ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

308 ಕರ್ಣಾಟಕ ಕವಿಚರಿತೆ. [16 ನೆಯ ಯನ್ನು ಪವಾಡದಿಂದ ನಿವಾರಣೆಮಾಡಿ ಸುರಿತಾಳನಿಂದ ಪೂಜೆಯನ್ನು ಕೈಕೊಂಡು ಘನತರವಾದ ಕೀರ್ತಿಯನ್ನೂ ಮಳೆಯ ಮಲ್ಲೇಶ ಎಂಬ ಹೆಸರನ್ನೂ ಪಡೆದನು, ಇವನ ಸಂಪ್ರದಾಯದಲ್ಲಿ ಪಟ್ಟ ಲಾಬ್ಬಿ ವರ್ಧನಪೂರ್ಣಸೋಮನಾದ ಸಿದ್ಧವೀರೇಶನು ಪ್ರ ಖ್ಯಾತನಾಗಿ ವಿದ್ಯಾನಗರಿಯ ಹಿರಿಯಮರದಲ್ಲಿ ಗುರುವಾಗಿದ್ದನು, ಇವನ ಶಿಷ್ಯ ಕವಿ ವಿರೂಪಾಕ್ಷ ಪಂಡಿತ. ಸಕಲಾಗಮಪುರಾಣಕೋವಿದಂ, ಸರಸಕರ್ಣಾಟಾದಿಭಾಶಾವಿಶಾ ರದಂ, ವರಕವಿಪ್ರಕರಮಾನಸರಾಜಹಂಸಂ,ಅಸುಹೃತ್ಕವಿಪ್ರತತಿ ವಾರ್ಧಿವ ಡಬಂ, ಪರಕವಿಯ ನಾಲಗೆಕಿವಿಮನಂಗಳಂ ಸೆಳ ನವಂ ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ, ತನ್ನ ಗ್ರಂಥವನ್ನು ಶಕ 1507 ನೆಯ ತಾರಣವರ್ಷದಲ್ಲಿ-ಎಂದರೆ 1584 ರಲ್ಲಿ-ಬರೆದಂತೆ ಹೇಳುತ್ತಾನೆ. ಪೂರ್ವಕವಿಗಳನ್ನು ಈ ಪದ್ಯದಲ್ಲಿ ಸ್ಮರಿಸಿದ್ದಾನೆ. ಸರಸಕವಿ ಬಾಣನು ಮಯೂರ ಭವಭೂತಿ ಸ | ದ್ವರಕಾಳಿದಾಸ ಮಹಣ ಮಳೆಯರಾಜನತಿ | ಬಿರುದಂಕ ಕವಿರಾಘವಾಂಕ ಹಂಪೆಯಹರೀಶ್ವರ ಹಲಾಯುಧನುಧೋಟ | ಗುರುಪಂಡಿತೇಶ ಪಾಲ್ಕುರಿಕೆಯಾರಾಧ್ಯ ಭೀ || ಮರಸ ಮಗ್ಗೆ ಯಮಾಯಿದೇವ ಚಾಮರಸ ಶಂ | ಕರ ಕೆನೆಯಪದ್ಮರಸರಾದಿಶಿವಕವಿಗಳಂ ಬಲಗೊಂಡು ಕೃತಿವೇಕವ್ವನು || ಇವನ ಗ್ರಂಥ ಚೆನ್ನಬಸವಪುರಾಣ ಇದು ವಾರ್ಧಕ ಸಮ್ಪದಿಯಲ್ಲಿ ಬರೆದಿದೆ; ಕಾಂಡ 5, ಸಂಧಿ 63, ಪದ್ಯ 289&, ಇದರಲ್ಲಿ ಬಸವನ ಸೋದರಿ ನಾಗಲಾಂಬಿಕೆಯ ಪುತ್ರನಾದ ಚೆನ್ನ ಬಸವನ ಚರಿತೆ ವರ್ಣಿತವಾಗಿದೆ, ಅಲ್ಲದೆ ಶಿವನ ಲೀಲೆಗಳು, ಸೋಮಸೂ ರ್ಯಾನ್ವಯ, ಹರಶರಣರ ಚರಿತೆ, ದೀಕ್ಷಾವಿಧಾನ ಪಟ್ಟಲ, ಕಾಲಜ್ಞಾನ ಈ ವಿಷಯಗಳೂ ನಿರೂಪಿಸಲ್ಪಟ್ಟಿವೆ. “ಕರ್ಣಾಟಕವ್ಯಾಕರಣ ಛಂದಸ್ಸಲಂಕಾರಶಬ್ದಂಗಳ ಅನುಗೊಳಿಸಿ ವರ್ಣಕಕ್ಕಿಲ್ಲ ಲಕ್ಷಣವೆಂಬ ಜನರ ನಾಣ್ಣುಡಿಯನಲ್ಲೆನಿಸಿ ಪೇgಂ ವಿನೂ { Vol, 1, 145»