ಪುಟ:Kannada-Saahitya.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ರಾತ್ರಿಯಾಯಿತು. ಕಣ್ಣಪ್ಪ ಸುತ್ತಣ ಪೊದೆಗಳಲ್ಲಿ ಹುಡುಕಿ ಪುಕಲೆ ಗಳನ್ನಾ ಯ ಹೊರೆಕಟ್ಟಿ ಹೊತ್ತು ತಂದನು ; ಶಿವನಿಗೆ ಬೆಳಕು ಬೇಕೆಂದು ಮುಂದೆ ಬೆಂಕಿಯೊಟ್ಟಿದನು, ಒಟ್ಟ, “ ತಂದೇ, ನೀನಿನ್ನು ನಿದ್ದೆ ಮಾಡು. ಯಾವ ದುಗುಡವೂ ಬೇಡ, ನಾನು ಕಾವಲಾಗಿರುತ್ತೇನೆ. ಭಯಪಡಬೇಡ !! ಎಂದು ಶಿವನನ್ನು ನಿದ್ದೆ ಮಾಡಿಸಿದನು. ಆಮೇಲೆ ಮೆಲ್ಲನೆ ದೇವಾಲಯದ ಹೊರಕ್ಕೆ ಬಂದು ಸದ್ದು ಮಾಡುತ್ತಿದ್ದ ಹಕ್ಕಿಗಳನ್ನೆಲ್ಲ ಎಬ್ಬಿಸಿ ಓಡಿಸುವನು. “ಸದ್ದಿನಿಂದ ನಿದ್ದೆಗೆಟ್ಟರೆ ನನ್ನವನಿಗೆ ನಾಳೆ ಸರಿಯಾಗಿ ಹಸಿವಾಗುವುದಿಲ್ಲ. ಹಸಿವಿಲ್ಲದೆ, ಏನೂ ಉಣ್ಣದೆ ಹಾಗೇ ಇದ್ದು ಬಿಡುತ್ತಾನೆ” ಎಂದುಕೊಂಡು ಸುತ್ತ ಕಣ್ಣಿಟ್ಟು ನೋಡುತ್ತಿರುವನು. ಅಲ್ಲಿ ಬಂದ ಮೃಗಗಳನ್ನೆಲ್ಲ ದಿಕ್ಕು ದಿಕ್ಕಿಗೂ ಚೆದರಿ ಓಡುವಂತೆ ಹೊಡೆದಟ್ಟುವನು. ಹಕ್ಕಿಗಳ ನುಣ್ಣನಿಗಳನ್ನೂ ನಿಲ್ಲಿಸಿಬಿಡುವನು. ಒಳಕ್ಕೆ ಬಂದು ಶಿವ ನಿದ್ದೆ ಮಾಡುತ್ತಿರುವನೋ ಇಲ್ಲವೋ ಎಂದು ಆಲಿಸುವನು. ಬಳಿಕ ಹೊರಹೊರಟು ಹೊರದನಿಗಳನ್ನಾಲಿಸುವನು, ತಿರುಗಿ ಒಳಹೊಕ್ಕು ಉಸಿರನ್ನಾಲಿಸಿ, ( ಪಾಪ, ಬಳಲಿದ್ದಾನೆ, ನಿದ್ದೆ ಮಾಡಪ್ಪ ಎನ್ನು ವನು. ಹೀಗೆ ಒಳಕ್ಕೂ ಹೊರಕ್ಕೂ ಓಡಾಡುತ್ತ ಶಿವನ ನಿದ್ದೆಗೆ ಭಂಗ ಬರದಂತೆ ಕಾವಲು ಕಾಯುವುದರಲ್ಲಿ ಬೆಳಗಾಗುವವರೆಗೂ ಎಚ್ಚತ್ತಿದ್ದು ಜಾಗರಣೆ ಮಾಡಿದನು. ಬೆಳಗಾಗಿ ಶಿವನು ಉಪ್ಪವಡಿಸಲು ನೋಡಿ ನಲಿದಾಡಿದನು. “ ನಿದ್ದೆ ತಿಳಿದೆದ್ದೆಯಾ, ಎನ್ನ ವನೇ ? ಹಸಿದೆಯಯ್ಯಾ, ಹೊಸ ಮಾಂಸವನ್ನು ತರಲು ಹೋಗುತ್ತೇನೆ. ನನ್ನ ವನೇ ಬಲು ಬೇಗ ಬಂದುಬಿಡುತ್ತೇನೆ, ನೋಡು. ನಿನ್ನಾಣೆ, ತಡಮಾಡುವುದಿಲ್ಲ. ನಾನೊಂದು ಕಡೆಯೂ ನಿಲ್ಲುವುದಿಲ್ಲ” ಎಂದು ಸಂತಯಿಸಿ ಹೊರಹೊರಟನು. ಪ್ರೀತಿ ಉಕ್ಕಿ ಬಂತು, ಬಿಟ್ಟು ಹೋಗಲು ಮನಸ್ಸು ಯಾಡತೊಡಗಿತು. ಎರಡು ಮೂರು ಹೆಜ್ಜೆ ಇಟ್ಟು, ತಿರುಗಿ ಬಂದು, “ ಎನ್ನವನೇ, ಚಿಂತೆ ಮಾಡಬೇಡ, ಇಗೋ, ಈಗ ಬಂದು ಬಿಡುತ್ತೇನೆ ನೋಡು ” ಎಂದು ಸಮಾಧಾನ ನುಡಿಯುವನು, ಆಪ್ಪಿ, ಮುದ್ದಾಡಿ ಕೊಂಡಾಡುವನು. ಅಗಲಲಾರದೆ ಅಲ್ಲಿ ಇರಲೂ ಆರದೆ ಸಂಕಟಪಡುವನು. ಅವನ ಸ್ನೇಹ ಎಷ್ಟೆಂದು ಹೇಳೋಣ ! ಕಡೆಗೆ ಹೇಗೋ ಮನಸ್ಸು ಬಿಗಿ ಹಿಡಿದುಕೊಂಡು ಹೊರಹೊರಟನು. ತಿರುತಿರುಗಿ ಹಿಂದೆ ನೋಡುತ್ತಲೇ