ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಕಲ್ಲರಸ. 93 

   ಜಗುನೆಯೆ ಯಮುನೆ ದುಕೂಲಮೆ|ದುಗುಲಂ ವೀಟಿಕೆಯೆ ವೀಳೆಯಂ ಪೇಟಿಕೆ ಪೇ। 
   ಳಿಗೆ ತಾರಗೆ ತಾರಕೆಯಂ | ದುಗೆಯಂದುಕೆ ತದ್ಭವಂಗಳಿವು ಚತುರಾಸ್ಯ ||
   ಎಲರುಣಿಯೆನೆ ಭುಜಗಂ ನೆಲ | ಕಲನೆಂದೆನೆ ಲೋಭಿ ಕಾವನೆನೆ ಕಾಮಂ ಕಾ | 
   ದಲನೆಂದೆನೆ ನಲ್ಲಂ ನಾ | ಣಿಲಿಯೆನಲಭಿಮಾನಹೀನನೆಲೆ ಚತುರಾಸ್ಯ ||
                         ---------------
                       ಪರಂಜ್ಯೋತಿಯತಿ ಸು. 1450 
   ಇವನು ಅನುಭವಮುಕುರವನ್ನು ಬರೆದಿದ್ದಾನೆ ಈತನು ಸ್ಮಾರ್ತ ಕವಿ; ವಿದ್ಯಾಶ್ರಮನ ಶಿಷ್ಯನು; ಸುಮಾರು 1450 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ.
   ಇವನ ಗ್ರಂಥ
                            ಅನುಭವಮುಕುರ 
   ಇದು ತ್ರಿಪದಿಯಲ್ಲಿ ಬರೆದಿದೆ; ಸಂಧಿ16, ಸೂತ್ರ 102, ತ್ರಿಪದಿ995. ಅದ್ವೈತವೇದಾಂತವನ್ನು ಬೋಧಿಸುವ ಗ್ರಂಥ, ಸಂಧಿಗಳ ಕೊನೆಯಲ್ಲಿ ಈ ಗದ್ಯವಿದೆ___
   ಇತಿ ಶ್ರೀಕೈವಲ್ಯಾನ್ವಯಪ್ರವರ್ತಕ ಪರಮಹಂಸಪರಿವ್ರಾಜಕಾಚಾರ್ಯ ಸಕಲ ಯೋಗೀಂದ್ರಬೃಂದವಂದ್ಯಪಾದಾರವಿಂದ ಶ್ರೀವಿದ್ಯಾಶ್ರಮಪಾದಕಮಲಿನೀರಾಜಹಂಸ ಶ್ರೀಪರಂಜ್ಯೋತಿಯತಿವಿರಚಿತಮಪ್ಪ ಅನುಭವಮುಕುರದೊಳ್.
                         -----------------
                        ಕಲ್ಲರಸ. ಸು. 1450 
   ಈತನು ಜನವಶ್ಯವನ್ನು ಬರೆದಿದ್ದಾನೆ. ಇವನು ವೀರಶೈವಕವಿ ಎಂದು ತೋರುತ್ತದೆ. "ಧಾತ್ರೀಶದೇವನೃಪಪುತ್ರ ಮೂರುರಾಯರಗಂಡ ವೈರಿನೃಪಗಜಗಂಡಭೇರುಂಡನಾದ ಯದುವಂಶವನಧಿವಿಧು” ಮಲ್ಲಿಕಾರ್ಜುನ ನೃಪಾಲನು ತನ್ನ ಹೆಂಡತಿಗೆ ಹೇಳಿದ ಜನವಶ್ಯವನ್ನು ತಾನು ವಿಸ್ತರಿಸಿ ಕನ್ನಡದಲ್ಲಿ ಬರೆದಂತೆ
   ಮಲ್ಲಿಕಾರ್ಜುನಧರಾ |ವಲ್ಲಭನೊಸೆದು ತನ್ನ |ನಲ್ಲಳರಿವಂತೊರೆದ ಜನವಶ್ಯಮಂ। 
   ಸಲ್ಲಲಿತವಾಣಿ ಕವಿ | ಕಲ್ಲರಸನರಿವವರ|ಮೆಲ್ಲೆರ್ದೆಯನಿಂಬುಗೊಳ್ವಂತೆ ಬರೆದಂ ||