ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತೆ [& ನಡು ಲುಳಿತಾಲಂಕ್ರಿಯೆಗಾಢ್ಯಮಾಗಿ ಸೊಗಸಿo ಕಂಠಕ್ಕೆ ಕರ್ಣಕ್ಕೆ ಸೈ | ತಳವಟ್ಟಿರ್ಪುವು ಸಿಂಗರಾರ್ಯರುಸಿರ್ದೀ ಶ್ರೀಸೂಕ್ತಿಮುಕ್ತಾಳೆಗಳ * # ಅಂದಂಬೆತ್ತ ಪದಕ್ರಮಂಗಳಿನನೇಕಾಲಂಕ್ರಿಯಾಭಿಖ್ಯೆಯಿಂ || ಚಂದಂ ಮುಂಒರಿವೊಂದುಭಾವತತಿಯಿಂ ಚಂಚದ್ರಸಸ್ಫೂರ್ತಿಯಿಂ | ಒಂದೇರೀತಿಯೊಳೊಂದಿ ಬರ್ಪ ದನಿಯಿಂದಾಹ್ಲಾದಮಂ ಮಾಛ್ಕುಮಾ | ನಂದಂ ಕೈಮಿಗೆ ಸಿಂಗರಾಧ್ಯರೊರೆದೀಕಾರ್ಣಾಟಕಂ ನಾಟಕಂ ಗ್ರಂಥಾಪಹಾರದಲ್ಲಿ ಗೋವಿಂದನ ಸ್ತುತಿರೂಪವಾದ ನಾಂದಿ ಇದೆ ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ತೆಂಗಾಳಿ ಗಿಳಿದೇರನ ಒಗೆವಂದೊ |ಳ್ಗೆಳೆಯಂ ತೆಂಗಾಳಿ ಮಾಮರಗಳೊಳ್ಮುಗುಳಂ | ಬೆಳೆಯಿಸುತಂಗನೆಯರ ಮನ ದೊಳೆ ಮಾನಮನುಡುಗಿಸುತ್ತೆ ಬೀಸುಗುಮಳೆವಿಂ ಮನಸ್ಸನ್ನು ಕುರಿತು ಸಾರಸ್ವತಿಯ ಉಕ್ತಿ ಒಡನೊಗೆದು ನಲಿದು ಬಳೆಯಿಸಿ ಯೊಡನಾಡಿರ್ದೆನ್ನನುಛಿದು ನೀನೊರ್ಮೆಯೆಣ್ಗಡಿಸಿದ ಜನಮಂ ಬಟಿಸಂ | ದೊಡನೀಪರಿ ಪೋಪೆ ನಿನಗೆ ನಾಣಿಲ್ಲಕಟಾ 1 ಚಿತ್ರಪಟಮಂನೋಡಿ ವಾಸುದೇವನುಕ್ತಿ ಕಮಲಾಕೃತಿಯಂ ಲೀಲಾ | ಕ್ರಮದಿಂ ಕೀಛಿತ್ಗಿಯ್ದು ಪಕ್ಷಪಾತಮನನ್ನೊಳ್ | ಸಮೆಯಿಸುತಿರ್ಪಳ ಮಾನಸ] ಕಮರ್ಕೆಯಿಂ ಪೊಕ್ಕು ರಾಜಹಂಸಿವೊಲಮಮಾ | ಸಾರಸ್ವತಿಯಸೌಂದರ್ಯ ಇಳೆಯೊಳ್ ಪೆಂಡಿರ ತೊಂಡಿಲೊಳ್ಮಣಿಯನೀಚಂದ್ರಾಸ್ಯೆಯಂ ಸೃಷ್ಟಿಗೆ | ಝಳವಿಂ ನೋಡಿಯರಲ್ಚಿ ಕಣ್ಗಳನಜಂ ತಾಂ ವಿಸ್ಮಯಂದಾಳ್ದಿಯಂ || ಗುಳಿಯಂ ಮೂಗಿನಮೇಲಮರ್ಚಿ ತಲೆಯಂ ತೂಗುತ್ತೆ ಸಂತೋಷದಿಂ | ಭಳಿರೇ ಸೂತು ಮಝೂರೆ ಭಾಪೆನುತೆ ನಾಲ್ಕಾಸ್ಯಂಗಳಿಂ ಬಣ್ಣಿಕುಂ || ವಾಸುದೇವನ ವಿರಹ ಮುನಿಸಿo ಲೆಕ್ಕಕೆ ಬಾರದಂತೆ ಮದನಾ ನೀನೆಚ್ಚು ಚಾಣಂಗಳಂ | ಜನದೊಳ್ ಪಂಚತೆಯಂ ನೆಗಛ್ಚುಮಿಗೆ ಕಾಮಂಗೈದುಕೊಂಲಂತವ | ರ್ಕೆನಿತೋ ಎನ್ನವೊಲಿರ್ಪವಂ ಗುoಯಿನುತ್ತುಂ ಲೋಗರೊಲ್ದಾಡುವೀ ! ಯನುವಾತಂ ತಳಮೇಲೊಡರ್ಚಿದೆ ಗಡಾ ನಿನ್ನಾರ್ಪನೇವಣ್ಣಿಪೆಂ 1