ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ವಿದ್ಯಾರ್ಥಿ ಕರಭೂಷಣ ಕಾರಣದಿಂದ, ಅವರಿಗೆ ಎಲ್ಲ ವಿಷಯಗಳಲ್ಲಿಯ ದರಿದ್ರಾವಸ್ಥೆ ಪ್ರಾಪ್ತ ವಾಗುವುದು. ಆರ್ಜಿಸಿದ ವಿದ್ಯೆ ಯನ್ನು ಬಾರಿಬಾರಿಗೂ ಚಿಂತನೆಯನ್ನು ಮಾಡಿ ರಕ್ಷಿಸಿಕೊಳ್ಳತಕ್ಕವರು, ಪರೀಕ್ಷೆಗಳಲ್ಲಿ ಅತ್ಯುತ್ತಮವಾಗಿ ತೇರ್ಗಡೆ ಹೊಂದಿ, ದಿಗಂತಶ್ರಾಂತವಾದ ಕೀರ್ತಿಯನ್ನು ಪಡೆಯುವರು. ಹಾಗೆ ಆರ್ಜಿಸಲ್ಪಟ್ಟ ವಿದ್ಯೆಯ ಮಹಿಮೆಯಿಂದ, ತಾವು ಹಿಡಿದ ಕೆಲಸಗಳನ್ನು ಸಮಗ್ರವಾಗಿ ಮಾಡಿ, ಕಾರಾಚಾರ್ ಪದವಿಯನ್ನೂ ಹೊಂದುವರು. ಈ ರೀತಿಯಲ್ಲಿ ವ್ಯಾಸಂಗಮಾಡುವ ಶಕ್ತಿಯನ್ನು ಯಾರು ಸಂಪಾದಿಸಿ ಕೊಳ್ಳುವುದಿಲ್ಲವೋ, ಅವರು ಹತ್ತರಲ್ಲಿ ಹನ್ನೊಂದನೆಯವರಾಗಿ ಪರಿಣಮಿ ಸುವರು, ನಮ್ಮ ಭಾರತೀಯ ವಿದ್ಯಾರ್ಥಿಗಳು, ಈ ವಿಷಯವನ್ನು ಪರಾ ಲೋಚಿಸಬೇಕು, ಬುದ್ದಿ ಬಲದ ಮಹಿಮೆಯಿಂದಲೇ, ಮನುಷ್ಯನು ಇತರ ಪ್ರಾಣಿಗಳಿಗಿಂತ ಅಧಿಕನಾಗಿರುವನು. ಈ ಆಧಿಕ್ಯಕ್ಕೆ, ತೀಕ್ಷ್ಯವಾದ ಬುದ್ಧಿಯ ವ್ಯಾಪಾರವೂ ಮುಖ್ಯ ಕಾರಣವಾದುದರಿಂದ, ಬುದ್ಧಿ ತೀಕ್ಷ್ಯ ವಾಗುವುದಕ್ಕೆ ಏಕಾಂತವಾಗಿಯೂ ಏಕಾಗ್ರಚಿತ್ತದಿಂದಲೂ ವ್ಯಾಸಂಗವು ಮಾಡಲ್ಪಡಬೇಕು. ಆದುದರಿಂದ, ಮನಸ್ಸು ಗ್ರಂಧಗಳನ್ನು ಬಿಟ್ಟು ಚಲಿಸ ದಂತೆ ಮಾಡಿಕೊಂಡು ವ್ಯಾಸಂಗ ಮಾಡುವುದು ಅವಶ್ಯಕ. ಈ ಎಷ ಯಕ್ಕೆ ವಿದ್ಯಾರ್ಥಿಗಳ ಗಮನವು ಕೊಡಲ್ಪಟ್ಟ ಹೊರತು, ಅವರು ತಮ್ಮ ಇಷ್ಟಾರ್ಧಸಿದ್ಧಿಯನ್ನು ಹೊಂದಲಾರರು. ಜರ್ರ ವಿದ್ಯಾರ್ಥಿಗಳು, ದಿನಕ್ಕೆ ಹದಿನಾರು ಘಂಟೆಗಳ ಕಾಲ ವ್ಯಾಸಂಗಮಾಡುವರೆಂದು ಹೇಳುವರು. ಅವಿಚ್ಛಿನ್ನವಾಗಿ ಹದಿನಾರು ಘಂಟೆಗಳ ಕಾಲ ಕ್ಷೇಶಕರವಾದ ವ್ಯಾಸಂಗವನ್ನು ಮಾಡು ತಬಂದರೆ,