ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

380 ಕರ್ನಾಟಕ ಕವಿಚರಿತ [11 ನೇಯ ಕಾರುಗಹಳ್ಳಿ ಶಾಂತಯ್ಯ ಸು 1,00 ಈತನು ವಚನಗಳನ್ನು ಬರೆದಿದ್ದಾನೆ, ಅವನು ವೀರಶೈವಕನಿ, 4 ವನ ಗ್ರಂಥದ ಒಂದು ಪ್ರತಿ 1744 ರಲ್ಲಿ ಬರೆದುದಾಗಿ ತಿಳಿದುದರಿಂದ ಅವನು ಆ ಕಾಲಕ್ಕೆ ಹಿಂದೆ ಸುಮಾರು 170೧ ರಲ್ಲಿ ಇದ್ದಿರಬಹುಗೊಂಡು ತೋರುತ್ತದೆ -+ ಪಟ್ಟು ಗಂಬಳಿ ಸಿದ್ದಲಿಂಗಸ್ವಾಮಿ ಪು 1700 ಇವನು ಗುಬ್ಬಿಯನ್ನುಲ್ಲಾಗಾರನ ಭಾವಚಿಂತಾರತ್ಯಕ್ಷ (1513) ಕನ್ನ ಡಟೀಕೆಯನ್ನು ಬರೆದಿದ್ದಾನೆ, ಈತನು ವೀರಶೈವಕವಿ, ಇವನ ಸ್ಪಳ ಟ್ರ ಪ್ರವಾರ, ಇವನು ಸುಮಾರು 1900 ರಲ್ಲಿ ಇದ್ದಿರಬಹುದು, ಸರ್ವಜ್ಞ ಸು 1700 ಇತನು ತ್ರಿಪದೀರೂಪವಾದ ಒಂದು ಗ್ರಂಥವನ್ನು ಬರೆದಿದ್ದಾನೆ. ಆದಕ್ಕೆ ಸರ್ವಜ್ಞನತ್ರಿಪದಿ ಎಂದು ಹೆಸರು, ಇವನು ವೀರಶೈವಕವಿ, ತಾನು ಮೊದಲು ಕೈಲಾಸದಲ್ಲಿ ಪುಷ್ಪದತ್ಯನಾಗಿದ್ದಂತೆಯೂ ಬಳಿಕ ವರರುಚಿಯಾಗಿ ಹಟ್ಟಿದಂತಲೂ ಅನಂತರ ಸರ್ವಜ್ಞನಾಗಿ ಜನಿಸಿದಂತೆಯೂ ಹೇಳುತ್ತಾನೆ ತನ್ನ ಹುಟ್ಟಿನವಿಷಯವಾಗಿ ಹೀಗೆ ಹೇಳಿದ್ದಾನೆ:- ಧಾರವಾಡಜಿಲ್ಲೆಯ ಮಾಸೂರು ಎಂಬ ಗ್ರಾಮದಲ್ಲಿ ಬಸವರಸನೆಂಬ ಆರಾಧ್ಯ ಬ್ರಾಹ್ಮಣನಿದ್ದನು, ಅವನ ಹೆಂಡತಿ ಮಲ್ಲಮ್ಮ, ಈಕೆಗೆ ಮಕ್ಕಳಿಲ್ಲದೆ ಇದ್ದುದರಿಂದ ತನ್ನ ಕೊರತೆಯನ್ನು ಗಂಡನೊಡನೆ ಹೇಳಿಕೊಳ್ಳಲು ಆತನು ಕಾಶಿಗೆ ಹೋಗಿ ಈಶ್ವರ ನಲ್ಲಿ ಗಂಡುಮಗುವಾಗಬೇಕೆಂದು ಬೇಡಿಕೊಂಡನು. ಈಶ್ವರನಿಂದ ಪಡೆದ ಪ್ರಸಾದ ವನ್ನು ನುಂಗಿ ಮರಳಿ ತನ್ನೂರಿಗೆ ಬರುವ ದಾರಿಯಲ್ಲಿ ಅಂಬಲೂರೊಳಗೆ ಒಬ್ಬ ಕುಂಬ ರನ ಮನೆಯಲ್ಲಿ ಇಳಿದುಕೊಂಡನು. ಅಲ್ಲಿದ್ದ ಮಾಳಿಯೆಂಬವಳಲ್ಲಿ ಮೋಹಗೊಳ್ಳಲು ಅವಳು ಗರ್ಭಿಣಿಯಾಗಿ ಸರ್ವಜ್ಞನನ್ನು ಹಡೆದಳು ಸರ್ವಜ್ಞನು “ಸರ್ವರೊಳೊಂದೊಂದುನುಡಿಗಲ್ಕು ವಿದ್ಯೆಯ ಚಿಪರ್ವತ ನ” ಆದನು ಎಂದು ಹೇಳಿದೆ. ಅಚ್ಚಾಗಿರುವ ಕೆಲವು ಪ್ರತಿಗಳಲ್ಲಿ ಇವನ ಗ್ರಂಧದ ಕಾಲಜ್ಞಾನಪದ್ಧತಿಯಲ್ಲಿ ವಿಜಯನಗರವು ಮಹಮದೀಯರಿಂದ ನಾಶವಾದುದು, ಇಕ್ಕೇರಿಸಂಸ್ಥಾನವು ಹಾಳಾ