ಶತಮಾನ] ಹೊನ್ನಮ್ಮ $0... ಹೊನ್ನಮ್ಮ, ಸು 168) ಈಕ ಹದಿಬದೆಯಧರ್ಮವನ್ನು ಬರೆದಿದ್ದಾಳ, ಇವಳು ಚತುರ್ಥ ವರ್ಣದವಳೆಂದು ತೋರುತ್ತದೆ, ಮೈಸೂರುದೊರೆಯಾದ ಚಿಕ್ಕದೇವರಾ ಜನ (1672-1704) ಸಂಚಿಯ ಊಳಿಗದಲ್ಲಿದ್ದಂತೆ ಹೇಳಿಕೊಂಡಿದ್ದಾಳೆ. ಈ ರಾಜನ ಪಟ್ಟಮಹಿಷಿಯಾದ ಎಳಂದೂರು ದೇವಾಜಮ್ಮಣ್ಣಿಯ ಪ್ರೀ ತಿಗೆ ಪಾತ್ರಳಾಗಿದ್ದಂತೆ ತಿಳಿವುದರಿಂದ ಇವಳ ಸ್ಥಳವು ಎಳಂದೂರಾಗಿ ದ್ದರೂ ಇರಬಹುದು, ತನ್ನ ವಿದ್ಯಾಗುರು ವೇದಮಾರ್ಗಪ್ರತಿಷ್ಠಾಪನಾ ಚಾರ್ ಉಭಯವೇದಾಂತಾಚಾರ್ ಅಳಸಿಂಗರಾಧ್ಯನೆಂದು ಹೇಳಿಕೊಂಡಿ ದ್ವಾಳ, ಈತನು ಚಿಕ್ಕದೇವರಾಜನಲ್ಲಿ ಮಂತ್ರಿಯಾಗಿದ್ದ ತಿರುಮಲಾರನ ತಮ್ಮನೂ ಮಿತ್ರವಿಂದಾಗೋವಿಂದವೆಂಬ ನಾಟಕದ ಕರ್ತೃವೂ ಆದ ಅಳ ನಿಂಗರಾರನೇ ಆಗಿರಬೇಕು, ಚಿಕ್ಕದೇವರಾಜನು ದೇವಾಜಮ್ಮಣ್ಣಿಯೋ ಡನೆ “ಈ ಹೊನ್ನಿ ಸರಸಸಾಹಿತ್ಯದ ವರದೇವತೆ, ಕಾವ್ಯಾಲಂಕಾರನಾಟಕ ಗಳ ಸವಣಿಗೆಯ ಬಲ್ಲವಳು ಎಂದು ಅಳಸಿಂಗರಾಗ್ಯನು ಹೇಳಿರುವನು. ವಿದ್ಯಾಗುರು ಶಿಷ್ಯರನ್ನು ಹೊಗಳಬೇಕಾದರೆ ಅವರಲ್ಲಿ ವಿಶೇಷಯೋಗ್ಯತೆ ಇರಬೇಕು, ಇವಳಿಂದ ಸರಸವಾದ ಒಂದು ಗ್ರಂಧವನ್ನು ಮಾಡಿಸು” ಎಂದು ಹೇಳಲು, ರಾಣಿ ಅದೇ ಮೇರೆಗೆ ಅಪ್ಪಣೆಮಾಡಲು ಹೊನ್ನಮ್ಮನು ಈ ಗ್ರಂಥವನ್ನು ಬರೆದಂತೆ ತಿಳಿಯುತ್ತದೆ. ಇವಳ ಕಾಲವು ಸುಮಾರು 1680 ಆಗಬಹುದು. - ಅವಳ ಗ್ರಂಥ ಹದಿಬದೆಯಧರ್ಮ ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 9, ಔದ 468, ಇದರಲ್ಲಿ ಹದಿಬದೆಯ ಎಂದರೆ ಪತಿವ್ರತಾಯ ಧರ್ಮವು ವಿಶದವಾಗಿ ನಿರೂಪಿ ಸಿದೆ, ರಾಮಾಯಣ, ಮಹಾಭಾರತ, ಮನ್ನಾದಿಧರ್ಮಶಾಸ್ತ್ರಗಳು ಇವ ಗಳಲ್ಲಿ ಉಕ್ತವಾದ ವಿಷಯಗಳನ್ನು ಸಂಗ್ರಹಿಸಿ ಬರೆದಂತೆ ಹೇಳಿದೆ. ಗ್ರಂ ಥಾವತಾರದಲ್ಲಿ ಪಶ್ಚಿಮರಂಗಧಾಮನ ಸ್ತುತಿ ಇದೆ, ಬಳಿಕ ರಂಗನಾಯಕಿ ಯನ್ನು ಸ್ತುತಿಸಿ ಮೈಸೂರುರಾಜರ ಪರಂಪರೆಯನ್ನು ಸಂಕ್ಷೇಪವಾಗಿ ಹೇಳಿ ಗ್ರಂಥವು ಹುಟ್ಟುವುದಕ್ಕೆ ಕಾರಣವನ್ನು ತಿಳಿಸಿ ಕವಿ ಗ್ರಂಥವನ್ನು ಆರಂಭಿ ಸಿದ್ದಾಳೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ 64
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೯೦
ಗೋಚರ