ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೪ ೧೮೫ ಬೇಕಾದರೆ, ಆಗಾಗ್ಗೆ ಉಗ್ರಾಣದಲ್ಲಿ ಇಂಥಿಂಧ ಪದಾರ್ಧಗಳಿವೆಯೆಂದು ಗೊತ್ತುಮಾಡಿಕೊಂಡಿರಬೇಕು. ಎಂದರೆ,-ಒಂದಾವೃತ್ತಿ ವ್ಯಾಸಂಗಮಾಡಿದ ವಿಷಯಗಳನ್ನು, ವರುಷಕ್ಕೊಂದಾವೃತ್ತಿಯಾದರೂ ಪುನಃ ಆವೃತ್ತಿ ಹಾಕುತಿರಬೇಕು. ಮನಸ್ಸಿನಲ್ಲೊಂದುಭಾಗವಾದ ಜ್ಞಾಪಕ ಶಕ್ತಿಯು ಅತ್ಯಂತವಿಶಾಲ ವಾದುದು, ಎಷ್ಟು ಸ್ವಲ್ಪ ವಿಷಯಗಳನ್ನು ತುಂಬಿದಾಗ ತುಂಬಿರು ವುದು ; ಈ ಅಖಂಡ ಬ್ರಹ್ಮಾಂಡವನ್ನು ತುಂಬಿದಾಗ ತುಂಬಿರುವುದು. ನಿರಕ್ಷರಕುಕ್ಷಿಗಳಾದ ಕಾಡುಕುರುಬರ ಮನಸ್ಸನ್ನೂ, ಗ್ರಾಮ ರ್ಪೋ ಮೊದಲಾದ ಲಕ್ಷಾಂತರ ಯಂತ್ರಗಳನ್ನು ನಿರ್ಮಾಣಮಾಡಿ ಅಭಿನವ ಶಾಸ್ತ್ರಕತ್ರರುಗಳಿಗೆ ಅಗ್ರಗಣ್ಯನೆಂದು ಹೆಸರುಪಡೆದಿರತಕ್ಕೆ ಎಡಿರ್ಸನ ಮನ ಸೃನ್ನೂ ಪರೀಕ್ಷಿಸಿದರೆ, ಸಾಮಾನ್ಯ ಮನುಷ್ಯನ ಬುದ್ದಿಗೂ ಪಂಡಿತೋತ್ರ ಮರಾದ ಶಾಸ್ತ್ರಜ್ಞರ ಬುದ್ಧಿಗೂ ಇರತಕ್ಕೆ ವೈಲಕ್ಷಣ್ಯ ಗೊತ್ತಾಗುತ್ತದೆ. ಗ್ರಂಧಗಳು, ಗ್ರಂಥಕರ್ತರ ಮನೋವ್ಯಾಪಾರಗಳನ್ನು ಒಳಗೊಂಡಿರುತ್ತವೆ. ಗ್ರಂಧಗಳ ಸಹಾಯದಿಂದ, ಭೂಗೋಳ ಖಗೋಳಗಳಲ್ಲಿರತಕ್ಕ- ಮನು ಮೌನ ಶೋಧನೆಯಿಂದ ಗೊತ್ತುಮಾಡಲ್ಪಟ್ಟ ವಿಷಯಗಳೆಲ್ಲ ಒಂದು ನಿಮಿಷಾರ್ಧದಲ್ಲಿ ಗೊತ್ತಾಗುವುವು, ಈ ಭಾಗದಲ್ಲಿ ನಮ್ಮ ಪೌಲ್ವಿಕರು ಬರೆದಿರತಕ್ಕ ಗ್ರಂಧಗಳ ಸಹಾಯವಿರದಿದ್ದರೆ, ನಾವು ಜ್ಞಾನಶಾಲಿಗಳಾ ಗುವುದು ಸಾಧ್ಯವೇ ? ನಮ್ಮ ಪೌಲ್ವಿಕರು, ಅವರ ಕಾಲದಲ್ಲಿ ಎಷ್ಟು ಜ್ಞಾನವನ್ನು ಆರ್ಜಿಸುವುದು ಸಾಧ್ಯವಾಗಿದ್ದಿತೋ ಅಷ್ಟನ್ನು ಆರ್ಜಿಸಿ, ಆ ಕಾಲಕ್ಕೆ ಪಂಡಿತೋತ್ತಮರಾದರು, ನಾವು, ನಮ್ಮ ಕಾಲದಲ್ಲಿ 24