ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

256 ಕರ್ಣಾಟಕ ಕವಿಚರಿತೆ [16 ನೆಯ ಜಿಸುತಂ ಕುಮಾರಚೆನಬಸವೇಶ್ವರಂ ದಿಗಂತಂಗಳೊಳು ಕೀರ್ತಿವೆತ್ತಂ|| ಇವನ ಗ್ರಂಥ

        ಬಸವಪುರಾಣದ ಪುರಾತನರ ಚರಿತೆ 
  ಇದು ವಾರ್ಧಕಷಟ್ಪದಿಯಲ್ಲಿದೆ; ಸಂಧಿ 9, ಪದ್ಯ 350. ಇದರೊಳಗೆ ಬಸವಪುರಾಣದಲ್ಲಿ ಸಂಗ್ರಹವಾಗಿ ಸೂಚಿಸಿರುವ ಪುರಾತನರ ಚರಿತ್ರವು ಉಪಕಥೆಗಳೊಡನೆ ವಿಸ್ತರಿಸಿ ಹೇಳಿದೆ. ಗ್ರಂಥಾದಿಯಲ್ಲಿ ಈಶ್ವರಸ್ತುತಿ ಇದೆ. ಬಳಿಕ ಕವಿ ನಂದಿ ಭೃಂಗಿ ವೀರೇಶ್ವರಗಣಾಧಿಪಷಣ್ಮುಖರಿಗೆ ನಮಿಸುತ್ತಾನೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ_
             ಶಿವಸ್ತುತಿ

ಸಿರಿಮುಡಿಯೊಳಾಗಸದೊರೆಯ ತೆರೆಗಳುಕ್ಕುತಿರ | ಲುರಿಗಣ್ಣದೆಂತೊ ಪಣೆಯೊಳು ರಾಜಿಪುದು ದೇವ | ಸರಸರವದಿಂ ಕಿವಿಗಳೊಳು ಫಣಿಗಳುಲಿಯುತಿರೆ ಪೆರೆ ಶಿರದೊಳೆಂತಿರ್ಪುದು || ಸ್ಮರದಹನಭಸ್ಮಾರ್ಧದಂಗದೊಳಗೆಮ್ಮವ್ವೆ | ಹರುಷದಿಂದೆಂತಿರ್ಪಳಯ್ಯ ಎಂದಿಂತು ರುಚಿ |ಕರವಚನಯುತಬಾಲಷಣ್ಮುಖನ ಜಾಣ್ಮಾತಿಗೊಲಿದ ಶಿವನೊಲ್ವನೆನಗಂ||

              ಕೈಲಾಸ 

ಪೊಳೆವ ಕೆಂಜಡೆಮುಡಿಯ ಬಿಳಿಯ ಮೈಕಾಂತಿಯಂ | ಕೆಳೆಗೊಂಡ ಶಿವಮೂರ್ತಿ ಬಡಬಾಗ್ನಿಯಂ ಮೇಲೆ | ತಳೆದು ಜಗವೆಲ್ಲಮಂ ತುಂಬಿರ್ದ ಪಾಲ್ಗಡಲೆನಿಪ್ಪಂತೆ ಸಾಸಿರಪೆಡೆ | ಗಳ ರತ್ನ ಕಾಂತಿಯಂ ಸೂಸುತಿಳೆಯಂ ನೋಡ| ಲೆಳಸಿ ಬಂದಿರ್ಪ ಶೇಷನ ನಿಲವೊ ಎಂಬಂತೆ | ತಳಿರೊತ್ತಿದುಪವನವನುಳ್ಳ ರಜತಾದ್ರಿಯೋ ಎನಲೆನ್ನ ಮನದೊಳೆಸೆಗುಂ || ಇವನ ಇತರ ಗ್ರಂಥಗಳು ನಮಗೆ ದೊರೆತಿಲ್ಲ.

         _________
          ಲಿಂಗ: ಸು- 1550 
ಈತನು ಚೋಳರಾಜಸಾಂಗತ್ಯವನ್ನು ಬರೆದಿದ್ದಾನೆ. ಇವನು ವೀರಶೈವಕವಿ; ತಿಮ್ಮಣ್ಣಮಂತ್ರಿಯ ಮಗನು; ಕನ್ನಡದೇಶದೊಳೊಪ್ಪುವ ಕವಿಗಳಿಗುನ್ನತಗುಣಮಣಿ, ಹರಕವಿಗಳ ಪದಕಮಲಭ್ರಮರ ಎಂದು ಹೇ