ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೯೧ Mumm ತಾನೇ ಈ ಗ್ರಂಥಕರ್ತನೆಂಬುದಾಗಿ ಹೇಳಿಕೊಂಡು ಜಹಗೀರಿಯನ್ನು ಪಡೆದಿ ರುವನೆಂದು ತಿಳಿದು ಕೊಂಡು, ಅವನಲ್ಲಿ ಸಂಭಾಷಣೆಯನ್ನು ಕೂಡ ಮಾಡದೆ, ಪ್ರಭುವಿನಬಳಿಗೆ ಹೋಗಿ, ಸಭೆಯಲ್ಲಿ ಪ್ರಭುವನ್ನು ಕುರಿತು ಪ್ರಪಂಚದಲ್ಲಿ ಶಬ್ದಗಳನ್ನೂ ಅಭಿಪ್ರಾಯಗಳನ್ನೂ ಕೆಲವು ಶ್ಲೋಕಗಳನ್ನೂ ಕದಿಯತಕ್ಕ ವರನ್ನು ನಾನು ಬಲ್ಲೆನು ; ಈ ಬಾಣನಂತೆ ಗ್ರಂಧವನ್ನೇ ಸಮಗ್ರವಾಗಿ ಕದ್ದು ಅದರ ಪ್ರತಿಫಲ ಹೊಂದಿದವರನ್ನು ನಾನು ಇದುವರೆಗೂ ನೋಡ ಲಿಲ್ಲ.' ಎಂದು ಹೇಳಿದನು. ಕೂಡಲೆ ಬಾಣಭಟ್ಟನು ಎದ್ದು ಬಂದು, ಸುಬಂಧುವಿಗೆ ಸಾಷ್ಟಾಂಗನಮಸ್ಕಾರಮಾಡಿ ( ಸ್ವಾಮಿ ! ತಾವು ತಿಳಿದು ಕೊಂಡಿರುವುದು ಸರಿಯಲ್ಲ, ವಾಸವದತ್ತೆಯು ನಾನು ಬರೆದ ಗ್ರಂಧ ವೆಂದು ನಾನು ಯಾರಿಗೂ ಹೇಳಿಲ್ಲ. ಈ ಗ್ರಂಧಕ್ಕೊಸ್ಕರ ಬಂದಿರತಕ್ಕ ಜಹಗೀರಿಯನ್ನು ತಮ್ಮ ಕಡೆಯವನಾಗಿ ನಾನು ತೆಗೆದು ಇಟ್ಟು ಕೊಂಡಿರು ವೆನು, ಅದರಲ್ಲಿ ಒಂದು ಕಾಸನ್ನೂ ನಾನು ಉಪಯೋಗಿಸಿಕೊಂಡಿಲ್ಲ. ಈಗ ತಾವು ಅದನ್ನು ಪರಿಗ್ರಹಿಸಬಹುದು. ಆದರೆ, ಶಿಷ್ಯನ ಯೋಗ್ಯತೆ ಯನ್ನು ತಿಳಿದುಕೊಳ್ಳದೆ, ತಮ್ಮ ಗ್ರಂಧವನ್ನೇ ನಾನು ಚೌರ ಮಾಡಿದೆನೆಂದು ಅಪ್ಪಣೆ ಕೊಡಿಸಿದಿರಿ, ಇದಕ್ಕಾಗಿ ನಾನು ತುಂಬ ವಿಷಾದಿಸುತ್ತೇನೆ. ಪುತ್ರ ನಿಂದ ತಂದೆಗೂ, ಶಿಷ್ಯನಿಂದ ಗುರುವಿಗೂ ಪರಾಭವವುಂಟಾದರೆ, ಅದರಿಂದ ತಂದೆಯ ಗುರುವೂ ಸಂತೋಷಪಡುವರೇ ಹೊರತು, ದುಃಖಪಡುವು ದಿಲ್ಲ, ಇಪ್ಪತ್ತನಾಲ್ಕು ಘಂಟೆಗಳೊಳಗಾಗಿ ವಾಸವದತ್ತೆಗಿಂತಲೂ ಶ್ಲಾ ಫ್ಯವಾದ ಗ್ರಂಧವನ್ನು ಬರೆದುಕೊಂಡು ಬಂದು ತಮ್ಮ ಶ್ಲಾಘನೆ ಯನ್ನು ಹೊಂದದಿದ್ದರೆ, ನಾನು ತಮ್ಮ ಶಿಷ್ಯನಾಗುವುದಕ್ಕೆ ಅರ್ಹನೇ