ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ ವಿದ್ಯಾರ್ಥಿ ಕರಭೂಷಣ MMMMM ಯಾವ ಅಭ್ಯಾಸದಿಂದ ಪ್ರಯೋಜನವಾಗುವುದಿಲ್ಲವೋ, ಅಥವಾ ಯಾವ ಅಭ್ಯಾಸದಿಂದ ಅನರ್ಧವುಂಟಾಗುವುದೋ, ಅಂಧ ಅಭ್ಯಾಸವನ್ನು ಮಾಡಬಾರದು, ಯಾವ ಅಭ್ಯಾಸವು ಧರ್ಮದಿಂದ ಇಷ್ಟಾರ್ಥಗಳನು ಹೊಂದುವುದಕ್ಕೆ ಸಾಧಕವಾದುದೋ, ಅದು ಕೇವಲಕಷ್ಟ ವಾಗಿದ್ದಾಗ ಮಾಡುವುದಕ್ಕೆ ಅರ್ಹವಾದುದು ; ಅಂಧ ಅಭ್ಯಾಸವನ್ನು ಮಾಡುತ್ತ ಬರಬೇಕು, ಉಪಕ್ರಮದಲ್ಲಿ ಕಷ್ಟವಾಗಿದ್ದಾಗ್ಯೂ, ಕ್ರಮಕ್ರಮವಾಗಿ ಆ ಕೆಲಸವು ಸುಲಭವಾಗುವುದು , ಕೆಲವು ದಿವಸಗಳೊಳಗಾಗಿ ಅದು ಸಂತೋಷಪ್ರದವಾಗಿಯ ಆಗುವುದು, ಅಪರಾಧಗಳನ್ನು ಮಾಡಿ, ಅನೇ ಕರು ಜೈಲಿಗೆ ಹಾಕಲ್ಪಡುತ್ತಾರೆ. ಜೈಲಿನ ತಿಂಡಿಯ, ಅಲ್ಲಿನ ವಾಸವೂ, ಅಲ್ಲಿನ ವಸ್ತ್ರಗಳೂ, ಅಲ್ಲಿನ ಸಹವಾಸವೂ, ಪ್ರಧಮತಃ ಅಭ್ಯಾಸವಿಲ್ಲದವ ರಿಗೆ ಬಹುಕೇಶವನ್ನುಂಟುಮಾಡುವುವು, ಕ್ರಮಕ್ರಮವಾಗಿ, ಇವುಗಳೆಲ್ಲ ಒಗ್ಗಿ, ಜೈಲಿನಿಂದ ಬಿಡುಗಡೆಯಾಗುವಾಗ್ಗೆ, ಆ ಬಿಡುಗಡೆಯಿಂದ ಉಂಟಾ ಗಬೇಕಾದ ಸಂತೋಷವನ್ನು ಕೂಡ ಹೊಂದದೆ ಅವರು ವ್ಯಸನ ಪಡುವರು. ಕದನ್ನ ದಲ್ಲಿಯ ನಿಂದ್ಯವಾದ ಸಹವಾಸದಲ್ಲಿಯ ಅಭ್ಯಾಸ ಹೆಚ್ಚಿ ಅವು ಗಳನ್ನು ಬಿಡುವುದು ಕಷ್ಟವಾದ ಪಕ್ಷದಲ್ಲಿ, ಸತ್ಸಹವಾಸ ಮೊದಲಾದುವು ಗಳಲ್ಲಿ ಮಾಡಲ್ಪಟ್ಟ ಅಭ್ಯಾಸವನ್ನು ಬಿಡುವುದೂ ಕೇವಲ ಕಷ್ಟವಾದು ದೆಂದು ಹೇಳಲವಶ್ಯವಿಲ್ಲ. ವಿದ್ಯಾರ್ಥಿಗಳು, ವ್ಯಾಸಂಗಮಾಡುವುದರಲ್ಲಿ ಯಾವ ರೀತಿಯಿಂದ ಕೆಲಸಮಾಡಬೇಕೋ ಅದನ್ನು ಮೊದಲೇ ಗೊತ್ತು ಮಾಡಿಕೊಳ್ಳಬೇಕು. 'ಇ೦ಧ ಕಾಲದಲ್ಲಿ ಇಂಧ ವ್ಯಾಸಂಗವು ಮಾಡಲ್ಪಡಬೇಕೆಂದು ಕಸ್ತ