ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ವಜ್ಞ ಶವನ್ನು ಮುದು, ಶ್ರೀರಂಗಪಟ್ಟಣವು ಆಂಗ್ಗೇಯರ ಕೈಸೇರಿದುದು ಮುಂತಾದ ವಿಷಯಗಳು ಉಕ್ತವಾಗಿರುವುದರಿಂದ ಕೆಲವರು ಇವನ ಕಾವು ಸುಮಾರು 1800 ಆಗಿರಬ ಹುದು ಎಂದು ಊಹಿಸುತ್ತಾರೆ. ಆದರೆ 1800 ಕ್ಕೆ ಹಿಂದೆ ಬರೆದ ಈತನ ಗ್ರಂಥದ ಓಲೆಯ ಪ್ರತಿಗಳು ದೊರೆವುದರಿಂದ ಅವುಗಳಲ್ಲಿ ದಿ ಎಂಬ ಹಳಗನ್ನಡದ ಅಕ್ಷರವು ಇರುವುದರಿಂದಲೂ ಈತನ ಕಾಲವು ಸುಮಾರು 1700 ಕ್ಕೆ ಈಚೆ ಇರಲಾರದೆಂದು ನಾವು ಊಹಿಸುತ್ತೇವೆ, ಅಚ್ಚಾಗಿರುವ ಪ್ರತಿಗಳು ಒಂದರ ಹಾಗೆ ಒಂದಿಲ್ಲ, ಇವುಗಳಲ್ಲಿ ಹಲವು ಹೊಸಪದ್ಯಗಳೂ ಸೇರಿರುವಂತೆ ತೋರುತ್ತದೆ. ನಮಗೆ ದೊರೆತ ಒಂದು ಓಲೆಯಪುಸ್ತಕದಲ್ಲಿ ಸಂಪಾದನೆಯ ಸಿದ್ಧವೀರಾಗ್ವಯಾಚಾರರು ಸೇರಿಸಿದ ಸರ್ವಜ್ಞ ಮೂರ್ತಿ ನಿರೂಪಿಸಿದ ತ್ರಿವಿಧಿ' ಎಂದಿದೆ, ಈ ಸರ್ವಜ್ಞಮೂರ್ತಿ ಈ ಕವಿಯೇ ಆಗಿದ್ದ ಪಕ್ಷದಲ್ಲಿ ಇವರು ಸಂಪಾದನೆಯ ಸಿದ್ಧ ವೀರಾಚಾರನ (ಸು, 16oo) ಕಾಲಕ್ಕೆ ಹಿಂದೆ ಇದ್ದಿರಬೇಕು, ಜೀವನ ಗ್ರಂಥ ಸರ್ವಜ್ಞನ ತ್ರಿಪದಿ ಇದಕ್ಕೆ ಸರ್ವಜ್ಞಮೂರ್ತಿವಚನ ಎಂಬ ಹೆಸರೂ ಇರುವಂತೆ ತಿಳಿ ಯುತ್ತದೆ. ಪ್ರತಿಪದ್ಯವೂ ಸರ್ವಜ್ಞ ಎಂದು ಮುಗಿಯುತ್ತದೆ. ನಮಗೆ ದೊರೆತ ಒಂದು ಒಲೆಯ ಪ್ರತಿಯಲ್ಲಿ ಪ್ರತಿಪದ್ಯವೂ ಪರಮಾರ್ಥ ಎಂದು ಮುಗಿವುದಲ್ಲದೆ ಗ್ರಂಥಕ್ಕೆ ಪರಮಾರ್ಥಿಕ ಎಂಬ ಹೆಸರೂ ಹೇಳಿದೆ. ಗ್ರಂಥವ ಪದ್ದತಿಗಳಾಗಿ ಭಾಗಿಸಲ್ಪಟ್ಟಿದೆ. ಕೆಲವು ಪ್ರತಿಗಳಲ್ಲಿ 27 ಪದ್ದತಿಗಳ ಮತ್ತ ಕೆಲವು ಪ್ರತಿಗಳಲ್ಲಿ 29 ಪದ್ಧತಿಗಳೂ ಇವೆ. ಪದ್ಯಸಂಖ್ಯೆಯ ವ್ಯತ್ಯಾಸವಾ ಗಿದೆ: ಕೆಲವು ಪ್ರತಿಗಳಲ್ಲಿ ಸಾವಿರಕ್ಕೆ ಅಧಿಕವಾಗಿಯೂ ಇನ್ನು ಕೆಲವು ಪ್ರತಿ ಗಳಲ್ಲಿ ಸಾವಿರಕ್ಕೆ ಸ್ವಲ್ಪ ಕಡಮೆಯಾಗಿಯೂ ಇವೆ. ಗ್ರಂಥದಲ್ಲಿ ಧರ್ಮ ನೀತಿ, ಜನ, ಜ್ಯೋತಿಷ ಮುಂತಾದ ಹಲವು ವಿಷಯಗಳು ಪ್ರತಿಪಾದಿಸ ಲ್ಪಟ್ಟಿವೆ. ಆರಂಭದಲ್ಲಿ ಶಿವಸ್ತುತಿ ಇದೆ, ಈ ಗ್ರಂಥದಿಂದ ಕೆಲವು ಪದ್ಯಗ ಳನ್ನು ಉದ್ಧರಿಸಿ ಬರೆಯುತ್ತೇವೆ ನೀತಿ ಕೋಪವೆಂಬುದು ಕೇಳೆ | ಪಾಪದ ನೆಲೆಗಟ್ಟು || ಕzkಳು ನೇಣು ಹದಂತೆ ನರಕಕ್ಕೆ | ಕೈಪಿ ತಾಸಿಟಿವ ಸರ್ವಜ್ಞ |