ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ವಿರೂಪಾಕ್ಷ ಪಂಡಿತ 307 ಯುದ್ಧ ಇತ್ತರದ ಬಲವು ಬಣ್ಣಗಳ ಕಿತ್ತು ಭಟ | ರೊತ್ತಿ ಜಡಿಯುತ್ತಲಗನೆತ್ತಿ ನೆತ್ತಿಗೆ ಹೊಯ್ದು ! ಮತ್ತೆ ಹೊಸನೆತ್ತರೊಸರುತ್ತಿರಡುಸೈನ್ಯದೊಳು ಕತ್ತರಿಸಿ ಕೆ ಕುತುಹುತ್ತಲಿ | ಮುತ್ತಿ ಮೂದಲಿಸುತ್ತ ಮುನಿಮುನಿದು ಓಡುತ್ತ | ತತ್ತರಿಸಿ ಬೀಡಿತ್ತ ಪೂತ್ತು ತೃಣಪಾಷಾಣ | ಪುತ್ತವನು ಪತ್ರುತ್ತ ಪಲ್ಗಿರಿದು ಸತ್ತ ಸರಿದು ಚೀರುತ್ತಲಿತ್ತಂಡವೀತೆರಿದೊಳು || ಸೂಳೆಗೇರಿ ಸಿಂಗರದ ತಾಣ ಸೊಬಗಿನ ಸಂತೆಯತಿಕುಟಿ:» | ದಂಗಡಿ ದಶಾವಸ್ಥೆಗಳ ನಂಜಿನಾಗರವು | ಕಂಗಳತಿಹಬ್ಬ ಕಾವನ ಸುಗ್ಗಿ ಯಾಪೊಲಂ ಭಂಗಿಭಾವದೊಳೆ ಬೆಳೆವಾ | ಇಂಗಿತದ ಬೀಡು ಬೇಟದ ತೋಟ ಮೋಹದ ತ | ರಂಗ ತವಕದ ಗೊತ್ತು ಬೆಡಗಿನುದ್ಧ ವಭೂಮಿ | ಯಂಗಜನ ಅವಸರಸರಂಗಳಂತಿಹ ಸೂಳೆವೆಂಗಳಾಕೇರಿಯೆಸೆಗು || ಸ್ತ್ರೀಯರು ಅರೆಬಿರಿದ ಸಂಪಗೆಯಲರ್ನಾಸಿಕದ ಬೆದ | ರ್ದೆರಳೆಗಂಗಳನಂಗಧರ್ಮ ದಂತಿಹ ಪುರ್ಬ ಮರುದುಂಬಿಗುರುಳ ಮಣಿಖಚಿತಕನ್ನಡಿಕದಪು ಕಳೆಕುಲಿಶವದನರದದ ! ತುರುಗೆವೆಯ ತೆಳ್ದುಟಿಯ ಅರ್ಧೆ೦ದುನಿಟಿಲ ಬಹು | ಸಿರಿಕರ್ಣ ಕಂಬುಗಳ ಕಲಶಕುಚ ನಳಿತೋಳು | ಹರಿಮಧ್ಯ ಗಿರಿಜಘನ ಬಾ ತರೆಡೆ ಬಡಬಾಸೆಯೆಳೆವೆಣ್ಗಳೆಸೆದಿರ್ದರು | ವಿರೂಪಾಕ್ಷಪಂಡಿತ 1584 ಈತನು ಚೆನ್ನಬಸವಪುರಾಣವನ್ನು ಬರೆದಿದ್ದಾನೆ. ಇವನು ವೀರ ಶೈವಕವಿ. ತನ್ನ ಗುರು ಪರಂಪರೆಯನ್ನು ಹೀಗೆ ಹೇಳಿದ್ದಾನೆ:- ಶಿವನೇ ಮಲ್ಲೇಶನೆಂಬ ಅಭಿಧಾನದಿಂದ ಭೂಮಿಯಲ್ಲಿ ಅವತರಿಸಿದನು. ಇವನು ಸಕಲದೇಶಗಳನ್ನೂ ಸಂಚರಿಸಿ 700 ಖಲಿಂದರರಿಗೆ ಗುರುವಾಗಿ ಮುಖ್ಯಕ್ಕೆ (ಮೆಕ್ಕ) ಹೋಗಿ ಮಹಿಮೆಯನ್ನು ತೋರಿ ತುರುಕಾಣ್ಯದಲ್ಲಿ ಪ್ರಾಪ್ತವಾಗಿದ್ದ ಅನಾವೃಷ್ಟಿ