ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦
ಚ೦ದ್ರಮತಿ.

ಕೊಂಡೇ ಇರುವಂತಹ ಆ ತಾವರೆಯ ಹೂವು ನಿನಗಿಷ್ಟು ವಿಚಿತ್ರವಾಗಿ ತೋರುವುದಕ್ಕೆ ಕಾರಣವೇನು?

ಚಂದ್ರ-ಇದು ಬಟ್ಟೆಯಮೇಲೆ ಬರೆಯಲ್ಪಟ್ಟಿರುವುದಾದರೂ, ನಿಶ್ಚಯವಾದ ತಾವರೆಯ ಹೂವಿನಂತೆಯೇ ಕಾಣಿಸುತ್ತಿರುವುದು. ಇದೊ, ನನಗೆ ಆಟಕ್ಕೋಸುಗ ನಮ್ಮ ದಾಸಿಯು ಸರೋವರದಿಂದ ಕೊಯ್ದು ತಂದಿ ರುವಂತಹ ಈ ತಾವರೆಯಂತೆಯೇ, ಎಸಳುಗಳೂ, ನಾಳವೂ, ಬಣ್ಣವೂ ಸ್ವಲ್ಪವಾದರೂ ವ್ಯತ್ಯಾಸವಿಲ್ಲದಿರುವುವು. ಇಷ್ಟು ಚಮತ್ಕಾರವಾಗಿ ಬರೆದಿರುವ ಆ ಚಿತ್ರಕಾರನ ಬುದ್ದಿ ವಿಶೇಷವನ್ನು ಮೆಚ್ಚದಿರುವುದಕ್ಕಾದೀತೇ?

ಗುರು-ಇದರಲ್ಲಿ ನಿನಗಿಷ್ಟು ಸಂತೋಷವುಂಟಾಗುವುದಕ್ಕೆ ಇದು ನಿಶ್ಚಯವಾದ ತಾವರೆಯ ಹೂವಿನ೦ತಿರುವುದೇ ಕಾರಣವೆಂದು ನೀನೇ ಹೇಳುತ್ತಿರುವೆಯಲ್ಲವೆ? ಇದು ಮತ್ತೊಂದು ತಾವರೆಯನ್ನು ಸ್ವಲ್ಪವಾದರೂ ವ್ಯತ್ಯಾಸವಿಲ್ಲದೆ ಹೋಲುತ್ತಿರುವ ಮಾತ್ರಕ್ಕೆ ಇಷ್ಟು ಸಂತೋಷ ಪಡಬೇಕಾಗಿರುವಾಗ, ಆ ಮತ್ತೊಂದು ತಾವರೆಯನ್ನು ನೋಡಿ ಸಂತೋಷ ಪಡದೆಯೂ, ಅದನ್ನು ಮಾಡಿದ ದಿವ್ಯಚಿತ್ರಕಾರನ ಶಕ್ತಿಯನ್ನು ಪರ್ಯಾ ಲೋಚಿಸಿ ಆಶ್ಚರ್ಯಪಡದೆಯೂ ಇರುವುದು ಬಹು ವಿಸ್ಮಯಕರವಾಗಿರುವುದಲ್ಲವೇ?

ಚಂದ್ರ-ಈಗ ನಾನು ಮುಡಿಯಲ್ಲಿಟ್ಟುಕೊಂಡಿರುವ ಈ ತಾವರೆಯ ಹೂವೂ ಒಬ್ಬರಿಂದ ಮಾಡಲ್ಪಟ್ಟುದೇ?

ಗುರು- ಈ ಪಟದಲ್ಲಿರುವ ತಾವರೆಯ ಹೂವನ್ನು ಯಾರಾದರೂ ಬರೆದಿರುವರೋ ಇಲ್ಲದೆ ತಾನಾಗಿಯೇ ಹುಟ್ಟಿತೋ?

ಚಂದ್ರ-ಇದನ್ನು ಬರೆದವರಾರೋ ನಾನರಿಯೆನಾದರೂ, ಇದು, ಆವನೋ ಒಬ್ಬನಿಂದ ಬರೆಯಲ್ಪಟ್ಟುದೆಂದು ಮಾತ್ರ ನಾನು ಬಲ್ಲೆ, ಯಾರೂ ಬರೆಯದಿದ್ದ ಪಕ್ಷದಲ್ಲಿ, ಈ ಹೂವು ಇಲ್ಲಿ ಹೇಗೆ ಇರುತ್ತಿದ್ದಿತು?

ಗುರು-ನೀನು ಹೇಳಿದ ಪ್ರತ್ಯುತ್ತರವು ಬಲು ಚೆನ್ನಾಗಿರುವುದು.