೧೪ ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, NAN ೧೧೧೧೧೧೧/ •t\\ + 11, Nh/\: ಹಾರ ಮುಟ್ಟದೆ ಅವನು ಪಲಂಗದ ಮೇಲೆ ಹೋಗಿ ಬಿದ್ದನು. ವಿದ್ಯುಲ್ಲತೆಯ ದೀವಿ ಗೆಯು ಇನ್ನೂ ಪ್ರಕಾಶಮಯವಾಗಿದ್ದು, ಬೀಸಣಿಕೆಯು ಗರಗರ ತಿರಗುತ್ತಿದ್ದಿತು. ವಿನಾಯಕನು ಪಲಂಗದ ಮೇಲೆ ಬಿದ್ದು ಕೊಂಡು ತನ್ನ ಅದೃಷ್ಟದ ವಿಚಾರಮಾಡು ತಿರಲಿಕ್ಕೆ ಸಹಜ ಕಣ್ಣಿಗೆ ಕಣ್ಣು ಹತ್ತಿತು. ನಿದ್ರಾಭಂಗವಾಗುವ ವೇಳೆಗೆ ಅವನಿಗೆ ಒಬ್ಬ ಅತ್ಯಂತ ಸುಂದರ ಸ್ತ್ರೀಯು ತನ್ನ ಹತ್ತಿರ ಬಂದು ತನಗೆ - ಏಳಿರಿ, ಪ್ರಯತ್ನ ಮಾಡಿರಿ, ಅಂದರೆ ಮುಕ್ತರಾದೀರಿ, ' ಎಂದು ಹೇಳುವಂತೆ ಒಂದು ಚಮತ್ಕಾರಿಕ ಸ್ವಷ್ಟವು ಬಿದ್ದಿತು. ಸ್ವಪ್ನವು ಮುಗಿಯುತ್ತಲೇ ಅವನಿಗೆ ಎಚ್ಚರವಾಯಿತು, ಕಣ್ಣು ತೆರೆದು ಅವನು ತನ್ನ ದೃಷ್ಟಿಯನ್ನು ಹೊರಚಲ್ಲುತ್ತಿರಲಿಕ್ಕೆ ಒಬ್ಬ ತರುಣ ಸುಂದರ ಸ್ತ್ರೀಯ ದೃಷ್ಟಿಗೆ ಬಿದ್ದಳು. ಅವಳಿಗೆ ಬಹಳವಾದರೆ ೧೬-೧೭ ವರ್ಷವಾಗಿರಬಹುದು. ಅವಳು ತೆಳ್ಳನ್ನ ಶುಭ್ರ ವಸ್ತ್ರವನ್ನು ಉಟ್ಟು ಕೊಂಡಿದ್ದಳು; ಅವಳ ಮೈ ಮೇಲೆ ವಿಶೇಷ ಅಲಂಕಾರಗಳೇನೂ ಇದ್ದಿಲ್ಲ. ಒಮ್ಮಿಂದೊಮ್ಮೆಲೆ ಈ ದಿವಾಣಖಾನೆಯಲ್ಲಿ ಇಂಥ ಸ್ತ್ರೀಯಳ ಆಗಮನವು ಹೇಗಾಯಿತೆಂಬ ಬಗ್ಗೆ ಮೊದಲು ವಿನಾಯಕನಿಗೆ ಆಶ್ಚರ್ಯ ವೆನಿಸಿತು, ಆದರೆ ಈ ಆಶ್ಚರ್ಯವು ಬೇಗನೆ ಇಲ್ಲದಂತಾಗಿ ಅಂತಃಕರಣದಲ್ಲಿ ಒಂದು ಪ್ರಕಾರದ ಭೀತಿಯು ಹುಟ್ಟಿತು. ಕೂಡಲೆ ಅವನು ಕಣ್ಣು ಮುಚ್ಚಿಕೊಂಡು ಬಂದ ಸ್ತ್ರೀಯ ಕಡೆಗೆ ಬೆನ್ನು ಮಾಡಿ ಮಲಗಿದನು, ಅವನು ಮನಸ್ಸಿನಲ್ಲಿ ಬಂದ ಸ್ತ್ರೀಯು ವೇಶ್ಯಿರಬಹುದೆಂದು ಆಲೋಚಿಸಿದನು. ಶಾಮರಾಯನು ತನ್ನ ಕೈಯಿಂದಾಗ ದ್ದಕ್ಕೆ ಈ ಸ್ತ್ರೀಯಿಂದಾದರೂ ಮೋಹಗೊಳಿಸಿ ನನ್ನ ಸಹಿ ತಕ್ಕೊಳ್ಳುವ ವಿಚಾರ ಮಾಡಿದಂತೆ ಕಾಣಿಸುತ್ತದೆ, ಎಂದಾಲೋಚಿಸಿ ಅವನು ಬೇಕಾದವರು ಬೇಕಾದದ್ದು ಮಾಡಲಿ, ನಾನಂತೂ ಎಂದೂ ಸಹಿ ಮಾಡಲಿಕ್ಕಿಲ್ಲವೆಂದು ನಿಶ್ಚಯಿಸಿದನು. ಸ್ವಲ್ಪ ವೇಳೆ ಆ ಸಂಬಂಧವಾಗಿ ವಿಚಾರಮಾಡುತ್ತಿರಲಿಕ್ಕೆ ತಿರುಗಿ ಅವನಿಗೆ ಬಂದ ಸ್ತ್ರೀಯನ್ನು ಚನ್ನಾಗಿ ನೋಡದೆ ಅವಳಿಗೆ ವೇಶ್ಯೆಂಬ ಆರೋಪವನ್ನು ಕೊಡುವದು ಯೋಗ್ಯ ವಲ್ಲೆಂದು ತೋರಿತು. ಅವನು ಬೆನ್ನು ತಿರುಗಿಸಿ ಅವಳಿಗೆ ಕಾಣದಂತೆ ಅವಳನ್ನು ನೋಡಹತ್ತಿದನು. ಎಷ್ಟೋ ವೇಳೆಯವರೆಗೆ ನೋಡಿದ ಮೇಲೆ ಅವನಿಗೆ ಬಂದ ಸ್ತ್ರೀಯು ವೇಶ್ಯಯಲ್ಲವೆಂಬುವದು ಖಾತ್ರಿಯಾಯಿತು. ಆಗ ಅವನಿಗೆ ಆ ಸ್ತ್ರೀಯ ಮೇಲೆ ಮಾಡಿದ ಆರೋಪದ ಸಲುವಾಗಿ ಅನುತಾಪವಾಯಿತು; ಆದರೂ ಇಂಥ ವೇಳೆಯಲ್ಲಿ ಎರಡನೇ ಪುರುಷರ ದಿವಾಣಖಾನೆಯಲ್ಲಿ ಪರಸ್ತ್ರೀಯು ಬರುವದು ವಿಸಂಗತ ವಾದದ್ದರಿಂದ ಅವಳು ಯಾವ ಉದ್ದೇಶದಿಂದ ಬಂದಿದ್ದಾಳೆಂಬುವದರ ಸಲುವಾಗಿ ಅವ ನಿಗೆ ಒಳ್ಳೆ ಜಿಜ್ಞಾಸೆಯುತ್ಪನ್ನವಾಯಿತು. ಆ ಸ್ತ್ರೀಯು ಕುಲೀನಳಾಗಿದ್ದರೂ ಇಂಥ ಅಪರಾತ್ರಿಯಲ್ಲಿ ಪರಪುರುಷನ ಹತ್ತಿರ ಬಂದು ನಿಲ್ಲುವದು ಅಯೋಗ್ಯವಾದದ್ದರಿಂದ ಅವಳ ಉದ್ದೇಶವು ಕೆಟ್ಟ ದಿರಬೇಕಾಗಿಯೂ, ಅವಳು ಬಹಳ ಮಾಡಿ ಮೃತ್ಯುಪತ್ರದ ಸಹಿಗಾಗಿಯೇ ಬಂದಿರಬೇಕೆಂದೂ ಅವನು ತರ್ಕಿಸಿದನು. ಅಷ್ಟರಲ್ಲಿ ಅವನಿಗೆ
ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೩೭
ಗೋಚರ