ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ದೊಡ್ಡಯ್ಯ, 253.

ಯೂ ಗುಣಭದ್ರನೂ ಹೇಳಿರುವ ಕಥೆಯನ್ನು ತಾನು ಕನ್ನಡದಲ್ಲಿ ವಿವರಿಸುವುದಾಗಿ ಕವಿ ಹೇಳುತ್ತಾನೆ. ಈ ಗ್ರಂಥದ ಉತ್ಕೃಷ್ಟತೆಯನ್ನು ಈ ಪದ್ಯದಲ್ಲಿ ತಿಳಿಸಿದ್ದಾನೆ-

       ಇದು ಪಂಡಿತಯತಿಹೃದಯಪಂಕಜಮಿತ್ರ | ಮಿದು ಭಾರತಿಯ ಭಾಳನೇತ್ರ | ಇದು ಭವ್ಯಚೇತೋರೋಲಂಬಶತಪತ್ರ | ಮಿದು ಚಂದ್ರಜಿನರ ಚರಿತ್ರ ||

ಗ್ರಂಥಾವತಾರದಲ್ಲಿ ಚಂದ್ರನಾಥಸ್ತುತಿ ಇದೆ. ಬಳಿಕ ಕವಿ ಸಿದ್ಧಾದಿಗಳನ್ನು ಹೊಗಳಿ ಸಮಂತಭದ್ರನಿಂದ ದೇವಕೀರ್ತಿಯವರೆಗೆ ಗುರುಗಳನ್ನು ಸ್ಮರಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ-

                                        ಮೇರು  

ಜಲಜಜನಾಗಸಮೆಂಬ ಬಲ್ದಾವರೆ | ಯಲರನಿಳೆಗೆ ಮಗುಚಿಡಲು | ನಲಸೋಂಕಿ ಕಂಗೊಳಿಸುವ ಕರ್ಣಿಕೆಯಂತೆ | ಕಲರಧೌತಗಿರಿ ಕಣ್ಗೆ ಸೆದುದು|| ಕನಕಪ್ರಭೆಯೆಂಬ ಪಟ್ಟಣ ಅರಸನ ಪಗೆವರುಪ್ಪರಿಗೆಯ ತುದಿಯೊಳು | ಸರಿದಾಡುವ ಪಾವುಗಳು | ಭರದಿ ಪೊಕ್ಕಸುವು ತನ್ನಯ ಪುತ್ರನೆಂದಿಂದು | ಚರಿಸುವನೆರಡುಮಾರ್ಗದೊಳು ||

                                            ಮೇಘ      

ಸಿಡಿಲ್ಗ ಚ್ವಿನ ಧೂಮವೋ ಸುರಗಂಗೆಯ | ತಡಿಯ ತಮಾಲಕಾನನವೋ |

    1.   ಸಿದ್ದರು, ಆಚಾರರು, ಉಪಾಧ್ಯಾಯರು, ಸಾಧುಗಳು; ರತ್ನತ್ರಯ, ಸರಸ್ವತಿ, ಗಣಧರರು, ಜ್ವಾಲಾಮಾಲಿನಿ, ವಿಜಯಯಕ್ಷ, ಪಿರಿಯಪಟ್ಟಣದ ಅನಂತಜಿನನ ಚರಣಕಮಲಭೃಂಗ ಮಹಿಷೀಕುಂಭಾಪುರಾಧೀಶ್ವರಬ್ರಹ್ಮದೇವೆ, ಗಂಧಹಸ್ತಿಮ ಹಾಭಾಷ್ಯಕರ್ತೃ ಸಮಂತಭದ್ರ; ನಿರುಪಮಚತುರ್ವಿಂಶತಿಜಿನರೊಬ್ಬೊ |ಬ್ಬರ ಪುರಾಣವನೊಂದೊಂದ | ಭರದಿ ಸಪಾದಲಕ್ಷದಿ ಸೇರಿದ ಕವಿಪರಮೇಷ್ಠಿ, ಕಾಳಿದಾಸನ ಮೇಘ ಸಂದೇಶಕಾವ್ಯವ | ಸೋಲಿಸಿ ನೇಮಿದೂತಿಯನು | ಪೇರುದ ಮತ್ತು ಪುರುಜಿನರಾಜನ ಪೂರ್ವಪುರಾಣವನುಸಿರ್ದು ಸರ್ವಜ್ಞನೆನಿಸಿದ ಜಿನಸೇನ; ಇಪ್ಪತ್ತು ಮೂರುತೀರ್ಧಕರಪುರಾಣವ | ನೊಪ್ಪದಿ ಪೇಳು ಲೋಕದೊಳು | ಒಪ್ಪುವ ಗುಣಭದ್ರ; ವೀರಸೇನ; ಸದಮಲತತ್ವಾ ಷಧಶಬ್ದಶಾಸ್ತ್ರದಿ | ಹೃದಯಶರೀರವಾಕ್ಯಗಳ | ಪ್ರದಿದ ಮಲವ ತೊಲಗಿಸಿ ಭವ್ಯರಸಲ | ಹಿದ ಪೂಜ್ಯಪಾದ; ಶ್ರುತಕೇವಲಿಗಳೆನಿಪ ಗೋವ ರ್ಧನನಂದಿವಿಷ್ಟು ಭೂತಬಲಿಪುಷ್ಪದಂತಾಪರಾಜಿತರು, ಪಂಡಿತಾ , ಅಕಲಂಕ, ವಾದಿವಿದ್ಯಾನಂದ, ದೇವಕೀರ್ತಿ.