ದಾಗಿ ನನ್ನ ಸಂಗಡ ಹೇಳಿದ್ದನು. ನೀನು ನಾಳೆ ಬೆಳಗ್ಗೆ ಬಂದರೆ, ಪರಂತಪನ ಪೂರ್ವಾಪರಗಳನ್ನು ವಿಚಾರಿಸಿ ವಿಶದವಾಗಿ ನಿನಗೆ ಹೇಳುವೆನು.
ಮಂಜೀರಕನು ಅವನ ಅಪ್ರಣೆಯನ್ನು ತೆಗೆದುಕೊಂಡು ತನ್ನ ಕೊಟ್ಟಡಿಗೆ ಹೋಗುತ್ತಿರುವಾಗ, ಒಬ್ಬ ಯವನಸ್ಸನು ಇವರ ಮಾತುಗಳನ್ನು ಕೇಳುತಿದ್ದು ಇವನೊಡನೆ ಮಾತನಾಡುವುದಕ್ಕೆ ಉಪಕ್ರಮಿಸಿದನು.
ಯೌವನಸ್ಥ -ನೀನು ಭೋಜನಶಾಲೆಯ ಯಜಮಾನನೊಡನೆ ಆಡುತಿದ್ದ ಮಾತುಗಳನ್ನು ಕೇಳುತಿದ್ದೆನು. ನೀನು ಪರಂತಪನನ್ನು ಹುಡುಕಿಕೊಂಡು ಬಂದಿರುವೆಯಲ್ಲವೆ?
ಮಂಜೀರಕ - ಅಹುದು! ಆತನ ಪೂರೋತ್ತರಗಳೇನಾದರೂ ನಿನಗೆ ತಿಳಿಯುವುದೆ?
ಯೌವನಸ್ಥ - ನನಗೆ ಬಹಳ ಸ್ಪಲ್ಪ ತಿಳಿಯುವುದು. ಅವನು ಈ ಕಲ್ಯಾಣಪುರಕ್ಕೆ ಬಂದಾಗ, ನನಗೂ ಅವನಿಗೂ ಸರಿಚಯವಾಯಿತು. ಕಳೆದ ಎಂಟು ದಿವಸಗಳಿಂದ ಅವನ ಸಮಾಚಾರವೇ ಇಲ್ಲ. ಅವನಿಗೇನೋ ವಿಪತ್ತು ಸಂಭವಿಸಿರುವುದೆಂದು ತೋರುತ್ತದೆ.
ಮಂಜೀರಕ- ಹಾಗೆಂದರೇನು! ಮಹಾತ್ಕರಿಗೆ ವಿಪತ್ತು ಸಂಭವಿಸುವುದೇ? ಇದನ್ನು ನಾನು ಎಂದಿಗೂ ನಂಬಲಾರೆನು.
ಯೌವನಸ್ಥ - ನೀನು ನನ್ನ ಕೊಟ್ಟಡಿಗೆ ಬಂದರೆ, ಈ ವಿಷಯವನ್ನು ಕುರಿತು ವಿಸ್ತಾರವಾಗಿ ಮಾತನಾಡಬಹುದು.
ಮಂಜೀರಕ- ಆವಶ್ಯಕವಾಗಿ ಆಗಬಹುದು. (ಇಬ್ಬರೂ ಯೌವನಸ್ಥನ ಕೊಟ್ಟಡಿಗೆ ಹೋಗುವರು.
ಯೌವನಸ್ಥ- ನಿನ್ನ ಹೆಸರೇನು?
ಮಂಜೀರಕ- ಪರಂತಪನ ಸೇವಕನಾದ ಮಂಜಿರಕನು.
ಯೌವನಸ್ಥ- ನಿನ್ನ ವಿಷಯವನ್ನು ನನಗೆ ಪರಂತಪನು ಹೇಳಿದ್ದನು. ನೀನು ಬಹಳ ಸಾಹಸಿ. ಇಂಥ ಭೃತ್ಯರುಳ್ಳವನಿಗೆ, ವಿಪತ್ತುಗಳು ಬಂದಾಗ ದೈವಯೋಗದಿಂದ ಪರಿಹಾರವಾಗಬಹುದು.
ಮಂಜೀರಕ- ಅದು ಹಾಗಿರಲಿ: ಪರಂತಪನ ಪೂರ್ವೋತ್ತರಗಳನಾದರೂ ತಿಳಿದಿದ್ದರೆ ಹೇಳು.