ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಕಶಮನ ಬೆಂಗಳ೦ಕುಮುದ್ದು ವೀರಸ್ವಾಮಿ. ಈಯಂಶಗಳನ್ನು ಸಂಗ್ರಹಿಸಿ ಬರೆದಂತ ಕವಿ ಈ ಪದ್ಯದಲ್ಲಿ ಹೇಳುತ್ತಾನೆ: ಬಸವಪುರಾಣದೊಳ್ ವಸುಮ ಸೀಶ್ವರಮಂಡನ ಸಿಂಗಿರಾಜ ನಿ | ರ್ಮಿಸಿದ ಪುರಾಣದೊಳ್ ಸಕಳಭಕ್ತ ಮಹೇಶ್ವರರಿಂದ ಪೇಳಸಂ / ಫೆಸೆವ ಕಥಾಳಿ ಯಲ್ಲಿ ವಚನೌಘದೊಳಿರ್ದ ಮಹತ್ವಮಾಲೆಯಂ | ಒಸೆದು ಸಮಸ್ತಭಕ್ತರಳಿರುವಂತೆ ವಿಳಾಸದಿ ಸೇನಾನಿದಂ |/ ಆರಂಭದಲ್ಲಿ ಈ ವಾಕ್ಯವಿದೆ. - ಶ್ರೀಮದನುಪಮಕಲ್ಯಾಣಪುರವರಾಧೀಶ ಮಹಾಮಹಿಮ ಬಸವರಾಜದೇವರು ಶಿವನ ಆಜ್ಞೆಯಿಂದ ನಂದಿಕೇಶ್ವರರೆ ಭೂಲೋಕದಲ್ಲಿ ಮಾದರಸ ಮಾದಲಾಂಬೆಯರ ಗರ್ಭದಲ್ಲಿ ಬಸವನಾಮದಲ್ಲವತರಿಸಿ ಕೆಳಗೆ ಉದಾಹರಿಸುವಂತೆ 360) ಪವಾಡಗಳ ನಡಸಿ ಕಪ್ಪಟಿಸಂಗಮನಾಧಲಿಂಗದಲ್ಲಿ ಐಕ್ಯರಾದರು. ಈ ಗ್ರಂಥದಿಂದ ಸ್ವಲ್ಪಭಾಗವನ್ನು ತೆಗೆದು ಬರೆಯುತ್ತೇವೆ.

                  ಪವಾಡಗಳು.                                                    (1) ಗಾನಲೋಲನಾದ ಸಂಗಮನನ್ನು ಜಂಗಮಾಕಾರದಿಂದ ಕಂಡು ಆತನಿಂದ  ಷಟ್ರ್ಲಶಾಸ್ತ್ರವಳಿದು ಅಭ್ಯಾಸಿಸಿದ ಪ್ರಸ್ತಾವ (ವಾಕ್ಸಂಬಂಧ)

(2) ಲಿಂಗಧಾರಿಯಾದ ಕಾರಣ ಮುಂಜಿಯ ಮಾಡುವನೆಂಬ ಬಂಧುಗಳ ತಿರ ಸ್ಕರಿಸಿ ಅಕ್ಕನಾಗಮ್ಮನವರಿಂದ ಕೂಡಿ ಸಂಗಮಕ್ಕೆ ಬಂದುದು (ವಾಕ್ಸಂಬಂಧ) (3) ಹರುಷದಿಂದಲ್ಲಮಪ್ರಭು ಬರುವರೆಂದು ತಾನೆ ತಿಳಿದು ಶೂನ್ಯ ಸಿಂಹಾಸ ನವ ನಿರ್ಮಾಣಮಾಡಿದುದು (ಕನಿ ದಸಂಬಂಧ) (4) ಈಶನ ಜಂಗಮ ಬೇಡಿದುದಕ್ಕೆ ೧೦ ಖಂಡುಗ ಜೋಳವ ಮತ್ತು ಮಾಡಿ ಸಮಪ್ರಣಮಾಡಿ ಮೆಹಿದಿರ್ದು ದು. (ಮನಸ್ಸಂಬಂಧ) . ಬೆಂಗಳೂರು ಮುದ್ದು ವೀರಸ್ವಾಮಿ ಸು 1700 ಈತನು ವಚನಗಳನ್ನು ಬರೆದಿದ್ದಾನೆ. ಇವನು ವೀರಶೈವಕವಿ. ಈತನ ಗ್ರಂಥದ ಒಂದು ಪ್ರತಿ 1744 ರಲ್ಲಿ ಬರೆದುದಾಗಿ ತಿಳಿವುದರಿಂದ ಇವನು ಆ ಕಾಲಕ್ಕೆ ಹಿಂದೆ ಸುಮಾರು 1700 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ,