ತಿ ವಿದ್ಯಾರ್ಥಿ ಕೆರಭೂಷಣ wwwvvvvvvvvvvvvvvvvvwwwM - ದ ಟ ಅಲ್ಲವೆಂದು ತಾವು ಅಪ್ಪಣೆ ಕೊಡಿಸಬಹುದು. ' ಎಂದು ಹೇಳಿ, ತನ್ನ ಮನೆಗೆ ಹೊರಟುಹೋದನು. ಮಾರನೆಯ ದಿವಸ, ತಾನು ಒರೆದ ಪೂರ್ವ ಕಾದಂಬರಿಯನ್ನು ಸಭೆಗೆ ತಂದು ಓದಿದನು. ಪ್ರಭುವೂ, ಆ ಸಭೆಯಲ್ಲಿ ನೆರೆದಿದ್ದ ಪಂಡಿತೋತ್ತಮರೂ, ನುಬಂಧುವೂ, ಆ ಗ್ರಂಧವು ಓದಲ್ಪಡುತ ಲಿದ್ದಾಗ, ಮೈಮೇಲೆ ಸ್ಮರಣೆಯಿಲ್ಲದೆ, ಸಂತೋಷಸಾಗರದಲ್ಲಿ ಮುಳುಗಿ ತೇಲುತ, ಆನಂದಪರವಶರಾಗಿ ಕೇಳಿದರು, ಇದು ಓದಿ ಪೂರಯಿಸಲ್ಪಟ್ಟ ಕೂಡಲೆ, ಸುಬಂಧುವು ತಾನು ಮಾಡಿದ ದೋಷಾರೋಪಣೆಗಳನ್ನು ಹಿಂದಕ್ಕೆ ತೆಗೆದು ಕೊಂಡು ಬಾಣೋಚ್ಛಿಷ್ಟಂ ಒಗ ಯಂ' ಎಂಬುದಾಗಿ ಹೇಳಿ, ಎಲೈ ಬಾಣಭಟ್ಟನೇ ! ನನ್ನ ವಾಸವದತ್ತೆಗಿಂತಲೂ ನಿನ್ನ ಕಾದಂಬರಿಯೇ ಸಕಲವಿಷಯಗಳಲ್ಲಿಯ ಉತ್ತಮವಾಗಿದೆ. ಹೀಗೆ ರಸ ಗರ್ಭಿತವಾದ ಗ್ರಂಧವನ್ನು ಯಾರೂ ಒರೆದಿರುವುದಿಲ್ಲ ಇ೦ತಹ ಮಹಾ ಕವಿಯಾದ ನಿನಗೆ ಗುರುವಾಗಿದ್ದೇನೆಂಬ ಒತಮಾನಕ್ಕಿಂತ ಬೇರೆ ಯಾದ ಬಹುಮಾನವು ಯಾರಿಗೂ ಅಪೇಕ್ಷ್ಮಣೀಯವಾಗಲಾರದು. ವಾಸವದತ್ತಿಗೋಸ್ಕರ ನನ್ನ ಪಕ್ಷವಾಗಿ ನೀನು ನಗ್ರಹಿಸಿದ ಜಹಗೀರಿಯು ನನಗೆ ಒಂದಿತು. ನಿನ್ನ ಅದ್ಭುತವಾದ ಶಕ್ತಿಗೋಸ್ಕರ ಅದನ್ನು ನಿನಗೆ ಮನಃಪೂರ್ವಕವಾಗಿ ಕೊಟ್ಟಿರುತ್ತೇನೆ. ೬ದನ್ನು ಸುಗ್ರಹಿಸಿ, ನಾನು ಆಡಿದ ನಿಷ್ಟುರೋಕ್ತಿಗಳನ್ನು ಕ್ಷಮಿಸು.' ಎಂದು ಹೇಳಿದನು. ಪ್ರಭುವೂ ಪಂಡಿತರೂ ಕೂಡ, ಬಾಣಭಟ್ಟನಿಗೆ ಆತನ ಗುರುವಿನಿಂದ ಕೊಡಲ್ಪಟ್ಟ « ಬಾಣೋಚ್ಛಿಷ್ಟಂ ಜಗತ್ತಯಂ " ಎಂಬ ಬಿರುದನ್ನು ಅನುಮೋದಿಸಿದು ದಲ್ಲದೆ, ಇನ್ನೂ ಅಸಾಧಾರಣವಾದ ಒಹುಮಾನಗಳನ್ನೂ ಮಾಡಿದರು. ಬ ಟ
ಪುಟ:ವಿದ್ಯಾರ್ಥಿ ಕರಭೂಷಣ.djvu/೧೦೦
ಗೋಚರ