ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಇನ್ನಷ್ಟು ಕತೆಗಳು / ವೀಣಾ ನಡೆದ ದಾರಿ....
೫೩೫

ಐದು ಕಥಾಸಂಗ್ರಹಗಳು, ಎರಡು ಕಾದಂಬರಿಗಳು, ಅನುವಾದಗಳು,
ಸಂಪಾದಿತ ಕೃತಿಗಳು ಅಲ್ಲದೆ ಇಂಗ್ಲಿಷ್ ನಲ್ಲೂ ಬರವಣಿಗೆ ಮಾಡಿರುವ ವೀಣಾ
ಶಾಂತೇಶ್ವರ ಅವರ ಕೃತಿಗಳ ಕುರಿತು ಕನ್ನಡದಲ್ಲಿ ಒಳ್ಳೆಯ ವಿಮರ್ಶೆ ಬಂದಿದೆ.
ಓದುಗರ ಪ್ರತಿಕ್ರಿಯೆ, ಪ್ರಶಂಸೆ, ಪ್ರಶಸ್ತಿಗಳೂ ಸಿಕ್ಕಿವೆ. ಇಪ್ಪತ್ತನೇ ಶತಮಾನದಲ್ಲಿ
ಮೂರುವರೆ ದಶಕಗಳಷ್ಟು ಅವಧಿಯಲ್ಲಿ ಅವರ ಈ ಸಾಹಿತ್ಯ
ರಚಿತವಾಗಿದೆಯಾದರೂ ಇಪ್ಪತ್ತನೇ ಶತಮಾನದ ವಿಮರ್ಶೆಯ ಪ್ರಾತಿನಿಧಿಕ
ಕೃತಿಯಾದ ಕರ್ನಾಟಕ ಸಾಹಿತ್ಯ ಅಕ್ಯಾಡೆಮಿಯವರು ಪ್ರಕಟಿಸಿದ 'ಶತಮಾನದ
ವಿಮರ್ಶೆ' ಕೃತಿಯಲ್ಲಿ ವೀಣಾ ಅವರ ಸಾಹಿತ್ಯ ಕುರಿತು ಒಂದು ಸಾಲೂ
ಇಲ್ಲದಿರುವುದು ವಿಪರ್ಯಾಸ. ಇನ್ನೊಬ್ಬ ಮೌಲಿಕ ಲೇಖಕಿ ವೈದೇಹಿ ಕುರಿತೂ
ಶತಮಾನದ ವಿಮರ್ಶೆ ಮೌನ ತಾಳಿದೆ. ಸಾಹಿತ್ಯ ಅಕ್ಯಾಡೆಮಿಯವರು ಪ್ರಕಟಿಸಿರುವ
ಶತಮಾನದ ಕಥೆಗಳು ಮುನ್ನುಡಿಯಲ್ಲೂ ೨೦ನೇ ಶತಮಾನದ ಎಲ್ಲ ಚಳುವಳಿಗಳ
ಬಗ್ಗೆ ಪ್ರಸ್ತಾಪಿಸಿರುವ ಸಂಪಾದಕರು 'ಸ್ತ್ರೀವಾದ' ಎಂಬ ಪದವನ್ನೇ ಗುರುತಿಸಿಲ್ಲ.
ನೇಮಿಚಂದ್ರರಂತಹ ಮುಖ್ಯ ಲೇಖಕಿಯನ್ನೆ ಕೈಬಿಟ್ಟಿರುವ ಸಂಪಾದಕರು ಕೇವಲ ಆರು
ಜನ ಕಥೆಗಾರ್ತಿಯರ ಕತೆಗಳನ್ನು ಸೇರಿಸಿದ್ದಾರೆ. ಇದನ್ನೆಲ್ಲ ಗಮನಿಸಿದಾಗ ವೀಣಾ
ಅವರ ಕಥಾನಾಯಕಿಯರಿಗೆ ಬರುವ ಕೋಪ ನಮಗೂ ಬಂದರೆ ಆಶ್ಚರ್ಯವಿಲ್ಲ.
ಇಷ್ಟೆಲ್ಲ ಮೌಲಿಕ ಕೃತಿಗಳನ್ನು ರಚಿಸಿರುವ ವೀಣಾ ಶಾಂತೇಶ್ವರ ಅವರ ಲೇಖನಿ
ಇನ್ನೂ ದೀರ್ಘಕಾಲ ಒಳ್ಳೆಯ ಕೃತಿಗಳನ್ನು ರಚಿಸಲಿ ಎಂಬ ಸದಾಶಯದೊಂದಿಗೆ.


ತಾ. ೨೩-೦೨-೨೦೦೬
ಪ್ರೀತಿಯಿಂದ
ಡಾǁ ಎಲ್.ಸಿ.ಸುಮಿತ್ರಾ
ತುಂಗಾ ಕಾಲೇಜು, ತೀರ್ಥಹಳ್ಳಿ