ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೫೪
ಕದಳಿಯ ಕರ್ಪೂರ


ಕೆಂದೂಳನ್ನು ಕೆದರುತ್ತಾ ಗಾಡಿ ನಡೆಯತೊಡಗಿತ್ತು. ಎತ್ತುಗಳ ಕೊರಳೊಳಗಿನ ಚಿಕ್ಕ ಚಿಕ್ಕ ಗಂಟೆಗಳ ಶಬ್ದ, ಲಯಬದ್ಧವಾದ ರೀತಿಯಲ್ಲಿ ತಾಳಹಾಕುತ್ತಿತ್ತು. ಶಿವಮ್ಮ ತನ್ನ ಪಕ್ಕದಲ್ಲಿ ಕುಳಿತಿದ್ದ ಮಹಾದೇವಿಯನ್ನು ಕೇಳಿದಳು.

``ಕುಂತಳಾಪುರದಲ್ಲಿ ಯಾರ ಮನೆಗೆ ಹೋಗಬೇಕಮ್ಮ ?

``ಅಲ್ಲಿ ನನಗೆ ಯಾರೂ ಗೊತ್ತಿಲ್ಲಾ, ತಾಯಿ.

``ಅಂದರೆ ! ಅಲ್ಲಿಗೆ ಹೋಗಬೇಕು ಅಂದಿ ? ಅಚ್ಚರಿಯಿತ್ತು ಶಿವಮ್ಮನ ಧ್ವನಿಯಲ್ಲಿ.

``ಈ ದಿನದ ಮಟ್ಟಿಗೆ ಅಲ್ಲಿಗೆ. ನಾಳೆ ಅಲ್ಲಿಂದ ಮುಂದೆ ; ಅಷ್ಟೆ.

``ಇದೇನು ! ನೀನು ಹೇಳುವ ಮಾತೇ ತಿಳಿಯುವುದಿಲ್ಲ. ಹೋಗಲಿ... ನಿನ್ನ ಊರಾವುದು? ಈಗ ಎಲ್ಲಿಂದ ನೀನು ಹೊರಟಿದ್ದೀಯ ?

``ಈಗ ನಾನು ಉಡುತಡಿಯಿಂದ ಹೊರಟಿದ್ದೇನೆ. ಮಹಾದೇವಿ ಹೇಳದೆ ವಿಧಿಯಿಲ್ಲವಾಯಿತು.

ಇದನ್ನು ಕೇಳಿದೊಡನೆಯೇ ಶಿವಯ್ಯನವರು :

``ಉಡುತಡಿ ! ನಿನ್ನ ಊರು ಉಡುತಡಿಯೇನಮ್ಮಾ ? ಅಚ್ಚರಿಯಿಂದ ಪ್ರಶ್ನಿಸಿದರು.

``ನಿನ್ನ ಹೇಸರೇನಮ್ಮ ? ಮತ್ತೆ ಜೊತೆಯಲ್ಲಿಯೇ ಶಿವಯ್ಯನವರ ಪ್ರಶ್ನೆಯೂ ಬಂದಿತು. ಅದು ಶಿವಯ್ಯನವರಿಗೂ ಬೇಕಾದ ಪ್ರಶ್ನೆಯಾಗಿತ್ತು.

``ಮಹಾದೇವಿ ?... ಯಾವ ಮಹಾದೇವಿ ? ಇನ್ನೂ ಆಶ್ಚರ್ಯದಿಂದ ಕೇಳಿದರು ಶಿವಯ್ಯನವರು.

ಅವರ ಪ್ರಶ್ನೆ ಮಹಾದೇವಿಗೆ ಅರ್ಥವಾಗಲಿಲ್ಲವೆಂದೋ ಏನೋ, ಶಿವಮ್ಮ ಅದನ್ನು ಸರಳಗೊಳಿಸಿ ಕೇಳಿದಳು :

``ಅಂದರೆ ನಿನ್ನ ತಂದೆತಾಯಿಗಳು ಯಾರಮ್ಮಾ ?

ಮಹಾದೇವಿ ಕ್ಷಣಕಾಲ ಆಲೋಚಿಸಿದಳು. ಹೇಳದೇ ಇರುವ ಅಗತ್ಯವೇನು ಕಾಣಲಿಲ್ಲ. ಹೇಳಿದಳು :

``ಉಡುತಡಿಯಲ್ಲಿ ಓಂಕಾರಶೆಟ್ಟರು ಅಂತ ಒಬ್ಬರಿದ್ದಾರೆ... ಮುಂದೆ ಮಾತನಾಡುವ ಅವಕಾಶವನ್ನೇ ಕೊಡಲಿಲ್ಲ ಶಿವಯ್ಯನವರು. ಅವರ ಕುತೂಹಲ ನಿಜವಾಗಿತ್ತು. ಮಧ್ಯದಲ್ಲಿಯೇ ಉದ್ಗಾರ ತೆಗೆದರು :