ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



252 ಕರ್ಣಾಟಕ ಕವಿಚರಿತೆ. [16 ನೆಯ

  ಚಂದ್ರಪ್ರಭಪುರಾಣವ ಪೇಳ್ದ ವಿಜಯಕ | ವೀಂದ್ರನ ನವಮತೀರ್ಧಕರ | 
ರುಂದ್ರಕಧೆಯನುಸಿರಿದ ಗುಣವರ್ಮಕ | ವೀಂದ್ರನನೊಲಿದು ನುತಿಪೆನು || 
  ಶ್ರೀಮದನಂತತೀರ್ಧಕರ ಪುರಾಣವ | ಪ್ರೇಮದಿಂದುಸಿರ್ದ ಜನ್ನುಗನ |
 ರಾಮಣೀಯಕಧರ್ಮನಾಧಚರಿತವ ಪೇ | ಪ್ದಾ ಮಧುರನ ಬಲಗೂಂಬೆ || 
  ಫುಲ್ಲಸರೋಜಲೋಚನರಾಘವೇಂದ್ರನ | ಮಲ್ಲಿನಾಧನ ಚರಿತವನು | 
  ಸೊಲ್ಲಿಸಿದಭಿನವಪಂಪಕವೀಂದ್ರನ | ಸಲ್ಲೀಲೆಯಿಂ ನುತಿಸುವೆನು ||
  ವರಶಾಂತಿನಾಧನ ಪೊಗ‌‌ಳುದ ಹೊನ್ನನ ಸ್ಮರಹರನೇಮಿಚರಿತವ | 
  ದುರಿತಾರಿವೀರೇಶನ ಚರಿತವ ಪೇಳ್ದಿ | ಗರುವ ಕಣ್ಣಪನ ನುತಿಪೆನು ||                    
  ಬಾಣ ಪೇರುದ ಕಾದಂಬರೀಕಾವ್ಯವ | ಕ್ಷೋಣಿಯರುಕೆಯೊಳು ಸುಡಿಸಿ | 
  ಮಾಣದೆ ಲೀಲಾವತಿಗೆ ಕಪ್ಪಿಡಿಸಿದ | ಜಾಣನೇಮಿಯ ಬಲಗೊಂಬೆ | 
  ಭರತಯಾದವವಂಶಾಳಿಯ ಕೃತಿಯೊಳು | ವಿರಚಿಸಿ ಬಲುಕೀರ್ತಿವಡೆದ | 
  ವರಕವಿ ಬಂಧುವರ್ಮನ ನೆನೆದೀಸ | ಚ್ಚರಿತವ ನಾನುಸಿರುವೆನು ||
        ತನ್ನ ಗುಣಾದಿಗಳನ್ನೂ ಕವಿತಾಚಾತುರಿಯನ್ನೂ ಈ ಪದ್ಯಗಳಲ್ಲಿ ಹೇಳಿದ್ದಾನೆ.-

ಲಲನೆಯರ ಮೊಗದ ಮೂಗುತಿಯಾಣಿಮಣಿಯಂತೆ | ಸುಲಲಿತಾಂಗಿಯರ ನುಣ್ಗೊರಲ ಕಂರಿಕೆಯಂತೆ ! ಜಲಜನೇತ್ರೆಯರು ಸುಪ್ರೇಮದಿಂ ತಳಿರ್ಗೈಯೊಳಿರದಾಂತು ಸಲೆ ನೋಡುವ || ಪೊಳೆವ ಕನ್ನಡಿಯಂತೆ ಕಣ್ಗೊಳಿಪ ದೊಡ್ಡಯ್ಯ | ನೊಲವಿನಿಂದಮೃತಲಕ್ಷ್ಮೀಕಾಂತಜಿನಪತಿಯ | ಚಲನಪಂಕಜಭೃಂಗನೆನಿಸಿಯೊಪ್ಪಿದನು ಸದ್ವಿಪ್ರಕುಲರತ್ನ ದೀಪಂ ||ರಸದಾಳಿಯ ರಸದಂತೆ ಮಿಸುವ ರಸ | ಮೊಸರ್ವ ಮಾವಿನ ಪಣ್ಣಿನಂತೆ | ಅಸಿಯಳ ನಳಿತೋಳ ತಕ್ಕೆಯಂದದೊಳು ಮೋ | ಹಿಸುವುದೆನ್ನೀಸವಿನುಡಿಯು ||

    ಇವನ ಗ್ರಂಥ
                           ಚಂದ್ರಪ್ರಭಚರಿತೆ
   ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 28, ಪದ್ಯ 4475; ಅಲ್ಲಲ್ಲಿ ಕೆಲವು ವೃತ್ತಗಳೂ ಪಟ್ಟದಿಗಳೂ ಸಹ ಇವೆ. ಇದರಲ್ಲಿ 8 ನೆಯ ತೀರ್ಥ ಕರನಾದ ಚಂದ್ರಪ್ರಭನ ಕಥೆ ಹೇಳಿದೆ. ಪೂರ್ವದಲ್ಲಿ ಕವಿಪರಮೇಪಿ