ಪುಟ:ಕನ್ನಡದ ಬಾವುಟ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಲಹಂ ಬಲಿದು ಪ್ರಸಾದವನೊಲ್ಲದೆ ಬಸವಂ ಮುಸುಕಿಟ್ಟು ಪಶುಪತಿಯ ಪದದ ಕೆಳಗೆ ನಿರ್ವಗದಿಂ ಪಟ್ಟರ್ದಿರೆ ; ರಾತ್ರಿಯೊಳು ನೇತ್ರತ್ರಯಂ ಭಕ್ತ ನಿರವಂ ನೋಡಿ ಕೊರಗಿ ಮೋಹದ ಮಹಿಮೆಗೆ ಮರವಟ್ಟು, ಭಕ್ತಿಯ ಭರಕ್ಕೆ ಕೌತುಕಂಗೊಂಡಗಲಲಾಅದ ಮಗಂಗೆ ಮಿಗೆ ಕರುಣಿಸಿ, ಮತ್ತೆ ಕನಸಿನೊಳು ಬಂದು - ಎಲೆ ಮಗನೆ ಎಲೆ ಕ೦ದ ಎಲೆ ಬಸವ, ನಿನ್ನ ನಗಲಿ ನಾನಿರಲಾರೆ. ನಿನಗಿನಿತು ನಿರೋಧವೇಕೆ ? ಬೇಡಯ್ಯ ಬೇಡೆನ್ನ ರಸ, ಬೇಡೆನ್ನ ಭಕ್ತನಿಧಿಯೆ, ನಿನ್ನೊ ಡನೊಡನೆ ಬಿಡದೆ ಬಪ್ಪೆಂ. ಇಂತು ಬೆಸಸುತ್ತಮಿರೆ ಬಸವನಾಗಳೆ ಕೇಳು ಅಂತಸ್ಥ ದೊಳು ವಿರಹಚಿಂತೆಯಂ ಮಿಗೆ ತಾಳು ಸಲೆ ಮತ್ತೆ ಮತ್ತೆ ಪೋಗೆಂದಪಂ ಸಂಗಮಂ ನಲಿದು ಪೂಜಿಸಲೀಯನಕ್ಕಟಾ ಸಂಗಮಂ ಆದಡಂ ಪೋಗಿ ನೋಡುವೆನೆಂದು ಬಗೆಗೊಂಡು ಆದರಂ ಕುಂದುತ್ತೆ ಚಿ೦ತೆಯಂ ಕೈಕೊಂಡು ಶಿವಭಕ್ತ ಸಂತತಿಗೆ ಬೆಸಕೆಯ್ಯುಪಾಯಮಂ ಶಿವಭಕಿ ನೆಲೆಗೊಳ ಸಮಸುಖ ಸಹಾಯಮಂ ನೆನೆದು ತನ್ನೊಳಗೊಳಗೆ ತಿಳಿದಂ ಶಿವಧ್ಯಾನಿ ಅನುಪಮ ಶಿವೈಕ ಸಮ್ಯಗ್ಯಾನಿ ಕಡುಮಾನಿ ಅಕ್ಷರ ಜ್ಞಾನಮು೦ಟದನೈದೆ ಮಾಜುವೆಂ ಕ್ಷನಣುಗರ್ಗಾದ ಹೊಂಗಳಂ ಬೀಜವೆಂ ಅವರ ಪ್ರಸಾದಮಂ ನಲವಿಂದ ತಾಳುವೆಂ ಅವರ ಕಾರುಣ್ಯರಸಜಲದೊಳೋಲಾಡುವೆಂ ಎಂದಲ್ಲಿ ಗಣಕ ಕಾಯಕಮಂ ಮನಂಗೊಂಡು ನಿಂದದಕ್ಕನುಕೂಲವೇ ಷಮಂ ಕೈಕೊಂಡು ಸಂಗಂಗೆ ಬಿಸಲೆಂದು ಹತ್ತಿರ ಬಂದು ಹಿಂಗಲಾಚಿದೆ ಕಣ್ಣಲ್ಲಿಂ ಶೋಕಜಲಬಿಂದು ತೆರಳೆ ಸೆರೆ ಬಿಗಿದು ಗದಗದಿಸಿ ಬಿಕ್ಕುತೆ ಬಿದ್ದು ಹೊರಳುತ್ತಳುತ್ತಗಲಲಾವಿದೋಳಲುತ್ತಿದ್ದು ನಿಂದಿರುತ್ತೆಲೆ ಸಂಗ ಹೋಗಿಬಂದಪೆನಯ್ಯ ತಂದೆ ನಿನ್ನ ೦ ನಂಬಿ ನಚ್ಚಿ ಹೋದಪೆನಯ್ಯ ಅಗಲಲಾತಿಂ ದೇವದೇವ ಕರುಣಿಪುದೆನುತೆ ಬಗೆ ಹೆಚ್ಚಿ ತನು ಹೆಚ್ಚಿ ಕೊಟ್ಟಂತೆ ನಿಂದಿರುತೆ ಮುಂದಿರ್ದ ಬಸವನಂ ಕಂಡು ಸಂಗಂ ಮಲಗಿ ಬಂದಪ್ಪಿ ಕಣ್ಣ ನೀರಂ ತೊಡೆದು ಮಿಗೆ ಮಲಗಿ