ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ೩೭ MM ಪಂಕ್ತಿಯಾಗಿಟ್ಟು ಕೊಳ್ಳುವುದುಂಟು. ಆದರೆ, ಈ ಮೇಲುಪಂಕ್ತಿಗಳಲ್ಲಿ ಗುಣಗಳನ್ನೂ ನ್ಯೂನಾತಿರಿಕ್ಯಗಳನ್ನೂ ಹೇಗೆ ಬಿಡಬೇಕೋ, ಅದನ್ನು ಕಲಿ ತುಕೊಳ್ಳಬೇಕು, ಮೇಲು ಪಂಕ್ತಿಯನ್ನು ಹಾಕತಕ್ಕ ತಾಯಿ ತಂದೆಗಳು, ಈ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು, ಪಾಠಕರೂ ತಾಯಿ ತಂದೆಗಳೂ ಮಾಡುವ ಅವಿವೇಕದಿಂದಲೂ, ಅವರ ಅಜ್ಞಾನದಿಂ ದಲೂ, ಅನರ್ಧಗಳಿಗೆ ಅವಕಾಶವಾಗುವುದುಂಟು. ಅಲಗ್ಗಾಂಡರ್‌ ದಿ ಗ್ರೇಟ್ ಎಂಬವನಿಗೆ, ಅವನ ಉಪಾಧ್ಯಾಯನಾದ ಅಸಿಮೇಕಸ್‌ ಎಂಬವನು, ಮಹಾಶೂರನಾದ ಎಕಲಿಸ್ ಎಂಬವನು ತನ್ನ ಶತ್ರುವನ್ನು ತನ್ನ ರಥಕ್ಕೆ ಕಟ್ಟಿ ಎಳೆದು ಕೊಂಡುಹೋದ ವಿಷಯವನ್ನೂ ತಿಳಿಯಿಸಿದ್ದನು. ಅಲೆಗ್ವಾಂಡರನು, ತನ್ನ ಕಾಲದಲ್ಲಿ ಗೊತ್ತಾಗಿದ್ದ ದೇಶ ಗಳನ್ನೆಲ್ಲ ಜಯಿಸುವಾಗ್ಗೆ, ತನ್ನಿಂದ ಸೋತುಹೋದ ಒಂದು ಪಟ್ಟಣದ ಒಬ್ಬ ಪ್ರಭುವನ್ನು ತನ್ನ ರಧಕ್ಕೆ ಕಟ್ಟಿಸಿ ಬೀದಿಯಲ್ಲಿ ಎಳೆಯಿಸಿದನು. ಬ್ರಿಟಿಷ್ ಜನರು, ತಮ್ಮ ದೊರೆಗಳಲ್ಲಿ ಧರ್ಮವನ್ನು ಲ್ಲಂಘಿಸಿದ ಚಾರಲ್ಸ್ ದಿ ಫಸ್ಟ್‌ ಎಂಬ ದೊರೆಯು ಶಿರಸ್ಸನ್ನು ಛೇದಿಸಿದರು. ಇವರ ಮೇಲುಪಂ ಕಿಯನ್ನನುಸರಿಸಿ, ಲೂಯಿಾ ದಿ ಸಿರ್ಕ್ಸ್‌ ಎಂಬ ದೊರೆಯನ್ನು, ಫ್ರೆಂಚಜನಗಳು ಗಲ್ಲಿಗೆ ಹಾಕಿದರು. ಜನಗಳು ಮಾತ್ರವೇ ಅಲ್ಲದೆ, ಜನಾಂಗಗಳು ಕೂಡ, ತಾವನುನುಸುವ ಮೇಲುಪಂಕ್ತಿಗಳಲ್ಲಿ ಗುಣಾಂಶ ಗಳನ್ನು ಬಿಟ್ಟು ದುರ್ಗುಣಗಳನ್ನನುಸರಿಸುತ್ತವೆ. ಜಾರ್ಸ ಎಂಬವನು, ಇಂಗ್ಲೀಷುಬರೆಯುವುದರಲ್ಲಿ ಅತ್ಯಂತ ವಾಗ್ವಿಜೃಂಭಣೆಯುಳ್ಳವನು. ಅನೇ 'ಕರು ಅವನ ಶಬ್ದಾಡಂಬರವನ್ನು ಕಲಿತುಕೊಂಡು, ತಾವೂ ಅವನಂತೆ