ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ನೆಯ ಪ್ರಕರಣ- ಇಂದಿರೆಯ ಆತ್ಮನಿವೇದನ ! ೫ vvvvv ಸ್ವಷ್ಟ ದ ಸ್ಮರಣೆಯಾಯಿತು, ಒಬ್ಬ ಸ್ತ್ರೀಯು • ಏಳಿರಿ; ಪ್ರಯತ್ನ ಮಾಡಿರಿ, ಅಂದರೆ ಮುಕ್ತರಾದೀರಿ, ' ಎಂದು ಅಂದದ್ದರ ಅರ್ಥ ವಿಚಾರವು ಅವನ ಮನಸ್ಸಿನಲ್ಲಿ ಉತ್ಪನ್ನ ವಾಯಿತು. ಸ್ವಪ್ನದ ಮೇಲೆ ಅವನ ವಿಶ್ವಾಸವಿದ್ದಿಲ್ಲ. ಆದರೆ ಸ್ವಪ್ನದಲ್ಲಿ ನೋಡಿದ ಮಾತೇ ಎಚ್ಚರವಾದ ಕೂಡಲೆ ಕಾಣಿಸಿದ್ದರಿಂದ ಅರ್ಥಾತ್ ಅವನಿಗೆ ಒಳ್ಳೆ ಆಶ್ಚರ್ಯ ವಾಯಿತು. ಆ ಸ್ತ್ರೀಯನ್ನು ವಿಚಾರಿಸಿ ಸಂಶಯನಿವೃತ್ತಿ ಮಾಡಿಕೊಳ್ಳಬೇಕೆಂದು ಅವ ನಿಗೆ ತೋರಹತ್ತಿತು. ಎಷ್ಟೋ ವೇಳೆಯಾದರೂ ಆ ಸ್ತ್ರೀಯು ಮಾತಾಡದೆ ಮುಖ ವನ್ನು ಕೆಳಗೆ ಮಾಡಿಕೊಂಡು ವಿನಯದಿಂದ ನಿಂತದ್ದನ್ನು ನೋಡಿ ಅವನು “ ನೀವು ಯಾರು ” ಎಂದು ಕೇಳಿದನು. ಆಗ ತರುಣಿಯು ವೀಣಾನಿಂದಿತಸ್ವರದಿಂದ:- ನನ್ನ ಹೆಸರು ಇಂದಿರೆ, ” ಎಂದಂದಳು. ವಾಸ್ತವಿಕ ಇಂದಿರೆಯ ಈ ಸ್ವರವು ಸ್ವಾಭಾವಿಕವಾದದ್ದಾಗಿದ್ದಿತು. ಅವಳು ಹುಟ್ಟಾ ವಿನಯವತಿಯಾಗಿದ್ದಳು, ಆದರೆ ವಿನಾಯಕನು ಆ ವೇಳೆಯಲ್ಲಿ ಆಪತ್ತಿನಲ್ಲಿ ದ್ದದ್ದರಿಂದ ಪ್ರತಿಯೊಬ್ಬರು ತನ್ನನ್ನು ವಂಚಿಸುವ ಪ್ರಯತ್ನ ಮಾಡಹತ್ತಿದ್ದಾರೆಂದು ಅವ ನಿಗೆ ತೋರುತ್ತಿದ್ದಿತು. ಆ ಪ್ರಕಾರ ಆ ಸ್ತ್ರೀಯ ಸಂಬಂಧವಾಗಿಯೂ ಅವನಿಗೆ ಅದೇ ವಿಚಾರವು ತೋರಿತು. ಇವಳು ತನ್ನ ಮಧುರಸ್ವರದಿಂದ ಸಕ್ಕರೆಯ ಮಳೆಯನ್ನು ಸುರಿಸಿ ನನಗೆ ವಂಚಿಸುವವಳು ಇರಲಿ, ನಾನು ಯಾರ ಮೋಹಜಾಲಕ್ಕೂ ಬೀಳುವವ ನಲ್ಲ ಎಂದು ಮನಸ್ಸಿನಲ್ಲಿ ನಿರ್ಧರಿಸಿ:- ವಿನಾ: - ( ಶಾಮರಾಯನಿಗೂ, ನಿಮಗೂ ಏನು ಸಂಬಂಧ? ನೀವು ಇಷ್ಟು ರಾತ್ರಿಯಲ್ಲಿ ಇಲ್ಲಿಗೆ ಯಾಕೆ ಬಂದಿರಿ? ) ಇಂದಿರೆ:- ( ಖೇದಸ್ವರದಿಂದ ) ನಾನು ಶಾಮರಾಯನ ಪುತ್ರಿಯು, ನಿಮ್ಮ ಹಿತದ ಸಲುವಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ” ವಿನಾ:- ( ನಗುತ್ತ) ಪರೋಪಕಾರ ಮಾಡುವದೊಂದು ನಿಮ್ಮ ಮನೆಯ ವ್ರತವೇ ಕಾಣಿಸುತ್ತದೆ. ನಿಮ್ಮ ತಂದೆ ಶಾಮರಾಯನಾದರೂ ನನಗೆ ಉಪಕಾರ ಮಾಡು ವದಕ್ಕೋಸ್ಕರವೇ ಇಲ್ಲಿಗೆ ಕರಕೊಂಡು ಬಂದು ಈ ತುರಂಗದಲ್ಲಿ ಇಟ್ಟಿದ್ದಾನೆ, ನೀವೂ ಇದಕ್ಕಿಂತಲೂ ಹೆಚ್ಚಿನ ಉಪಕಾರ ಮಾಡುವದಕ್ಕೋಸ್ಕರ ನನ್ನ ನ್ನು ಮತ್ತೊಂದು ಘೋರವಾದ ಕಾರಾಗಾರದಲ್ಲಿ ಇಡುವಂತೆ ಕಾಣಿಸುತ್ತದೆ. ?” ಇಂದಿರೆ:- ( ಕೆಲಹೊತ್ತು ಸುಮ್ಮನಿದ್ದು ನಂತರ ಮಧುರಸ್ವರದಿಂದ ) ತಮಗೆ ಹಾಗೆ ತೋರುವದರಲ್ಲಿ ಆಶ್ಚರ್ಯವೇನೂ ಇಲ್ಲ, ಇಲ್ಲಿ ಬರುವ ಜನರೆಲ್ಲರು ನಿಮ್ಮನ್ನು ವಂಚಿಸುವದಕ್ಕಾಗಿಯ, ನಿಮಗೆ ತೊಂದರೆಗೊಡುವದಕ್ಕಾಗಿಯೂ ಬರುತ್ತಾರೆಂದು ನಿಮ್ಮ ತಿಳುವಳಿಕೆಯಾಗುವದು ಸಾಹಜಿಕವಾಗಿದೆ; ಆದರೆ ಎಲ್ಲ ಮನುಷ್ಯರ ಸ್ವಭಾ