ಶತಮಾನ) ಚಂದ್ರಮ 371
ಚ೦ದ್ರವು 1646
ಇವನು ಕಾರ್ಕಳದ ಗೊಮ್ಮಟೇಶ್ವರಚರಿತೆಯನ್ನು ಬರೆದಿದ್ದಾನೆ. ಈತನು ಜೈನಕನಿ, ಇವನ ವಿದ್ಯಾಯರು ಶ್ರುತಸಾಗರ, ವ್ರತಗುರು ಮಹೇಂ ದ್ರಕೀರ್ತಿ. ಅರಿರಾಯರಗಂಡರದಾವಣೇಯೆಂಬ ಬಿರುದಾಂತ ಭೈರವನ್ರುಪನ ಕರುಣಸಹಾಯದಿಂದ ಲಲಿತಕೀರ್ತಿಯ ಆಜ್ಞಾನುಸಾರವಾಗಿ ಈ ಗ್ರಂಥವನ್ನು ಬರೆದಂತೆ ಹೇಳುವುದರಿಂದ ಕವಿ ತುಳುವದೇಶದವನೆಂದೂ ಭೈರ ವರಾಯನ ಆಶ್ರಿತನೆಂದೂ ತಿಳಿಯುತ್ತದೆ. ಈ ಗ್ರಂಧದ ಕೊನೆಯ ಸಂಧಿಯಲ್ಲಿ ಅರಿರಾಯರಗಂಡರದಾವಣಿ ಇಮ್ಮಡಿಭೈರವರಾಯನು ತನ್ನ ತಂದೆ ಭೈರವರಾಯನಿಗೆ ಪುಣ್ಯಖ್ಯಾತಿಗಳಾಗಲೆಂದು ಕುಲಗುರು ಲಲಿತಕೀರ್ತಿಯ ಉಪದೇಶದಿಂದ ಮಹೇಂದ್ರಕೀರ್ತಿಯನ್ನು ಮುಂದಿರಿಸಿಕೊಂಡು ಗೊಮ್ಮ ಟೇಶ್ವರನಿಗೆ ಶಕ 1568 ಪಾರ್ಧಿವದಲ್ಲಿ-ಎಂದರೆ 1616 ರಲ್ಲಿ- ಅಭಿಷೇಕ ಪೂಜಾದಿಗಳನ್ನು ಮಾಡಿಸಿದನೆಂದು ಕವಿ ಹೇಳುತ್ತಾನೆ ಇವನೂ ಆಕಾಲದವನೆಂದು ತೋರುತ್ತದೆ. ತನ್ನ ವಿಷಯವಾಗಿ ಹೀಗೆ ಹೇಳಿಕೊಂಡಿದ್ದಾನೆ--- ಜಿನಮತವಾರ್ಧಿವರ್ಧನ ಚಂದ್ರನು ಭವ್ಯ | ಹ್ರತ್ಕುವಲಯಚಂದ್ರಮನು || ಅನುಪಮವಿಬುಧಚಕೋರಚಂದ್ರಮನೆಂದು | ಜನರೊಬ್ಬು ಒಣ್ಣಿಸರವನ | ಇವನ ಗ್ರಂಧ
ಕಾರ್ಕಳದ ಗೊಮ್ಮಟೇಶ್ವರಚರಿತೆ
ಇದು ಸಾಂಗತ್ಯದಲ್ಲಿ ಬರೆದಿದೆ, ಸಂಧಿ 17, ಪದ್ಯ 2185. ಇದರಲ್ಲಿ ಬಾಹುಬಲಿಯ ಅಧವಾ ಗೊಮ್ಮಟೇಶ್ವರನ ಚರಿತ್ರವೂ ಕಾರ್ಕಳದಲ್ಲಿ ಆತನ ವಿಗ್ರಹವನ್ನು ಪ್ರತಿಷ್ಠ್ ಮಾಡಿದ ವಿಷಯವೂ ಹೇಳಲ್ಪಟ್ಟಿವೆ. ಅರಿರಾಯರಗಂಡರದಾವಣಿ ಎಂಬ ಬಿರುದುಳ್ಳಉತ್ತಮಧುರಾನಾಧನಾದ ಪಾಂಡ್ಯನೃಪನು ತೌಳವದೇಶದ ಕಾರಕಳದಲ್ಲಿ ಲಲಿತಕೀರ್ತಿಯ ಉಪದೇಶದಿಂದ ಗೊಮ್ಮಟೇಶ್ವರನ ವಿಗ್ರಹವನ್ನು ಮಾಡಿಸಿ ಅದನ್ನು ಇಪ್ಪತ್ತುಚಕ್ರಗಳುಳ್ಳ ಭಂಡಿಯಮೇಲಿಟ್ಟು ಒಂದು ತಿಂಗಳವರೆಗೂ ಬೆಟ್ಟದಮೇಲಕ್ಕೆ ಎಳೆಯಿಸಿ ಸಾಗಿಸಿ ಶಕ 1353 ವಿರೋಧಿ ಕೃತುವಿನಲ್ಲಿ, ಎಂದರೆ 1431ರಲ್ಲಿ, ಪ್ರತಿಷ್ಠೆ ಮಾಡಿಸಿದನು-ಎಂದು ಹೇಳಿ ತನ್ನ ಪೋಷ ಕನಾದ ದೊರೆಯುವಿಷಯವಾಗಿ ಕವಿ ಹೀಗೆ ಬರೆದಿದ್ದಾನೆ - 1 ಮತ್ತೊಂದು ಪ್ರತಿಯಲ್ಲಿ ಸದ್ಯಸಂಖ್ಯೆ 2313 ಎಂದಿದೆ.