ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

254 ಕರ್ಣಾಟಕ ಕವಿಚರಿತೆ. [18 ನೆಯ

ಜಡದಲಕ್ಷ್ಮಿಯ ಪೀಲಿದರೆಯೋ ಎಂದೆನೆ | ಕಡುರಯ್ಯಮಬ್ದ ಸಂದೋಹ || ವೊಗೆಕಿಚ್ಚುನೀರುಗಾಳಿಗಳಿಂದ ಜನಿಸಿದ | ಮುಗಿಲಲ್ಲದಿರೆ ಬಿರಯಿಗಳ್ಗೆ | ಒಗೆವ ಕಂಬನಿ ತಾಪ ಪುಳಕ ಕಾಮಾಗ್ನಿಯೇ| ರುಗೆಯುಂಟೆ ಮುಗಿಲನೀಕ್ಷಿಸಲು!

                                  ಸ್ತ್ರೀಸೌಂದಯ್ಯ
ಗಿರಿವಜ್ರಮಧುಪಚಂಪಕಶಶಿಪನ್ನಗ | ಸರಸಿಜಚಂದ್ರಾತಪವು | ಕರಿಕದಳಿಗಳೆರವಿಲ್ಲದೆ ಸತಿಯ ಸೌo | ದರಶನುವಿನೊಳೆಸೆದಿಹುವು || ಚಿತ್ತ ಜರಾಯನ ಕೀರ್ತಿಲತೆಯ ಪೊಸ | ಬಿತ್ತುಗಳೊ ಥಳಥಳಿಪ | ಮುತ್ತುಗಳೋ ಮೇಣೆನೆ ಸುಲಿಪಲ್ಗಳು | ವೃತ್ತಕುಚೆಗೆ ಮೆಳೆದಿಹುವು || ವರಚಂದನಹಿಮಶಿಶಿರವಚನ ರಮ್ಯ | ಶರದಿಂದುಸನ್ನಿಭವದನೆ | ನಿರುಪಮಶೃಂಗಾರರಸವರ್ಪಾಕರ | ಶರುಣಿ ಋತುಗಳಂತಿಹಳು ||
                                          ಸಂಸಾರ 

ತನು ಮುಗಿಲೊಡ್ಡು ಮೈವೆಳಗೆಳಮಿಂಚು ಜ | ವ್ವನ ಲಲಿತೇಂದ್ರ ಕಾರ್ಮುಕವು | ಘನಸತ್ವ ಮರೆಯಾಗಿ ಕಳೆದು ಕರಗೆ ಕಂಡು | ಮನಮಿಕ್ಕದಾತನೆ ಚತುರ ||

                                         ಸತ್ಪುರುಷರು
ಕರಗಿಸೆ ಕಾಸೆಯೊರೆಯೆ ತೇಯೆ ನವನೀತ | ವರದುಗ್ಗ ಕನಕ ಮಲಯಜ | ಕರಮೆಸೆವಂತೆ ದುರ್ಜನರ ಬಾಧೆಗೆ ಸ | ತ್ವುರುಷರು ಗುಣವ ಮೆರೆವರು ||
                                              ------------
                            ಕುಮಾರ ಚೆನ್ನ ಬಸವ- ಸು 1550
         ಈತನು ಬಸವಪುರಾಣದ ಪುರಾತನರ ಚರಿತೆಯನ್ನು ಬರೆದಿದ್ದಾನೆ. ಅಲ್ಲದೆ ಸಾಸಲಭೈರವೇಂದ್ರಚರಿತೆ, ಶಂಭುಪೂಜಾವಿಧಿ, ವಿಭೂತಿಮಹಿಮೆ ಇವುಗಳನ್ನೂ ಬರೆದಿರುವುದಾಗಿ

ಇಂತು ಬಸವೇಶ್ವರಪುರಾಣದೊಳು ಸೂಚಿಸಿದ | ಕಂಶುಹರಶರಣಚರಿತೆಯ ಪದಂಗೊಳಿಸಿಯ | ತ್ಯಂತವಾಕ್ಯವಿಲಾಸದಿಂದೆ ಸಾಸಲಭೈರವೇಂದ್ರಚಾರಿತ್ರವುಸುರಿ || ಸಂತಸದಿ ವೀರಮಾಹೇಶಸಂಗ್ರಹದಲ್ಲಿ | ಗ್ರಂಧರೂಪಾಗಿರ್ದ ಶಂಭುವೂಜಾವಿಧಿಯ | ನಂತಲ್ಲಿ ಭೂತಿಯಧ್ಯಾಯಾದಿಯಂ ಕುಮಾರೇಶ್ವರಂ ಕನ್ನಡಿಸಿದಂ || ಎಂಬ ಪದ್ಯದಿಂದ ತಿಳಿಯುತ್ತದೆ.