ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨ ಕರ್ಣಾಟಕ ಕವಿಚರಿತೆ [15 ನೆಯ

 ಬೆರಸಿ ಕಟ್ಟಾಸೆಯೊಡನೆಯ್ದಿ ದಾನಾರ್ಧಿಯಾ |
 ಗೆಱಗಿದ ಸದಾಳಿಗಳ ತೆವರಿ ನಿಸ್ಸಾರತೆಯ |
 ಧರಿಸಿ ಪುಷ್ಷಿ ತಲತೆಯೊಳೊಂದಿ ನಲವಿಂ ಪಲ್ಲವಗ್ರಾಹಿಯಾಗಿ ಮೆಱೆವ ||
 ಕರಿಗಿರಿಗಳಳಿಗಿಳಿಗಳೆಂತು ಸರಿಯೆನಿಪುವೀ |
 ಪರವೆನಾಚಿಯ ಮಂದಗತಿಗೆ ವಿಸ್ತೀರ್ಣಪೀ |
 ವರಸಯೋಧರಕೆ ನುಣ್ಣುರುಳಿಂಗೆ ಮಧುರೋಕ್ತಿಗಳಿಗೆಂಬವೋಲೆಸೆದಳು ||
                                        ------------
                                 ಚತುರಾಸ್ಯ ಬೊಮ್ಮರಸ , ಸು. 1450
  ಈತನು ಚತುರಾಸ್ಯ ನಿಘಂಟುವನ್ನು ಬರೆದಿದ್ದಾನೆ. ಇವನು ವೀರ ಶೈವಕವಿಯೆಂದು ತೋರುತ್ತದೆ. ಇವನಿಗೆ ಚತುರಾನನ, ಚತುರಾಸ್ಯ ಎಂಬ ಹೆಸರುಗಳೂ ಉಂಟು. ಗಗನಾನ್ವಯತಿಲಕನಾದ ಹಂಪರಸನ ಮಗ ತಿಪ್ಪ ರಸನೆಂಬ ಬ್ರಾಹ್ಮಣನ ಇಚ್ಛಾನುಸಾರವಾಗಿ ಈ ಗ್ರಂಧವನ್ನು ಬರೆದಂತೆ ಹೇಳುತ್ತಾನೆ. ಅಚ್ಚಾಗಿರುವ ಚತುರಾಸ್ಯನಿಘಂಟುವಿನಲ್ಲಿ ದೊರೆವ “ಸಂತ ಸದಿನಱೆಸಿದಂ ಕವಿ | ಚಿಂತಾಮಣಿಯೆನಿಪ ಸರಸಕವಿ ತಿಪ್ಪರಸಂ” ಎಂಬ ಪದ್ಯಭಾಗದಿಂದ ಈ ತಿಪ್ಪರಸನೂ ಈ ಗ್ರಂಥರಚನೆಗೆ ಸಹಾಯಕನಾಗಿ ದ್ದಂತೆ ತೋರುತ್ತದೆ. ಕವಿಯ ಕಾಲವನ್ನು ನಿರ್ಧರಿಸುವುದಕ್ಕೆ ಸರಿಯಾದ ಆಧಾರವಿಲ್ಲ. ಸೌಂದರಪುರಾಣವನ್ನು ಬರೆದ ಬೊಮ್ಮರಸನೂ (ಸು. 1450) ಒಬ್ಬ ತಿಪ್ಪರಸನ ಇಷ್ಟಾನುಸಾರವಾಗಿ ಆ ಗ್ರಂಥದನ್ನು ಬರೆದಂತೆ ಹೇಳು ತ್ತಾನೆ. ಆದರೆ ಆ ತಿಪ್ಪರಸನು ವೈಶ್ಯಕುಲತಿಲಕನಾದ ಕಾಮನೃಪನ ಮಗ ನೆಂದು ಹೇಳಿರುವುದರಿಂದ ಕವಿ ಆ ಬೊಮ್ಮರಸನಲ್ಲವೆಂದು ತೋರುತ್ತದೆ. ಆದರೂ ಇವನ ಕಾಲವು ಸುಮಾರು 1450 ಆಗಿರಬಹುದೆಂದು ಊಹಿ ಸುತ್ತೇವೆ.
  ಇವನ ಗ್ರಂಥ
                                   ಚತುರಾಸ್ಯನಿಘಂಟು. 

ಇದು ಕಂದದಲ್ಲಿ ಬರೆದಿದೆ, ಪದ್ಯ 130; ಪ್ರತಿಪದ್ಯವೂ ಚತುರಾಸ್ಯ ಎಂದು ಮುಗಿಯುತ್ತದೆ. ಇದರೊಳಗೆ “ಉಸಿರ್ವೆಂ ದೇಸಿ ತದ್ಭವಂ ತತ್ಸ ಮಮಂ” ಎಂದು ಕವಿ ಹೇಳುತ್ತಾನೆ. ಗ್ರಂಧಾವತಾರದಲ್ಲಿ ಪಂಪೆಯಾಳ್ದನ ಸ್ತುತಿ ಇದೆ. ಇದರಿಂದ ಒಂದೆರಡು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ: