೪೯೬ ನಡೆದದ್ದೇ ದಾರಿ
ಹೈಸ್ಕೂಲು ಹೊಸದು. ಜನ ಹೊಸಬರು. ಖರೆ. ಆದರೆ ತನಗೇನೂ ಅದರಿಂದ
ತೊಂದರೆಯಾಗಲಾರದು. ತಾನು ಹೋದ ತಕ್ಬಣ ಎಲ್ಲರೂ ಎಲ್ಲ ರೀತಿಯಿಂದ ತನಗೆ
ಎಲ್ಲ ನೆರವು ನೀಡಲು ಮುಂದೆ ಬರುವುದು ನಿಶ್ಚಯ. ಹೊಸ ಪ್ರಿನ್ಸಿಪಾಲರು
"ನಿಮಗೇನಾದರೂ ಬೇಕಿದ್ದರೆ ನನಗೆ ಹೇಳ್ರಿ ಮಿಸೆಸ್ ನಾಯಕ್, ಯಾತಕ್ಕೂ
ಸಂಕೋಚಪಡಬೇಕಾಗಿಲ್ಲ'. ಅನ್ನುವುದರಲ್ಲಿ ಸಂಶಯವಿಲ್ಲ. ಸಹೋದ್ಯೋಗಿ ಶಿಕ್ಬಕರು
“ನಿಮಗೆ ಬೇಕಾದ ಪೀರಿಯಡ್ಸ್ ತಗೊಳ್ರಿ ಮಿಸೆಸ್ ನಾಯಕ್, ನಿಮ್ಮ ಅನುಕೂಲ
ಮುಖ್ಯ' -ಅಂತ ತನ್ನನ್ನು ಪ್ರಸನ್ನಗೊಳಿಸಲು ಒದ್ದಾಡುವುದೂ ನಿರೀಕ್ಷಿತವೇ.
ಹುಡುಗರು-ಹುಡುಗಿಯರಂತೂ ಒಂದೆರಡು ವಾರಗಳ ನಂತರ "ನಮಗೆ ನಾಯಕ
ಮ್ಯಾಡಮ್ ಅವರೇ ಬೇಕು" ಅಂತ ಸ್ಟ್ರೆಕ್ ಮಾಡಿದರೂ ಮಾಡಿದರೇ. ಶಿಕ್ಬಕಿಯರ
ಅಸೂಯೆಯನ್ನು ಮಾತ್ರ ತಾನು ಎದುರಿಸಬೇಕಾಗಬಹುದು. ಆದರೆ ಅದೇನೂ ತನಗೆ
ಸಮಸ್ಯೆಯಾಗಲಾರದು.
ಜೊತೆಯ ಹೆಂಗಸರ ಆಸೂಯೆ ತಾನು ಮೊದಲಿನಿಂದಲೂ ಕಂಡು ಅನುಭವಿಸಿ
ಆನಂದಿಸಿದ್ದು. ಚಿಕ್ಕವಳಿದ್ದಾಗ ಸ್ಕೂಲಿನಲ್ಲಿ ಜೊತೆಯ ಹುಡುಗಿಯರು ತನ್ನ
ರೂಪಕ್ಕಾಗಿ, ತನ್ನ ಮೊದಲ ರ್ಯಾಂಕಿಗಾಗಿ, ಬ್ಯಾಡ್ಮಿಂಟನ್ ಚ್ಯಾಂಪಿಯನ್ಶಿಪ್ಗಾಗಿ,
ಗಂಡುಹುಡುಗರೊಂದಿಗಿನ ಸ್ನೇಹಕ್ಕಾಗಿ ಅಸೂಯೆ ಪಟ್ಟರು. ಕಾಲೇಜಿನಲ್ಲೂ ಅದೇ
ಹಾಡಿನ ಪುನರಾವರ್ತನೆ. ಮಜವಾಗಿದ್ದವು ಆ ದಿನಗಳು. ನಂತರ ಟ್ರೇನಿಂಗ್
ಕಾಲೇಜಿನಲ್ಲೂ ಅಷ್ಟೆ. ಗವ್ಹರ್ನ್ಮೆಂಟ್ ಹೈಸ್ಕೂಲಿನಲ್ಲಿ ನೌಕರಿಗೆ ಸೇರಿದಾಗಲೂ
ಅಷ್ಟೆ. ತಾನು ಹೋದ ಕಡೆಯಲ್ಲೆಲ್ಲ ಜನರ ಕಣ್ಣು ಹೊರಳುವುದು, ತನ್ನ ಎರಡು
ಮಾತಿನಿಂದ ಜನರ ಕಣ್ಣು ಅರಳುವುದು, ಅಭ್ಯಾಸವಾಗಿಹೋಗಿಬಿಟ್ಟಿದೆ. ಲಗ್ನವಾದ
ನಂತರವೂ ಈ ಥರದ ಮುಕ್ತ ಪ್ರಶಂಸೆಗೆ ತಾನು ಎರವಾಗಿಲ್ಲ. ಸರಕಾರಿ ಕಾಲೇಜಿನಲ್ಲಿ
ಕೆಮ್ಮಸ್ಟ್ರಿ ರೀಡರ್ ಆಗಿರುವ ಗಂಡನಿಗೆ ತನ್ನ ಬಗ್ಗೆ ಬಹಳ ಅಭಿಮಾನ. ಆತನೂ ತನ್ನ
ಪ್ರಶಂಸಕನೇ. ಒಮ್ಮೊಮ್ಮೆ ಆತನ ಪ್ರಶಂಸೆ ಬೋರ್ ಆಗುತ್ತದಷ್ಟೆ.
ಈಗ- ಹೀಗೆ ಯಾರೂ ಕಾಣದ ಹೊಸ ಊರಿಗೆ- ಹೊಸ ಜಾಗಕ್ಕೆ ಬಂದು
ಸೇರಿರುವುದು ಅದಕ್ಕೇ ಮಜವೆನಿಸುತ್ತಿದೆ. “ಇವತ್ತಿನ್ನೂ ಬಂದಿರುವಿ ರಜನೀ, ರೆಸ್ಟ್
ತಗೋ. ನಾಳೆ ಹೋಗಿ ಕೆಲಸಕ್ಕೆ ಹಾಜರಾಗುವಿಯಂತೆ' -ಅಂತ ಮಾವಶಿ ಎಷ್ಟು
ಹೇಳಿದರೂ ಕೇಳದೆ ಹುರುಪಿನಿಂದ ಹೊರಟಿದ್ದಾಳೆ.
“ಪ್ರಿನ್ಸಿಪಾಲರ ಹತ್ತಿರ ವರ್ಮಾಬಾಯಿಯವು ಮಾತಾಡತಾ ಇದ್ದಾರೆ. ಸ್ವಲ್ಪ