ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ಬೊಮ್ಮರಸ. ೯೧

                                 ಕಳಮಕ್ಷೇತ್ರ 
  ಮಿಸುಪ ಬೆಳುದಿಂಗಳಿಂದೊಸರುತಿಹ ಶಶಿಕಾಂತ |
  ವಿಸರದ್ದ್ರವಾಂಬುವೇ ಕಾಲುವೆಗಳಾಗಿ ದೆಸೆ |
  ದೆಸೆಗೆ ಸರಿಯಲು ತೀಡುತಿರ್ಪ ಮಂದಾನಿಲನ ಸಂಚಾರದಿಂದಲುಗುವ ||
  ಕುಸುಮದ ಪರಾಗವೇ ಗೊಬ್ಬರಮದಾಗೆ ತವೆ |
  ಪಸುರೇಱೆ ಸಾಲ್ವಿಡಿದುವೆನಲು ಕಳಮಕ್ಷೇತ್ರ |
  ನೆಸೆವ್ರವಾದೇಶದೊಳು ಭೂಮಾತೆ ಧರಿಯಿಸಿದ ವಸುರ್ವರಲ ತೊಡಿಗೆಯಂತೆ ||
                                 ಆಲಿಕಲ್ಲು
  ಕುಡಿಮಿಂಚೆನಿಪ್ಪ ನಚ್ಚಣಿ ಗಗನರಂಗದೊಳ್ |
  ಬೆಡಗುವಡೆವೊಲು ರಿಂಗಣಂಗುಣಿಯಲೆಂದು ಮು |
  ನ್ನೊಡರಿಚಿದ ಪೂವಲಿಯೊ ನೀಲಾಭ್ರವೆನಿಸುವ ತಮಾಲವೃಕ್ಷದ ಸಬ್ತೆಯ ||
  ಜಡಿಯೆ ಪವಮಾನನಿಳೆಗೊಕ್ಕ ಕುಸುಮಂಗಳೋ |
  ಕಡಲೊಳುದಕವ ಮೊಗವ ವೇಳೆಯೊಳು ಸಿಲುಕಿದೊ |
  ಳ್ಪಿಡಿದ ಪೆರ್ಮುತ್ತುಗಱಿದುದೊ ನೀರದೌಘವೆನೆ ಕಡುಸೂಸಿತಾಲಿವರಲು ||
                     ನಂಬಿಯಣ್ಣನ ಹೆಂಡತಿ ಪರವೆಯ ಸೌಂದಯ್ಯ 
  ಎಳವಿದರ ಕೋಮಲತ್ವವನಾಂತು ನಳನಳಿಪ |
  ನಳಿತೋಳು ರಂಜಿಸಿತು ನುಣ್ಣೊ ಲೆಗಳಿಡಿಕಿಱೆದು |
  ಒಳೆದು ಸೆಳೆನಡುವಿಂಗೆ ಬಿಣ್ಣಾಯ್ತು ತನು ಕನಕಚಂಪಕದ ಪುಷ್ಪದಂತೆ ||
  ಪೊಳೆದು ನೞುಗಂಪ ಬೀಱ'ದುದಿಂದ್ರನೀಲಮಣಿ |
  ಯೊಳಗಣ ತಿರುಳ್ಗೆ ತೊಣೆಯಾದುವಾ ಕುರುಳ್ಳಳು |
  ಜ್ವಳಿಸಿದುವು ಕದಪು ಕಣ್ನೊನೆ ಧವಳಕಾಂತಿಯಂ ಪಡೆದುದಂದಾ ಪರವೆಗೆ ||
  ತಳಿರಮೇಲಂಗಜನ ಬತ್ತಳಿಕೆಯದೞಮೇ |
  ಲೆಳವಾೞಿಗಂಬವದಱಗ್ರದೊಳು ಗಿರಿಯ ತ |
  ಸ್ಪಲು ತಪ್ಪಲಗ್ರದೊಳು ಲತೆ ಲತೆಯಮೇಲೆ ಪೊಂಗೊಡಮದಱ ಕೆಲಬಲದೊಳು ||
  ಲಲಿತಚಂಪಕಮಾಲೆಯದಱಗ್ರದೊಳು ಶಂಖ |
  ಬೞಿಕದಱಮೇಲೆ ರನ್ನದ ಮುಕುರಮದಱಮೇ |
  ಲಳಿಕುಳ ಮಯೂರವಿರ್ದಪುವೆನಲು ಪರವೆಯಾಕಾರ ಕಣ್ಗೆಸೆದಿರ್ದುದು ||