ಪರಿಚ್ಛೇದ ೨ ೧೨ oಫಿ | ಗಳು ಬಂದಾಗ, ಉದ್ದಿಷ್ಟವಾದ ಕೆಲಸದಲ್ಲಿ ಮನಸ್ಸನ್ನು ನಿಲ್ಲಿಸಿ ಹಿಡಿದ ಕೆಲಸವನ್ನು ಪೂರಯಿಸುವುದೇ, ಉತ್ತಮ ಪುರುಷರ ಲಕ್ಷಣ. ಈ ಶಕ್ತಿ ಯನ್ನು ಸಂಪಾದಿಸಿಕೊಳ್ಳದಿರತಕ್ಕವರು, ವಿದ್ಯಾರ್ಜನೆಯಲ್ಲಿ ಯ ಉದ್ಯೋಗದಲ್ಲಿಯೂ ಇಷ್ಟಾರ್ಧಸಿದ್ದಿ ಹೊಂದುವದಸಾಧ್ಯವು, ವ್ಯಾಸಂಗ ಮಾಡತಕ್ಕವರಿಗೆ, ಪರೀಕ್ಷೆಯ ಕಾಲಗಳಲ್ಲಿ ಪೋಷಕರು ಸಾಯುವು ದುಂಟು ; ಬಂಧುಮಿತ್ರರಿಗೆ ದುಸ್ಸಹವಾದ ಕಷ್ಟಗಳು ಬರುವುದುಂಟು ; ಅವರಿಗೂ ಅನೇಕವಾದ ನಷ್ಟಗಳಾಗುವುದುಂಟು. ಚಿತ್ತಸ್ಸೆಲ್ಯವುಳ್ಳವರು ಇಂಥ ವಿಷಮಕಾಲಗಳಲ್ಲಿಯೂ ತಮ್ಮ ವ್ಯಾಸಂಗವನ್ನು ಬಿಡುವುದಿಲ್ಲ ; ನಲ್ವತ್ರ ಸಾಧನವಾದ ಧೈತ್ಯನನ್ನವಲಂಬಿಸಿ, ಆ ಸಂದರ್ಭಗಳಲ್ಲಿ ಮಾಡ ಬೇಕಾದ ಕೆಲಸಗಳನ್ನು ಸಾವಧಾನವಾಗಿ ಮಾಡಿ, ಅದರಿಂದ ತಮ್ಮ ವ್ಯಾಸಂಗಕ್ಕೆ ನ್ಯೂನತೆ ಬರದಂತೆ ಮಾಡಿ ಕೊಳ್ಳುವುದರಲ್ಲಿ ಬಾದರರಾಗಿ ರುವರು. ಇದೇ ಉತ್ಸಾಹಶಾಲಿಗಳ ಲಕ್ಷಣವ, ಈ ವುತ್ತಾಹಕ್ಕೆ ಯಾವ ಭಂಗವೂ ಬಾರದಂತೆ ನೋಡಿಕೊಳ್ಳುತ ಹಿಡಿದ ಕೆಲಸ ಪೂರಯಿಸುವವರೆಗೆ ಯಾರು ಉದ್ಯೋಗಮಾಡುವರೋ, ಅವರು ಆ ವದ್ಯೋಗದ ಫಲವನ್ನು ಹೊಂದುವರು ; ಹಾಗಲ್ಲದೆ, ವಿಘ್ನು ರೂಪವಾದ ಅನರ್ಧಗಳಿಗೊಳಪಟ್ಟು, ಅವುಗಳು ತಮ್ಮ ಕೆಲಸಕ್ಕೆ ಪ್ರತಿಬಂಧಕವಾಗದಂತೆ ಕೃಷಿಮಾಡದೆ, ಆಕಾಶ ದಲ್ಲಿ ಕೋಟೆ ಕಟ್ಟತಕ್ಕವನಂತೆ ನಿಷ್ಟ್ರಯೋಜನವಾದ ಆಲೋಚನೆಗಳಿಗೆ ಮನಸ್ಸು ಕೊಡತಕ್ಕವರು, ಎಂದಿಗೂ ಇಷ್ಟಾರ್ಧಸಿದ್ಧಿಯನ್ನು ಹೊಂದುವು ದಿಲ್ಲ. ಎಡಿಸನ್ನಿನ ಹಾಗೆ, ಹಿಡಿದ ಕೆಲಸ ಪೂರಯಿಸುವವರೆಗೂ ಎಂಧ ಅನರ್ಧಗಳು ಬಂದರೂ ಗಣಿಸದೆ ಕೆಲಸಮಾಡತಕ್ಕವನೇ, ಲೋಕೈಕವೀರ 1?
ಪುಟ:ವಿದ್ಯಾರ್ಥಿ ಕರಭೂಷಣ.djvu/೧೩೭
ಗೋಚರ