ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ವಿದ್ಯಾರ್ಥಿ ಕರಭೂಷಣ ಉmmmmmmmm ವುದು ಇವನಿಗೆ ಹೇಗೆ ಸಾಧ್ಯವಾಯಿತೆಂದು ಪರಿಶೀಲಿಸಿದರೆ, ಮಹಾಕವಿ ಗಳು ತಮ್ಮ ವ್ಯವಸಾಯಬಲದಿಂದ ಮಹಾಕವಿಗಳಾಗುವರೇ ಹೊರತು ಅದೃಷ್ಟಪರಿಪಾಕದಿಂದ ಆಗುವುದಿಲ್ಲ ಎಂಬುದು ಚೆನ್ನಾಗಿ ಗೊತ್ತಾಗುತ್ತದೆ ಬಾಣಭಟ್ಟನು, ಸಂಸ್ಕೃತಭಾಷೆಯಲ್ಲಿದ್ದ ಸಕಲ ಕಾವ್ಯ ನಾಟಕ ಆಖ್ಯಾನ ಅಲಂಕಾರ ಮೊದಲಾದುವುಗಳನ್ನು ಕರತಲಾಮಲಕಗಳಾಗಿರುವಂತೆ ವ್ಯಾಸಂಗಮಾಡಿದ್ದನು, ಈ ವ್ಯಾಸಂಗದ ಮಹಿಮೆಯಿಂದ, ಅವನ ಬಾಯಲ್ಲಿ ಹೊರಡತಕ್ಕ ಮಾತೂ, ಅವನ ಲೇಖನಿಯಿಂದ ಹೊರಡತಕ್ಕ ಕವನಗಳೂ, ಲಾಲಿತ್ಯದ ಪರಮಾವಧಿದಶೆಯನ್ನು ಹೊಂದಿದ್ದುವು, ಇವನ ಕವಿತ್ವದ ಮಹಿಮೆಯನ್ನು ತಿಳಿದುಕೊಳ್ಳಬೇಕಾದರೆ, ಕಾದಂಬರಿಗ್ರಂಧದ ಚರಿತ್ರೆಯನ್ನು ಸ್ವಲ್ಪಮಟ್ಟಿಗೆ ತಿಳಿದುಕೊಳ್ಳುವುದಾವಶ್ಯಕವು. ಇವನ ಗುರುವಾದ ಸುಬಂಧುವು, ವಾಸವದತ್ತೆಯೆಂಬ ಗ್ರಂಧವನ್ನು ಬರೆದು, ಅದನ್ನು ಪ್ರಚಾರಮಾಡುವುದಕ್ಕೋಸ್ಕರ ಇವನಲ್ಲಿ ಕೊಟ್ಟು, ತೀರ್ಥಯಾ ತ್ರೆಗೆ ಹೊರಟುಹೋದನು. ಅನೇಕ ವರುಷಗಳವರೆಗೂ ಅವನು ಹಿಂದಿ ರುಗಿ ಬರಲಿಲ್ಲ. ಈ ಮಧ್ಯದಲ್ಲಿ, ಆ ಗ್ರಂಧದ ಮಹಿಮೆಯು ಎಲ್ಲೆಲ್ಲಿಯೂ ಹರಡಿಕೊಂಡು, ಪ್ರಭುವಿಗೆ ತಿಳಿಯಿತು, ಅವನು, ಬಾಣಭಟ್ಟನೇ ಈ ಗ್ರಂಧವನ್ನು ಬರೆದವನೆಂದು ತಿಳಿದು ಕೊಂಡು, ಇವನಿಗೆ ಒಂದು ಜಹಗೀರಿ ಯನ್ನು ಕೊಟ್ಟನು. ಸುಬಂಧುವಾಗಲಿ ಅವನ ಮಕ್ಕಳಾಗಲಿ ಹಿಂದಿ ರುಗಿ ಬಂದರೆ ಅವರಿಗೆ ಒಪ್ಪಿಸಬೇಕೆಂಬ ಸಂಕಲ್ಪದಿಂದ, ಬಾಣಭಟ್ಟನು ಈ ಜಹಗೀರಿಯನ್ನು ಪರಿಗ್ರಹಮಾಡಿದನು. ಕೆಲವುದಿನಗಳೊಳಗಾಗಿ ಸುಬಂಧುವು ತೀರ್ಥಯಾತ್ರೆಯಿಂದ ಹಿಂದಿರುಗಿ ಬಂದು, ಬಾಣಭಟ್ಟನು