ಮಜೇದ ೧ ದ ೧. ೨೧ 19 ವಟ್ಟು ಅಲ್ಲಿ ಉಂಟಾಗತಕ್ಕೆ ಅಪಾಯಗಳಿಗೆ ತಲೆಕೊಡತಕ್ಕವರು ವಿರಳರಾಗಿ ರುತ್ತಾರೆ. ಕಷ್ಟ ಪಟ್ಟವರೇ, ಆ ಕಷ್ಟದಿಂದ ಉತ್ಪನ್ನ ವಾದ ಫಲಕ್ಕೆ ನಿಜ ವಾಗಿ ಪಾತ್ರರಾಗುವರು , ಉಳಿದವರೆಂದಿಗೂ ಪಾತ್ರರಾಗುವುದಿಲ್ಲ. ಸುಖವನ್ನು ಮಾತ್ರ ಅಪೇಕ್ಷಿಸಿ ಕಷ್ಟ ಪಡುವುದರಲ್ಲಿ ಇಷ್ಟವಿಲ್ಲದವರಿಗೆ, ಸಿಜವಾದ ಸುಖವು ಎಂದಿಗೂ ದೊರೆಯುವುದಿಲ್ಲ ಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸಮಾಡತಕ್ಕವರಿಗೆ ನೆರಳಿನ ಸುಖವು ತಿಳಿಯುವಂತೆ, ನೆರಳಲ್ಲಿಯೇ ಅಜಗರದಂತೆ ಬಿದ್ದಿರತಕ್ಕವರಿಗೆ ಎಂದಿಗಾದರೂ ಅದರ ಸುಖವು ಗೊತ್ತಾಗು ವದೆ ” ಎಂದಿಗೂ ಗೊತ್ತಾಗುವುದಿಲ್ಲ ಎಂದು ಧೈಯ್ಯದಿಂದ ಹೇಳಬಹುದು. ಫೆಸಿಫಿಕ್ ಸಾಗರದಲ್ಲಿ ಲಕ್ಷಾಂತರ ದ್ವೀಪಗಳಿರುತ್ತವೆ ಈ ಸಾಗ ರಕ್ಕೆ ಇವುಗಳು ಒಡವೆಗಳಂತೆ ಪರಿಣಮಿಸಿವ ಇವುಗಳು ಹೇಗೆ ಸೃಷ್ಟಿಸು ಲ್ಪಟ್ಟು ವು' ಯಾರಿಂದ ಸೃಷ್ಟಿಸಲ್ಪಟ್ಟು ವ್ರ' ಹವಳದ ಹುಳಗಳೆಂಬು ದಾಗಿ, ಸಮುದ್ರದಲ್ಲಿ ಕೆಲವು ಸೂಕ್ಷ್ಮವಾದ ಹುಳಗಳಿರುತ್ತವೆ. ಇವು ಗಳು ಅಸಂಖ್ಯಾತವಾಗಿ ಸೇರಿ, ಮರಳನ್ನು ಒಂದೊಂದು ಕಾಳಾಗಿ ತಂದು ಗುಂಪುಗೂಡಿಸುತ್ತವೆ. ಕೊನೆಗೆ ಈ ಮರಳಿನ ಕಾಳುಗಳೆಲ್ಲ ದೊಡ್ಡ ಪಕ್ವತವಾಗಿ ಮೇಲಕ್ಕೆದ್ದು, ದ್ವೀಪಗಳೆನ್ನಿಸಿಕೊಳ್ಳುತ್ತವೆ. ಈ ದ್ವೀಪ ವನ್ನು ನಿರ್ಮಾಣಮಾಡುವ ಕೆಲಸದಲ್ಲಿ, ಲೆಕ್ಕವಿಲ್ಲದಷ್ಟು ಪ್ರಾಣಿಗಳು ಅವಿಚ್ಛಿನ್ನವಾಗಿ ವ್ಯವಸಾಯಮಾಡುತ್ತವೆ, ಅವುಗಳ ವ್ಯವಸಾಯವನ್ನು ನೋಡಿದರೆ, ನಮಗೆ ನಾಚುಗೆಯಾಗದಿರುವುದಿಲ್ಲ. ಪ್ರಾಣಿವರ್ಗದಲ್ಲಿ, ಹೆಚ್ಚಾದ ಬುದ್ಧಿ ಬಲವುಳ್ಳವರು ಮನುಷ್ಯಗೆ ಅಣುರೇಣುಗಳಂತಿರತಕ್ಕೆ ಪ್ರಾಣಿಗಳು ಕೂಡ ಅದ್ಭುತವಾದ ಕೆಲಸವನ್ನು ಮಾಡುತ್ತಿರುವಾಗ, ಮನು
ಪುಟ:ವಿದ್ಯಾರ್ಥಿ ಕರಭೂಷಣ.djvu/೨೯
ಗೋಚರ