ಕೊಡಲು ಅವರು ಸಂತೋಷದಿಂದಲೇ ಒಪ್ಪಿದರು. ಹಾಗೆ ಕಮಲಾ ಮುಂಬಯಿಗೆ
ಬಂದು ಶಿವಮೂರ್ತಿಯ ಕಂಪನಿಯ ನೌಕರಿಗೆ ಸೇರಿದಳು. ನಂತರ ಎರಡು ತಿಂಗಳಲ್ಲಿ
ರಾಜು-ನೀಲಾರನ್ನೂ ಕರೆಸಿಕೊಂಡಳು.
ಅದು ಹತ್ತಾರು ವರ್ಷಗಳ ಹಿಂದಿನ ಮಾತು. ಈ ಎಲ್ಲ ದಿನಗಳಲ್ಲಿ ಏನೇನೆಲ್ಲ
ಆಗಿಹೋಯಿತು....
- *
ರಾತ್ರಿಯೆಲ್ಲ ಕಮಲಾಳ ಡಾಯರಿಯ ಪುಟಗಳೇ ಕಣ್ಣ ಮುಂದೆ ಕಟ್ಟಿದಂತಾಗಿ
ಸರಿಯಾಗಿ ನಿದ್ರೆಯಾಗದೆ ಹೋದುದರಿಂದಲೋ ಏನೋ, ಮರುದಿನ ಡ್ಯೂಟಿಗೆ
ಹೋದಾಗ ಶಶಿ ಎಂದಿನಂತೆ ಗೆಲುವಾಗಿರಲಿಲ್ಲ. ಎಂದಿನ ರೌಂಡ್ ಮುಗಿಸಿ ಆಕೆ ತನ್ನ
ಕುರ್ಚಿಯಲ್ಲಿ ಬಂದು ಕೂತಾಗ ಡಾ. ಸತೀಶ ದೇಶಪಾಂಡೆ ಬಂದು “ಗುಡ್‌ಮೋರ್ನಿಂಗ್
ಡಾಕ್ಟರ್" ಅಂದು ಆಕೆಯ ಎದುರಿನ ಕುರ್ಚಿಯಲ್ಲಿ ಕೂತ.
ಶಶಿ ಬರಿ ಮುಗುಳ್ಳಕ್ಕಳು.
ಆತನೇ ಮತ್ತೆ ಕಾಳಜಿಯ ಧ್ವನಿಯಲ್ಲಿ ಕೇಳಿದ, “ಯಾಕ ಶಶೀ.
ಸಪ್ಪಗಿದ್ದೀಯಲ್ಲ ? ರಾತ್ರಿ ಯಾದ್ದರೆ ಸೀರಿಯಸ್ ಕೇಸು ಅಟೆಂಡ್ ಮಾಡಿ
ನಿದ್ದಿಗೆಟ್ಟಿಯೇನು ? ಆರಾಮಿಲ್ದಿದ್ರ ಹಾಫ್‌ಡೇ ಲೀವ್ಹ್ ಹಾಕಿ ಸುಮ್ಮ ಹೋಗಿ
ರೆಸ್ಟ್ತಗೋ, ತಲೆನೋವಿದ್ರ ಹೇಳು, ಕಾಫೀ ತಂದಕೊಡ್ತೀನಿ. ಎರಡು ಗುಳಿಗೀ ನುಂಗಿ
ಕಾಫಿ ಕುಡದು ಇಲ್ಲೇ ರೆಸ್ಟ್ ತಗೋ, ಅಥವಾ-"
“ನನಗೇನೂ ಆಗಿಲ್ಲ ಸತೀಶ," ಆತನ ವಿಪರೀತ ಕಾಳಜಿಯ ಬಗೆಗೆ ತನಗನಿಸಿದ
ಬೇಸರವನ್ನು ಮುಚ್ಚಿಡಲು ಯತ್ನಿಸದೇ ಶಶಿ ಹೇಳಿದಳು, “ಯಾಕೋ ಬ್ಯಾಸರ ಬಂದದ
ಅಷ್ಟ."
“ಹೌದs ? ಹಂಗಾರ ಮಧ್ಯಾಹ್ನದಾಗ ಇಬ್ರೂ ಹ್ಯಾಂಗರೆ ಮಾಡಿ ಆಫ್
ತಗೊಂಡು ಪಿಕ್ಟರಿಗೆ ಹೋಗೋಣ ನಡಿ. ಏನಂತೀ ? "
“ನೋಡೋಣ, ಅನ್ನುತ್ತ ಶಶಿ ಆಕಳಿಸಿದಳು.
ಬೀ ಚಿಯರ್‌ಫುಲ್ ಡಿಯರ್, ನಾಓ. ಟೀ. ಗೆ ಹೋಗಬೇಕು ಈಗ ಬರಲಾ ?
ಬಾಯ್.*
ಸತೀಶನ ಅಗಲವಾದ ಬೆನ್ನನ್ನು ಹಿಂದಿನಿಂದ ನೋಡುತ್ತಿದ್ದಂತೆ ಬಹಳ ದಿನಗಳ
ನಂತರ ಶಶಿಗೆ ಇಂದು ಆತನ ಬಗ್ಗೆ ಪಾಪ ಅನಿಸಿತು. ಮೆಡಿಕಲ್ ಕಾಲೇಜಿನಲ್ಲಿ ಆಕೆಗಿಂತ
ಎರಡು ವರ್ಷ ಸೀನಿಯರ್ ಆಗಿದ್ದ ಬೆಳಗಾವಿಯ ಕಡೆಯ ದೇಶಪಾಂಡೆ ಮನೆತನದ
ಹುಡುಗ ಸತೀಶ. ಮೊದಮೊದಲು ಬ್ಯಾಡ್ಮಿಂಟನ್ ಆಡಲು ಶಶಿಗೆ