ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾಸ] ಕುಮಾರಚೆನ್ನ ಬಸವ, 255

ಇವನು ವೀರಶೈವಕವಿ;"ಮುಕ್ತಿಮುನಿಸಿಂಹಾಸನಾಧಿಪತಿಯಸಮ ಸುಚರಿತ್ರಾಪ್ಟಶಿಖಿಯಬಸವೇಶನ" ಕರಜಾತನು. ಮುಕ್ತಿಮುನಿನಾಥವಂಶಾಂಬರಾದಿತ್ಯ, ಪ್ರತಾಪಕೀರ್ತಿವಿರಾಜಿತ, ಶಿವಭಕ್ತಕಲ್ಪದ್ರುಮ ಎಂದು ಹೇಳಿ ಕೊಂಡಿದ್ದಾನೆ. ಇವನ ವಿಷಯವಾಗಿ ಚೆನ್ನಬಸವಪುರಾಣದಿಂದ (1584) ಈ ಅಂಶಗಳು ತಿಳಿಯುತ್ತವೆ_
ರುದ್ರಮುನಿಯ ಮಗನಾದ ಮುಕ್ತಿಮುನಿ ಸಿರಿಗಿರಿಯ ಸಿಂಹಾಸನಾಧಿಪತಿಯಾಗಿದ್ದನು. ಮಲೆರಾಜ್ಯದಲ್ಲಿ ಜೈನರು ವೀರೇಶನನ್ನು ಕಿತ್ತು ಬಿಸಾಡಿದರು ಎಂದು ಕೇಳಿ ಆಪರವಾದಿಗಳನ್ನು ಸಂಹರಿಸಲು ತನ್ನ ಶಿಷ್ಯನಾದ ದಿಗಂಬರಮುಕ್ತಿಮುನಿಯನ್ನು ಕಳುಹಲು ಆತನು ವೀರೇಶನನ್ನು ಪುನಃಪ್ರತಿಷ್ಠೆಮಾಡಿ ಬಾಳೆಯಹಳ್ಳಿಯ ಸಿಂಹಾಸನಾಧಿಪತಿಯಾಗಿದ್ದನು. ಅವನ ಕಾಲವಾದಮೇಲೆ ಕುಮಾರಚೆನ್ನಬಸವೇಶ್ವರನು ಪಟ್ಟಕ್ಕೆ ಬಂದು ಶರಣಸಂಕುಲವನ್ನು ಪಾಲಿಸುತ್ತ ದುಷ್ಟಪರವಾದಿಗಳನ್ನು ಸಂಹರಿಸುತ್ತ ಇದ್ದನು.
   ಈತನ ಕಾಲವು ಬಸವಪುರಾಣದ ಕಾಲಕ್ಕೂ (1369) ಚೆನ್ನಬಸವ ಪುರಾಣದ ಕಾಲಕ್ಕೂ (1584) ಮಧ್ಯದಲ್ಲಿರಬೇಕು, ಸುಮಾರು 1550 ಆಗಿರಬಹುದೆಂದು ಊಹಿಸುತ್ತೇವೆ.
   ಪೂರ್ವಕವಿಗಳನ್ನು ಈ ಪದ್ಯಭಾಗದಲ್ಲಿ ಸ್ಮರಿಸುತ್ತಾನೆ-ಕವಿಪುಂಗವರೆನಿಪ್ಪ ಬಾಣೋದಟಮಳಯರಾಜಶೃಂಗಾರಕವಿಹರೀಶ್ವರಪದ್ಮರಾಜ ಸೋಮೇಶಾದಿಗಳಿಗಾನೆರಗುವೆಂ. ತನ್ನ ಗುಣಾದಿಗಳನ್ನು ಈ ಪದ್ಯಗಳಲ್ಲಿ ಹೇಳಿದ್ದಾನೆ-

ಇದು ಮುಕ್ತಿಮುನಿನಾಧವಂಶಾಂಬರಾದಿತ್ಯ| ನಧಿಕಕೀರ್ತಿಪ್ರತಾಪಂ ಶಂಭುನಿಂದಕಸ | ಮುದಯಸಮಿದಗ್ನಿ ಶಿವಭಕ್ತಕಲ್ಪದ್ರುಮ ಕುಮಾರಚೆನಬಸವೇಶ್ವರಂ|| ಶಶಿಧರಾರ್ಚಕಜನಕೆ ಬಸವೇಶನಂದದೆ ಗಿ | ರಿಶನಿಂದಕರ್ಗ್ಗೆ ವೀರೇಶನೆಂಬಂದದಿಂ | ವಸುಧೆಯೊಳಗಿರ್ಪ ಶಿವಭಕ್ತನಿಚಯಕ್ಕದ್ವಿತೀಯಶಂಕರನಂದದಿಂ | ರಸವದ್ವಚೋಯುಕ್ತ ಕೋವಿದಸಮೂಹಕ್ಕೆ | ಜಸವೆತ್ತ ದಕ್ಷಿಣಾಮೂರ್ತಿಯಂದದೆ ವಿರಾ | 1 ಸಂಧಿ 62, ಪದ್ಯಗಳು 37-43