ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೬೯ ನ ಉಂಟಾಗತಕ್ಕ ಅನರ್ಧಗಳಿಗೂ ಗುರಿಯಾಗುವರು. ಜನಗಳ ಅಭ್ಯಾಸಕ್ಕ ನುಸಾರವಾಗಿ, ಅವರ ಯೋಚನೆಗಳೂ ಮಾತುಗಳೂ ಉದ್ಯೋಗಗಳ ಪರಿಣಮಿಸುವುವು, ಜೈಲು ಮೊದಲಾದ ಸ್ಥಳಗಳಲ್ಲಿದ್ದು ಅಲ್ಲಿನ ಸ್ಥಿತಿಯು ಯಾರಿಗೆ ಬಹುಕಾಲದಿಂದ ಅಭ್ಯಾಸಕ್ಕೆ ಬಂದಿರುವುದೋ, ಅಂಥವರು ಜೈಲಿನಿಂದ ಬಿಡುಗಡೆಯಾದ ಕೂಡಲೆ ಪುನಃ ಯಾವುದಾದರೊಂದು ಅಪ ರಾಧವನ್ನು ಮಾಡಿ ಜೈಲಿಗೆ ಹೋಗುವುದು ಅನುಭವಸಿದ್ಧವಾಗಿಯೇ ಇದೆ. ಗುಡಿಸಲಿನಲ್ಲಿ ವಾಸಮಾಡತಕ್ಕವರು ಅರಮನೆಯಲ್ಲಿ ವಾಸಕ್ಕೆ ಅವಕಾಶ ವನ್ನು ಹೊಂದಿದಾಗ್ಯೂ ಕಳ್ಳತನದಿಂದ ಪುನಃ ತಮ್ಮ ಗುಡಿಸಲಿಗೆ ಹೋಗಿ ಸೇರಿಕೊಳ್ಳುವುದೂ ಕೂಡ ಪ್ರಸಿದ್ಧವಾಗಿರುವುದು, ಅಭ್ಯಸ್ತವಾದ ಕೆಲಸಗಳನ್ನು ಬಿಟ್ಟು, ಅನಭ್ಯಸ್ತವಾದ ಕೆಲಸಗಳಲ್ಲಿ ಎಷ್ಟು ಲಾಭ ಬರುವ ಹಾಗಿದ್ದರೂ, ಜನಗಳು ಅಂಧ ಕೆಲಸಗಳಲ್ಲಿ ಅಶ್ರದ್ದೆಯನ್ನು ತೋರಿಸು ವುದೂ ಕೂಡ ಪ್ರತ್ಯಕ್ಷವಾಗಿರುವುದು. ಆದುದರಿಂದ, ಯಾವ ಕೆಲಸ ದಲ್ಲಿ ಪ್ರವೇಶವನ್ನು ಹೊಂದಬೇಕಾದಾಗ್ಯೂ, ಅಂಧ ಕೆಲಸವನ್ನು ಉಪ ಕ್ರಮಮಾಡುವುದಕ್ಕೆ ಮುಂಚೆಯೇ, ಯಾವ ಅಭ್ಯಾಸವು ಸಂಪೂರ್ಣವಾಗಿ ಫಲಕಾರಿಯಾದುದೋ ಅದನ್ನು ಪರೀಕ್ಷಿಸಿ, ಅದರಲ್ಲಿ ಕೃಷಿಮಾಡುವುದ ಕುಪಕ್ರಮಿಸಬೇಕು. ಕಟ್ಟ ಕೆಲಸಗಳಲ್ಲಿ ಅಭ್ಯಾಸಮಾಡಲ್ಪಟ್ಟರೆ, ದುಷ್ಟ ಲಾನುಭವವೆಂದಿಗೂ ತಪ್ಪುವುದಿಲ್ಲ, ಆದುದರಿಂದ, ಚಿಕ್ಕ ವಯಸ್ಸಿನಲ್ಲಿ ದುರಭ್ಯಾಸಕ್ಕೆ ಲೇಶವೂ ಅವಕಾಶವಿಲ್ಲದಂತೆ ಮಾಡುವುದು, ತಾಯಿ ತಂದೆಗಳಿಗೂ ಪಾರಕರಿಗೂ ಮುಖ್ಯ ಕರ್ತವ್ಯವು. ಈ ಕರ್ತವ್ಯಕ್ಕೆ ಸಂಪೂ ರ್ಣವಾಗಿ ಗಮನಕೊಡಲ್ಪಡಬೇಕು L