೪೫
ಬೇಡೆನ್ನ ಕಂದ ನಿನ್ನೊಡನೆ ಬಪ್ಪೆ೦ ಬಸವ
ನೋಡು ನಿನ್ನಾಣೆ ನಿನ್ನೊಡನೆ ಬಪ್ಪೆಂ ಬಸವ
ನಿನ್ನನಗಲಿರಲಾರ್ಪೆನೇ ಬಸವ ಬಸವಣ್ಣ
ನೀನಿಂತಳುಪ್ರಡೆನಗರಿದು ಬಸವಣ್ಣ
ಕಂದ ಬೇಡಯ್ಯ ಬೇಡಯ್ಯ ನೇಹದ ನಿಧಿಯೆ
ಹಿಂದುಗೊಂಡೇ ಬಪ್ಪೆನೆನ್ನ ಸುಕೃತದ ಸುಧೆಯೆ
ನೆನೆಯೆ ಮುಂದಿರ್ದಪೆಂ ಕರೆದೊಡೋ ಎಂದಪೆಂ
ಮನದೊಳಗೆ ಕರದೊಳಗೆ ತನುವಿನೊಳಗಿರ್ದವೆಂ
ನಿಂದಲ್ಲಿ ನಿಂದಪೆಂ ನಡೆದಲ್ಲಿ ನಡೆದಪೆಂ
ಬಂದಲ್ಲಿ ಬಂದಪೆಂ ನುಡಿದಲ್ಲಿ ನುಡಿದಪೆಂ
ಬಿಟ್ಟುದಂ ಬಿಟ್ಟಪೆಂ ಪಿಡಿದುದಂ ಪಿಡಿದನೆಂ
ನಟ್ಟುದಂ ನಟ್ಟಪೆಂ ಕೇಳುದಂ ಕೇಳಪೆಂ
ಆಡಿದುದನಾಡುವೆಂ ನೋಡಿತಂ ನೋಡುವೆಂ
ಮಾಡಿತಂ ಮಾಡುವೆ೦ ಕೂಡಿತಂ ಕೂಡುವೆಂ
ನಡೆಯಯ್ಯ ನಡೆ ಮಗನೆ ನಡೆ ಕಂದ ಬಸವಣ್ಣ
ಪೊಡವಿಗಧಿಪತಿಯಾಗಿ ಬಾಳೆನ್ನ ಬಸವಣ್ಣ
ಎಂದಲ್ಲಿ ಕರುಣಿಸಿದ ಮಾತು ಸಂಬಳವಾಗಿ
ಬಂದನೆಂತೆಂತಕ್ಕೆ ಅಗಲಲಾಜಿದೆ ರಾಗಿ
ಸಂಗಮನ ಕರುಣವೇ ತನಗೆ ಬೆಂಬಲವಾಗಿ
'ಸಂಗನ ಧ್ಯಾನವೇ ತನಗೆ ಸಂಗಡವಾಗಿ
೮. ಹರಿಹರ: ಬಸವಣ್ಣನವರ ಗುಣ
ಪುಣ್ಯಲೋಭಿ ಭಕ್ತರ ಬಾಕುಳಿ ಶರಣರ ಸೂಜತಿ ಸಜ್ಜನರ ಸಲೆಮಾ ಶರಣರ ಸಂಗದ ಶಾಶ್ವತನೆನಿಸ ಬಸವರಾಜಂ ಲಿಂಗ ಜಂಗಮ ಪ್ರಸಾದ ಹೃದಯ ನಾಗಿ ಶರಣರೊಳು ಸದ್ಗೋಷ್ಟಿಯಿಂದಿರ್ದು ಮತ್ತ ಮಿಂತೆಂದಂ
ದೇವದೇವ, ನಿಮ್ಮರ್ಥಮಂ ನಿಮಗೆ ತೊತ್ತುಗೆಲಸವಂ ಮಾಡಿ ಬೇಡಿತಂ ನೀಡುವ ಕಿಂಕರನೆಂದು ನೀವೆ ಕೊಂಡು ಕೊನೆದಾಡಿಸುವ ನಿಮ್ಮ ಕಣ್ಣ ಮೊದಲ ಕಪ್ಪಡದ ಹಾಹೆ ಆನೆಂಬುದು. ಹಲವ ನುಡಿವುದೆಲ್ಲಂ ಪುಸಿ, ನಡೆವುದೆಲ್ಲಂ ತಪ್ಪು, ನೇಮವಲಯದ ನೀರಸಂ ಪೂಜೆಯಜಿ ಯದ ಪುಣ್ಯ ದೂರಂ ಹಾಡ ಲಯದ ಹಸುಳೆಯಪ್ಪೆನ್ನೊ ಳು ಲೇಸನಸದೆ ತಪ್ಪಂ ನೋಡದೆ ಕರುಣಿಪುದು - ಎಂದು ಬಿನ್ನೆಸಿದ ಬಸವಂಗೆ ಮೆಚ್ಚಿ ಮಾಹೇಶ್ವರಕುಲಂ ಭೋರನೆ ಸರಸಿ ಹಾರೈಸಿ ಹಿಗ್ಗಿ ತಣಿದು ಕುಳ್ಳಿರ್ದ ಮೆಚ್ಚಿ ಮನಂತೀವಿದಾನಂದದಿಂ ಮಿಕ್ಕು ಏಾಯಿ