306 ಕರ್ಣಾಟಕ ಕವಿಚರಿತೆ [16 ನೆಯ ಪ್ರೌಢರಾಯನ ಒಳಿ ಕಂದಾಳಪೆದ್ದ ಯಾಚಾರ್ಯನೆಂಬವನು ಭಾರತವನ್ನು ಓದಿ ಮೆರೆವಣಿಗೆಯ ಮಾಡಿಸಿದನು ಅದ ನೋಡಿ ಜಕ್ಕಣಾಚಾರ್ಯನು ಕುಮಾರಬಂಕನಾಧಗುರುವಿನ ಪಾದುಕೆಯನ್ನು ನೆಲೆಗೊಳಿಸಿ ಪ್ರಭುದೇವರ ವಚನಗಳಿಗೆ ಏಕೋತ್ತರಶತಸ್ಥಲದ ಸೂತ್ರಗಳ ವ್ಯಾಖ್ಯಾನವನ್ನು ಮಾಡುತ್ತ 10I ವಿರಕ್ತರು ಕರತಲದನಾಗಯ್ಯ, ಕಲ್ಮ ಠದಪ್ರಭುದೇವ, ವೀರಣ್ಣೊಡೆಯ, ಚಾಮಃರಸ ಮುಂತಾದವರು ಸೇರಿ ಏಕೋತ್ತರ ಶತಸ್ಥಲವನು ರಾತ್ರಿ ಮೆರೆಯಿಸಿದರು. ಮುಕುಂದಪೆದ್ದಿಗೂ ಜಕ್ಕಣನಿಗೂ ವಾಗ್ವಾ ದವಾಗಿ ಚಾಮರಸನು ದಿನಕ್ಕೆ 11 ಪದ್ಯದಂತೆ ಪ್ರಭುಲಿಂಗೋಲೆಯನ್ನು ಬರೆದು ರಾಜ ನಲ್ಲಿ ಓದಲು ಅದಕ್ಕೆ ಜಕ್ಕಣಾಚಾರ್ಯನು ಅರ್ಧವನ್ನು ಹೇಳಲು ದೊರೆ ಸಂತೋಷಿಸಿ ಅವನಿಗೆ ಆಭರಣಾದಿಗಳನ್ನೂ 5 ಗ್ರಾಮಗಳನ್ನೂ ಉಮ್ಮಳಿಯ ಕೊಟ್ಟನು ಹಾಗೆಯೇ ಚಾಮರಸನಿಗೆ ಮರ್ಯಾದೆಮಾಡಿಸಿ ಅವನನ್ನೇ ಮಂತ್ರಿಯಾಗಿ ಮಾಡಿಸಿ ಜಕ್ಕಣಾರ್ಯನು ಬಯಲಾದನು. ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ಗಂಗೆ, ಗಣೇಶ, ಷಣ್ಮುಖ, ವೀರಭದ್ರ ಇವರುಗಳನ್ನು ಸ್ತುತಿಸಿ ಪ್ರಭುದೇವನಿಂದ ಸತ್ಯಣ್ಣನವರೆಗೆ ಪುರಾತನರನ್ನು ಸ್ಮರಿಸಿದ್ದಾನೆ. ಆಮೇಲೆ ಸರಸ್ವತಿಯನ್ನು ಹೊಗಳಿ ಕಥೆಯನ್ನು ಆರಂಭಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯ ಗಳನ್ನು ತೆಗೆದು ಬರೆಯುತ್ತೇವೆ ಸಮುದ್ರ ಕುಂಭಜನ ತುತ್ತಿಗೊಳಗಾದೆಂ ಪರಶುರಾಮ | ನಂಬಿಂಗೆ ಗುರುಯಾದೆ ಭಂಗವಾಯಿತ್ತೆನ್ನು | ತಂಬುನಿಧಿಯರುವಂತೆ ಸಿಡಿದ ಹನಿ ಕಂಬನಿಯು ನವತೆರೆಯು ಒಡಲ ದುಃಖ | ಅಂಬುಜಾಂಬಕನಳೆಯನಂಬುಜಾ: ನೊಮ್ಮಗನು | ಅಂಬುಜಾರಿಯುಮಣುಗನೆಂಬ ಉಲ್ಲಾಸತೆರೆ | ಮುಂಬರಿಯ ಹರ್ಷರಸದಿಂದ ನಗುವಂತೆ ತಾನಿರ್ವಗೆಯೊಳೊಪ್ಪುತಿಹುದು | --~ ~ ~ ಅನಂತ್ ೦೯:೩೦, ೧೨ ಫೆಬ್ರುವರಿ ೨೦೧೮ (UTC) 1. ಪ್ರಭುದೇವ, ಬಸವ, ಸಂಗಮನಾಥ, ಮಳೆಯಮಲ್ಲೇಶ, ಚೆನ್ನ ಬಸವ, ಮಡಿವಾಳದೇವಯ್ಯ, ಮಂಚಣ್ಣ, ಮನುದಾರಿ, ಹೊಡೆಹುಲ್ಲ ಬಂಕಯ್ಯ, ಮೋಳಿಗೆಯ ಮಾರಯ್ಯ, ಕೋಲಶಾಂತಯ್ಯ, ರೇಚಯ್ಯ, ಅಪ್ಪಣ್ಣ, ಸತ್ಯಣ್ಣ,
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೯೧
ಗೋಚರ