿಚರಿತೆ [17 ನೆಯ ನುತರಸಸಂಪದಂ ಪದಮದರ್ಥಸಮನ್ವಿತವರ್ಧಮಾರ್ಯಸ | ಮ್ಮತಗುಣರಂಚಿತಂ ಗುಣಮುದಾತ್ತನವಸ್ಥಿತಿವೃತ್ತಿ ವೃತ್ತಿನಿ || ರ್ಮಿತಸರಸಾನುಭಾವಮುರುಭಾವಮುದಂಚಿತರೀತಿ ರೀತಿ ಎ | ಶ್ರುತಸದಲಂಕೃತಿ ಸ್ಪುರದಲಂಕೃತಿ ರಂಜಿವುದೀಪ್ರಬಂಧದೊಳ್ || ಎತತಪುರಾತನಕವಿಕೃತ | ಕೃತಿಭೂಷಣಭೂಷಿತಾಂಗಿ ಭಾರತಿ ಭುವನ | ಸ್ತುತಕಾಂತಿಗುಣಮಿಳಿತಮ | ತ್ಕೃತಿನವಸೀಮಂತರತ್ನ ಮಂ ತಳೆದೆಸೆಎಳ್ | ಇದು ಪೊಸತಿಂಪು ನೋಡಿದು ನವೀನಮನೂನಮೃದೂಕ್ತಿಭಾವವಿo | ತಿದು ನವಮಿ೦ತಿದಲ್ತೆ ಸದಲಂಕೃತಿ ನವ್ಯಮುದಾತ್ತವೃತ್ತಿ ತಾ || ನಿದು ಮಿಗೆ ನೂತ್ನಮೆಂದಖಿಳಕಾವ್ಯ ಕಳಾವಿದರೊಲ್ದು ಕೇ?ಳ್ದು ಮೆ | ಚ್ಚದೆ ನುತಿಗೆಯ್ಯದಿರ್ಪರೆ ಷಡಕ್ಷರದೇವಕೃತಪ್ರಬಂಧನುಂ || - ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ, ಬಳಿಕ ಕವಿ ಪರ್ವತಿ, ಸ್ವಗುರು ಚಿಕವೀರದೇಶಿಕ, ಗಣೇಶ, ಷಣ್ಮುಖ, ನಂದಿ, ವೀರಭದ್ರ, ಬಸಪ ಚನ್ನಬಸವ, ಪ್ರಭುದೇವ, ಸಿದ್ಧಲಿಂಗಯತಿ, ನಿಜಗುಣಯೋಗಿ, ರೇಣುಕ ರಾಮಪಂಡಿತಮರುಳಾರ್ಯರೆಂಬ ಚತುರಾಚಾರ್ಯರು ಇವರುಗಳನ್ನು ಪರಿವಿಡಿಯಿಂದ ಹೊಗಳಿದಾನೆ. ಆಶ್ವಾಸಗಳ ಅಂತ್ಯದಲ್ಲಿ ಈ ಗದ್ಯವಿದೆ- ಇದು ವಿನಮದಮರವರ ಮಕುಟತಟಘಟಿತಮಣಿಗಣಮಹಾಪ್ರಭಾಪಟಲಪರಿ ವೃತಪರಶಿವಶ್ರೀಪಾದನಖಚಂದ್ರಸಾಂದ್ರರುಚಿರು೦ದ್ರಚಂದ್ರಿಕಾಚಂಚಚ್ಚ ಕೋರಾಯ ಮಾನ ಸರಸಜನಮಾನಿತೋಭಯಕವಿತಾವಿಶಾರದ ಶ್ರೀಷಡಕ್ಷರದೇವವಿರಚಿತಮಪ್ಪ ರಾಜಶೇಖರವಿಳಾಸವಿಪುಳಪ್ರಬಂಧದೊಳ್. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ:- - ಸೂರ್ಯಾಸ್ತ್ರ

ನಳಿನದಳಂಗಳಲ್ಲಿ ಪುಳಿನಸ್ಥಳದಲ್ಲಿ ಲತಾವಿತಾನದೊಳ್ | ತಿಳಿಗೊಳದಲ್ಲಿ ತನ್ನ ಮನದನ್ನಳನೊಲ್ದ ಲಸುತ್ತಿ ಸುತ್ತಿ ಕ |

ಣ್ದೊಳಲಿ ಕರಂಗಿ ಕಂಪಿಸಿ ಪಲಂಬಿ ಬಬಿಲ್ದು ತ್ಟೊಲ್ದಬಿಲ್ದು ಮೇಣ್ | ಕಳವಳಿಸಿತ್ತು ಕಾಂತೆಯನಗಲ್ದೆಣೆವಕ್ಕಿ ನಿಶಾಪ್ರವೇಶದೊಳ್ || ಬೆಳದಿಂಗಳು ವಿಸುಪ ನಿಶಾನಿತಂಬಿನಿಗೆ ಬೆಳ್ಳುಡೆಯಾದುದು ಭಾನುರೋಚಿಯಂ |